ಅಭಯ
ಹೇಳಬೇಕೊ ಬೇಡವೊ. ಗೇಲಿಮಾಡಿದರೂ ಏನಂತೆ? ಕಿವಿಗೊಟ್ಟು
ಕೇಳುವವರು ಸುಲಭವಾಗಿ ದೊರೆಯುವಾಗ-.... ಆದರೆ ಈ ತುಂಗಕ್ಕ....
ಜಲಜ ಕತೆ ಆರಂಭಿಸಬೇಕೆಂದು ತೀರ್ಮಾನಿಸಿದಾಗಲೇ ಸರಸಮ್ಮ ಒಳ ಬಂದರು. ಇದರಿಂದ ಜಲಜೆಗೆ ಕ್ಸಣ ಕಾಲ ಅಸಮಾದಾನವೆನಿಸಿದರೂ ದೊದ್ಡಮ್ಮನನ್ನು ಕಂಡು ಮುಗುಳ್ನಕ್ಕ ತುಂಗಕ್ಕನ ಮುಖ ನೋಡಿದಾಗ ಸಮಾದಾನವೆನಿಸಿತು.
"ತುಂಗೆಗೆ ಚಂದಮಾಮ ಕತೆ ಹೇಳ್ತಿದ್ಯೇನೇ?"
-ಎಂದು ಸರಸಮ್ಮನೂ ಜಲಜೆಯನ್ನು ಕುರಿತು ನಗೆಯಾಡ
ಬೇಕೆ|.... ಅದು ಅವಮಾನವಲ್ಲ, ಗೌರವನೆಂದೇ ನಂಬಿ, ಜಲಜಾ ಎದ್ದು
ನಿಂತಳು.
ಆಕೆಗಾಗಿ ಹೊರಗೆ ಒಂದು ಕೆಲಸ ಕಾದಿತ್ತು.
"ಮೆಟ್ಟುಗತ್ತಿ ತಾಕಿ ಆಲಮೇಲು ಕೈ ಬೆರಳು ಸ್ವಲ್ಪ ಕುಯ್ದು ಹೋಗಿದೆ. ಬೇಗ್ನೆ ಒಂದಿಶ್ಟು ಅಯಡಿನ್ ಹಾಕಿ ಬಟ್ಟೆ ಚೂರು ಸುತ್ತು ಜಲಜಾ."
"ಹೂಂ ದೊಡ್ಡಮ್ಮ ."
ಜಲಜ ಗಂಭೀರಳಾಗಿ, ಕರ್ತವ್ಯ ನಿಶ್ಟೆಯ ಪ್ರತಿಮೂರ್ತಿಯಾಗಿ,
ಹೊರ ಹೋದಳು.
ಸರಸಮ್ಮ ಅವಸರದಲ್ಲಿ ಇದ್ದ ಹಾಗಿತ್ತು. ಅಭಯದಾಮದಿಂದ ಹೊರಹೋಗುವಾಗ ಉಟ್ಟುಕೊಳ್ಳುವ ಸೀರೆಯನ್ನು ಅವರು ಹುಟ್ಟಿದ್ದರು.
"ಹೊರಹೋಗ್ತೀರಿ ಅಲ್ವೆ ದೊಡ್ಡಮ್ಮ?"
"ಸೀರೆ ನೋಡಿಯೇ ತಿಳಕೊಂಬಿಟ್ಯಲ್ಲೇ| ಹೂಂ, ಕಮಿಟ
ಮಾಟಂಗಿದೆ. ಹೋಗ್ಬರ್ತೀನಿ"
ಹಾಗೆಂದರೇನೆಂದು ತುಂಗಮ್ಮನಿಗೆ ಅರ್ತವಾಗಲಿಲ್ಲ.
"ಕಮಿಟ ಮೀಟಿಂಗ್ ಅಂದ್ರೆ?"
"ಅಭಯದಾಮದ ಸಮಿತಿ ಇಲ್ವೆ? ಅದರ ಸಭೆ."
"ಓ| ದೊಡ್ಡ ಸಭೇನಾ?"
"ಹೌದು ಮತ್ತೆ|"