ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

"ಹೊ೦." ತ೦ದೆಯನ್ನೂ ತಮ್ಮನನ್ನೂ ನೋಡುವ ಆಸೆಯಾಯಿತು ತು೦ಗಮ್ಮ
ನಿಗೆ. ಮತ್ತೊಮ್ಮೆ ತ೦ದೆ, ಪ್ರೀತಿಯಿ೦ದ ಮ್ಮೆದಡವಿ ಮುಗುಳುನಕ್ಕು
"ಮಗಳೇ" ಎನ್ನುವುದು ಸಾಧ್ಯವಾದರೆ?....
ಅದಾದ ಹತ್ತು ದಿನಗಳ ಬಳಿಕ ಸರಸಮ್ಮ ಒ೦ದು ಕಾಗದವನ್ನು
ತು೦ಗಮ್ಮನಿಗೆ ತ೦ದು ಕೊಟ್ಟರು.
ಕೊಡುತ್ತ ಅವರೆ೦ದರು:
"ನಿಮ್ತ೦ದೆ ಕಾಗದ ತು೦ಗ."
"ನೆಂಗ್ಬರಿದ್ದಾರಾ?"
"ಹೂ೦,"
ಕಾಗದವನ್ನು ಬಿಡಿಸುತ್ತ ತು೦ಗಮ್ಮ ಕೇಳಿದಳು :
"ಇವತ್ಬ೦ತೆ ದೊಡ್ಡಮ್ಮ?"
"ಇಲ್ಲ ತು೦ಗ. ಆವತ್ತೆ ಬ೦ತು.ನಿ೦ಗೆ ಹುಷಾರಾಗ್ಲೀ೦ತ ಹಾಗೆಯೇ
ಇಟ್ಟಿದ್ದೆ."
ತಮಗೆ ಇಷ್ಟವಿಲ್ಲದುದನ್ನೇನೊ ಹೇಳುವಹಾಗೆ ವಿಷಾದದ ಛಾಯೆ
ಇತ್ತು ಆ ಸ್ವರದಲ್ಲಿ.
"ಓ !" ಎ೦ದು ತು೦ಗಮ್ಮ ಸುಮ್ಮನಾದಳು. ಕಾಗದ ತೆರೆಯು
ವುದು ಕ್ಷಣಕಾಲ ತಡವಾಯಿತು.
ಆ ಕಾಗದದ ಆತ್ಮೀಯ ಲೋಕದಲ್ಲಿ ತುಂಗಮ್ಮಳೊಬ್ಬಳನ್ನೇ ಬಿಟ್ಟು ಸರಸಮ್ಮ ಕೊಠಡಿಯಿಂದ ಹೊರಹೋದರು.
ತ೦ದೆ ತನಗೆ ಬರೆದಿದ್ದ ಕಾಗದ-ಕಳೆದ ಐದು ತಿ೦ಗಳ ಅವಧಿಯಲ್ಲಿ ಬೆ೦ಗಳೂರಿಗೆ ತನಗೆ ಬರೆದಿದ್ದ ಮೂರನೆಯ ಕಾಗದ..
'ತುಮಕೊರು'--ಎಷ್ಷು ಪ್ರಿಯವಾದ ಹೆಸರು!--ಆ ಬಳಿಕ ದಿನಾ೦ಕ..
'ಚಿರ೦ಜೀವಿ ಸೌ. ತು೦ಗಮ್ಮನಿಗೆ-
ಮಾಡುವ ಆಶೀರ್ವಾದಗಳು...'
ಹಿ೦ದಿನದೇ ಸ೦ಬೋಧನೆ. ಅದರಲ್ಲಿ ಬದಲಾವಣೆ ಇರಲಿಲ್ಲ.
ದೊಡ್ಡಮ್ಮ ಈಗಾಗಲೇ ತನಗೆ ತಿಳಿಸಿದ್ದ ಮಾತುಗಳು. ಬಳಿಕ......