ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೫೫

ಅದು ಸುಳ್ಳಾಗಿತ್ತು. ಆದರೆ ಒಳ್ಳಿತಿಗಾಗಿ ಒಮ್ಮೊಮ್ಮೆ ಸುಳ್ಳು
ಹೇಳುವುದು ಅವಶ್ಯವೆಂಬುದನ್ನು ಅನುಭವದಿಂದ ಅವರು ಕಂಡು ಹಿಡಿದಿ
ದ್ದರು. ವಾಸ್ತವವಾಗಿ,ಆಡಳಿತ ಸಮಿತಿಯಲ್ಲಿರುವ ಹನ್ನೊಂದು ಜನರಲ್ಲಿ
ಎಲ್ಲರೂ ಪ್ರತಿಸಾರೆಯೂ ಸಭೆಗೆ ಬರುತ್ತಿರಲಿಲ್ಲ.ಎಷ್ಟೋ ಸಾರಿ 'ಕ್ವೋರಂ'
ಇರುತ್ತಿರಲಿಲ್ಲ. ಮತ್ತೆಷ್ಟೋ ಬಾರಿ,ಕಾರ್ಯದರ್ಶಿನಿ ಮತ್ತು ಸರಸಮ್ಮ
ಕುಳಿತು, ತುರ್ತಿನ ತೀರ್ಮಾನಗಳನ್ನು ರೂಪಿಸಿ ಬರೆದಿಟ್ಟು, ಇತರ ಸದಸ್ಯ
ರಿಗೆ ಕಳುಹಿಸಿಕೊಟ್ಟು ಸಹಿ ಪಡೆಯುತಿದ್ದರು. ಆದರೆ ನಿಜಸ್ತ್ತಿತಿಯನ್ನು
ಎಂದೂ ಅಭಯಧಾಮದ ಹುಡುಗಿಯರಿಗೆ ಹೇಳುವಂತಿರಲಿಲ್ಲ. ಹಾಗೆ
ಹೇಳಿದರೆ, ಅಭಯದಾಮದ ಆಡಳಿತದಲ್ಲಿ ಅವರಿಗಿರುವ ನಂಬುಗೆ ಖಂಡಿತ
ವಾಗಿಯೂ ಶಿದಿಲವಾಗುತಿತ್ತು.ದೊಡ್ಡಮ್ಮ,ಹೆಚ್ಚು ಕಡಿಮೆ ವಾರಕ್ಕೊಮ್ಮೆ
ಮಿಟಿಂಗಿಗೆ ಹೋಗುವ ವಿಷಯ ಅಭಯದಾಮದ ಪ್ರತಿಯೊಬ್ಬರಿಗೂ
ತಿಳಿದಿದ್ದುದೇ.ಆ ಮಿಟಿಂಗು ಭಾರೀ ಸಭೆಯೆಂದೊ ಅಲ್ಲಿ ದೊಡ್ಡಮ್ಮ,
ತಮ್ಮೆಲ್ಲರ ಜವಾಬ್ದಾರಿ ಹೊತ್ತ್ ಪ್ರತಿನಿದಿಯಾಗಿ,ಪಾಯಸದೊಟವಿದ್ದ
ದಿವಸ ಮಾಡುವ ಭಾಷಣಕ್ಕಿಂತಲೂ ದೊಡ್ಡ ಭಾಷಣವನ್ನು ಕೊಡುವ
ರೆಂದೂ ಹುಡುಗಿಯರ ಕಲ್ಪನೆಯಾಗಿತ್ತು.ಅಂತಹ ಕಲ್ಪನೆಗೆ ಆದಾರ
ಒದಗಿಸುವುದು ಮೂಲಕ ಅಭಯದಾಮದ ಹಿರಿಮೆ ಹೆಚ್ಚುತ್ತದೆಂಬುದನ್ನೂ
ಸರಸಮ್ಮ ಅನುಭವದಿಂದ ಅರಿತಿದ್ದರು.

ತುಂಗಮ್ಮನ ಮುಂದೆಯೂ ರೂಪುಗೊಂಡಿತು ಕಮಿಟಿಮಿಟಿಂಗಿನ
ಚಿತ್ರ. ಆ ಸಭೆಗೆ ತನ್ನ ಬದುಕನ್ನು ಬಿಗಿದ ಕೊಂಡಿ ಯಾವುದೆಂದು ತಿಳಿ
ಯಲು ಆಕೆ ಬಯಸಿದಳು.

"ಮಿಟಿಂಗ್ನಲ್ಲಿ ಇಲ್ಲಿಯ ಹುಡುಗೀರ ವಿಷಯವೆಲ್ಲಾ ಚರ್ಚೆಮಾಡ್ತೀ
ರೀಂತ ಜಲಜ ಅಂತಿದ್ಲು,ಹೌದೆ ದೊಡ್ಡಮ್ಮ?"

"ಹೌದು.

"ತನ್ನ ವಿಷಯವೂ ಅಲ್ಲಿ ಚರ್ಚೆಯಾಗುವುದು ಹಾಗಾದರೆ. ಒಮ್ಮೆಲೆ
ಆ ಸಭೆ,ತುಂಗಮ್ಮ ಸಿನಿಮಾದಲ್ಲಿ ಕಂಡಿದ್ದ ನ್ಯಾಯಾಸ್ಥಾನವಾಗಿ
ಮಾರ್ಪಟ್ಟಿತು. ಯಾವ ರೀತಿ ತನ್ನ ಬಗೆಗೆ ಅಲ್ಲಿ ಮಾತುಗಳು
ಬರುವುವೂ?