ಈ ಪುಟವನ್ನು ಪ್ರಕಟಿಸಲಾಗಿದೆ

ಸೂಂಟಕ್ಕೆ ಬಿಗಿದು , ಕೈಲಿ ಸೌಟು ಹಿಡಿದು , ಸೇನಾನಿಯಹಾಗೆ ನಡೆದು ಬಂದಳು. ಆದರೆ ಈ ದಿನ ಯಾರೂ ಅವಳನ್ನು ಅಷ್ಟಾಗಿ ಗಮನಿಸಲಿಲ್ಲ. ಎಲ್ಲರ ದೃಷ್ಟಿಯೂ ತುಂಗಮ್ಮನ ಮೇಲೆಯೇ ನೆಟ್ಟಿತ್ತು.

ಪಿಸುಧ್ವನಿಯಲ್ಲಿ ಜಲಜ ಎಂದಳು :

"ಈ ದಿನ ಪಾಯಸ ಮಾಡಿದಾರೆ ಅಕ್ಕ."

"ಪಾಯಸ ? ಯಾಕೆ , ಯಾವಹಬ್ಬ ಇವತ್ತು ?"

"ಇದೊಂದು ವಿಶೇಷ ಹಬ್ಬ ! ಅಭಯಧಾಮದಲ್ಲೇ ಇದನ್ನ ನಾವು ಆಚರಿಸೋದು."

"ಹಾಗಾ ?"

"ಹೂಂ. ಹಾಗೇ," ಎಂದು ಜಲಜ ಅಣಕಿಸಿದಳು. ನಿನ್ನಿಂದಾಗಿ ನಮ್ಮೆಲ್ಲರ ಬಾಯಿ ಸಿಹಿಯಾಗುತ್ತೆ ಇವತ್ತು ಅದಕ್ಕೆ ಇವರೆಲ್ಲ ಈರೀತಿ ನಿನ್ನನ್ನ ನೋಡ್ತಿದಾರೆ "

"ನನ್ನಿಂದಾಗಿ ?"

"ಹೂಂ ಅಕ್ಕ ಹೊಸಬರು ಬಂದಾಗಲೆಲ್ಲಾ ಇದೊಂದು ಪದ್ದತಿ. ಬಂದಾಕೆ ನಮ್ಮ ಪಂಗ್ತೀಲಿ ಕೊತ್ಕೊಂಡದಿನ ದೊಡ್ದಮ್ಮ ಪಾಯಸ ಮಾಡಿಸ್ತಾರೆ. ಅದರ ಜತೇಲೆ ಲೆಕ್ಚರ್ ಕೊಡ್ತಾರೆ ಅಗೋ ! ಬಂದ್ರು !"

ಸರಸಮ್ಮ ಮುಗುಳು ನಗುತ್ತಾ ಹುಡುಗಿಯರು ಊಟಕ್ಕೆ ಕುಳಿತಿದ್ದ ಹಜಾರಕ್ಕೆ ನಡೆದು ಬಂದರು.

ಹಬ್ಬದ ಊಟ ! ಪಲ್ಯ - ಕೋಸಂಬರಿ ಯಾವುದು ಇಲ್ಲಿಲ್ಲ ಮೊದಲ ಬಾರಿಗೇ ತಟ್ಟೆಗಳೊಳಕ್ಕೆ ಎರಡೆರಡು ಸೌಟು ಗೋಧಿ ಪಾಯಸ ಸುರಿಯಿತು.

ಹುಡುಗಿಯರು ತಟ್ಟೆಯನ್ನೂ ನೋಡುತಿದ್ದರು ! ದೊಡ್ದಮ್ಮನ ಮುಖವನ್ನೂ ನೋಡುತಿದ್ದರು. ದೂಡ್ದಮ್ಮ ಬಲುನಿಧಾನ - ಎಂದು ಗೊಣಗಿದವರೆಷ್ಟೊ !

ಜಲಜೆ ಅಂದಳು :

"ಇನ್ನೂ ಶುರುಮಾಡ್ತಾರೆ ದೊಡ್ಡಮ್ಮ - ಹುಡುಗೀರಾ, ಇವತ್ತು ನಮಗೆಲ್ಲಾ ಬಹಳ ಸಂತಷದ ದಿವಸ...."