ಈ ಪುಟವನ್ನು ಪ್ರಕಟಿಸಲಾಗಿದೆ

ಹುಡುಗಿಯರೂ, ಕತ್ತೆಗಳೆ ಎಂದು ಬೈದವರಿಗೆ ವ್ರತೀಕಾರ ಮಾಡು ವಂತೆಯೇ ಹಾಡುತಿದ್ದಾರೆ....

ಆ ಬಳಿಕ ನಿದ್ದೆ.

....ಬಹಳ ಹೊತ್ತಾದ ಮೇಲೆ ತುಂಗಮ್ಮನಿಗೆ ಎಚ್ಚರವಾಯಿತು. ಕಣ್ಣುಗಳು ಉರಿಯುತಿದ್ದುವು ಏಳಲು ಮನಸ್ಸಾಗಲಿಲ್ಲ.

ಬಿಸಿಲಿನ ಝಳ ಕಡಿಮೆಯಾಗಿ ಸಂಜೆಯಾದಂತೆ ತೋರಿತು.

ಇನ್ನೇನು, ಏಳಬೇಕು, ಎನ್ನುತಿದ್ದಾಗಲೆ ಲಲಿತಾ-ಜಲಜೆಯರ ಸ್ವರ ಆಫೀಸು ಕೊಟಡಿಯಿಂದ ಕೇಳಿಸಿತು.

ಎರಡು ನಿಮಿಷಗಳಲ್ಲೆ ಜಲಜ ಒಳಬಂದಳು ಆಕೆ ಬರುವುದಕ್ಕೂ ತುಂಗಮ್ಮ ಎದ್ದು ಕುಳಿತುಕೊಳ್ಳುವುದಕ್ಕೊ ಸರಿಹೋಯಿತು.

ಜಲಜ ತನ್ನ ಮಡಿಲಿನತ್ತ ಬೊಟ್ಟು ಮಾಡಿದಳು:

"ಅಕ್ಕ ನಾನೇನು ತಂದಿದೀನಿ ಹೇಳು."

"ಅದೇನೊ!" "ನಿನಗಾಗಿ ಜಲಜಾ ಏನೂ ತರೋಲ್ವಾ ಹಾಗಾದರೆ?"

ಹಿಂದೆ ಇದೇ ಮಾತನ್ನು ತಾನೆಲ್ಲೋ ಕೇಳಿದ್ದಂತೆ ತುಂಗಮ್ಮನಿಗೆ ಭಾಸವಾಯಿತು ಆದರೆ ಕೇಳಿದ್ದುದೆಲ್ಲಿ ? ತಾಯಿಯಂತೂ ಅಲ್ಲವೇ ಅಲ್ಲ.... ತಂದೆ? ವದ್ದಕ್ಕೆ? ತಮ್ಮ? ನಾರಾಯಣಮೂರ್ತಿ ? ಯಾರು-ಯಾರು ಹೇಳಿರಬಹುದು ಹಾಗೆ ?

....ಇಲ್ಲ ಹಿಂದೆ ಯಾರೂ ಹಾಗೆ ಹೇಳಿರಲಿಲ್ಲ. ಇಂತಹ ಒಲವು ಆಕೆಯ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿ ವ್ರಕಟಗೊಂಡಿತ್ತು.

"ಹೋಗಮ್ಮ. ಈ ಅಕ್ಕ ಏನೂ ಮಾತಾಡೊಲ್ಲ...."

"ಅಕ್ಕನಿಗಾಗಿ ಅದೇನು ತಂದಿದೀಯೋ ತೋರಸು"

ಜಲಜಾ ಮಡಿಲಿನಿಂದ ಆ ಪೊಟ್ವಣವನ್ನು ಹೊರತೆಗೆದಳು, ಎಣ್ಣೆಯ ತೆಳುಕಾಗದದೊಳಗೆ ಬಣ್ಣ ಬಣ್ಣದ ವೆಪ್ಪರಮೆಂಟುಗಳಿದ್ದುವು

ಜಲಜ, ಎಳೆಯ ಮಕ್ಕಳ ಉತ್ಸಾಹ ತೋರಿಸುತ್ತಾ, ತಾನು ಪೆಪ್ಪರಮೆಂಟುಗಳನ್ನು ಮಾರ್ಕೆಟನ ಬಸ್ ನಿಲ್ದಾಣದಲ್ಲಿ 'ಕೂಚ್ಮಟ್ಟೆ' ಹುಡುಗ ನೊಬ್ಬನಿಂದ ಕೊಂಡುಕೊಂಡ ಸಾಹಸವನ್ನು ಬಣ್ಣಿಸಿದಳು: