"ಸಮಾಜದ ದೇಹವನ್ನು ಹುರಿದು ತಿನ್ನುತ್ತಿರುವ ಕ್ಯಾನ್ಸರ್ ರೋಗಕ್ಕೆ
ನನ್ನ ಕಾದಂಬರಿಯೇ ರಾಮಬಾಣನೆಂದು ನಾನು ಭಾವಿಸಿಲ್ಲ. ದುಡಿಯುವ ದುಡಿಸುವ ಆರ್ಧಿಕ ಸಂಬಂಧಗಳು ಬದಲಾಗಿ, ಹೆಣ್ಣು-ಗಂಡುಗಳ ಸಂಬಂಧದಲ್ಲಿ ಬದಲಾವಣೆಯಾಗಿ, ಬದುಕಿನ ಹೊಸ ಮೌಲ್ಯಗಳು ಸ್ಥಾಪಿತವಾಗುವ ತನಕ-ಈಗಿನ ಸಮಾಜ ವ್ಯವಸ್ಥೆಯ ಪುನರ್ಘಟನೆಯಾಗುವತನಕ-'ಅಸಂಖ್ಯ ಅಭಾಗಿನಿ'ಯರ ಪ್ರಶ್ನೆ ಬಗೆಹರಿಯಲಾರವೆಂಬುದು ನನ್ನ ಅಭಿಪ್ರಾಯ.ಸಮಾಜದ ಪುನರ್ಘಟನೆಯಾದೊಡನೆಯೇ ಕಾಮ-ವ್ಯಭಿಚಾರಗಳ ಪ್ರಶ್ನೆಯೂ ಮಾಯವಾಗುವುದೆಂದು ನಾನು ಹೇಳುವುದಿಲ್ಲ ಹಾಗಾಗಲು ಹೊಸ ಮಾನವನ ಉದಯವಾಗಬೇಕು ಅದು ದೂರದ ಕನಸು...ನನ್ನ ಅವೇಕ್ಷೆ ಇಷ್ಟೆ; 'ಅಭಯ' ಸದ್ಯಕ್ಕಂತೂ ವಿಚಾರಿಗಳಾದ ಓದುಗರನ್ನು ವಿಚಾರಪರರಾಗಿ ಮಾಡಿದರೆ, ಸಹೃದಯ ಸ್ತ್ರೀ ಪುರುಷರಲ್ಲಿರುವ ಮಾನವೀಯ ಭಾವನೆಗಳನ್ನು ಮತ್ತಷ್ಟು ಸ್ಫುಟಗೊಳಿಸಿದರೆ,ನನಗೆ ಅಷ್ಟರಿಂದಲೇ ತೃಪ್ತಿ"
"ಎಲ್ಲ ಓದುಗರಲ್ಲೂ ಹಾಗಾಗಲೆಂದು ಹಾರೈಸೋಣ"
".............."
"ಆದರೆ ಇನ್ನೂ ಒಂದು ವಿಷಯ ನೀವು ಇಲ್ಲಿ ಯಾವುದಾದರೂ
ಧರ್ಮವನ್ನು ಪ್ರತಿಪಾದಿಸಿದ್ದೀರಾ?"
"ಪ್ರಚಾರ-ಎನ್ನುವ ರೀತಿಯಲ್ಲಿ ನಾನೇನನ್ನೂ ಮಾಡಿಲ್ಲ ಆದರೆ
ನಾನು ಮಾನವವಾದಿ ನನ್ನದು ಮಾನವೀಯ ದೃಷ್ಟಿ ಬದುಕನ್ನು ನೋಡುವ ಅಂತಹ ದೃಷ್ಟಿಯಿಂದಾಗಿ,ಕಾದಂಬರಿ ತನ್ನ ಸಮಗ್ರ ಸ್ವರೂಪದಲ್ಲಿ ಮಾನವೀಯ ಧರ್ಮದ ಪ್ರತಿಪಾದನೆಯಾಗಿ ತೋರಲೂಬಹುದು"
ಹೇಳಬೇಕಾದ್ದನ್ನೆಲ್ಲ ಹೇಳಿದ್ದೆ ಅವರ ಸಂದೇಹಗಳೂ ನಿವಾರಣೆ
ಯಾದುವೆಂದು, ಅವರ ಮೌನವೂ ಶಾಂತ ಮುಖಮುದ್ರೆಯೂ ಸೂಚಿಸಿದುವು.
ಆದರೂ ಇನ್ನೊಂದು ಪ್ರಶ್ನೆ ಕೇಳುವುದಕ್ಕೆ ಪೂರ್ವಭಾವಿಯಾಗಿ
ಅವರು ಮುಗುಳು ನಕ್ಕರು.
"ನಿಧಾನವಾಗಿ ಯೋಚಿಸಿ 'ಅಭಯ'ದ ಬಗೆಗೆ ನನ್ನ ಅಭಿಪ್ರಾಯವೇ
ನೆಂಬುದನ್ನು ಬರೆದು ಕೊಡಬೇಕೆಂದಿದ್ದೇನೆ"