ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೬೯

ಅನುಕೂಲತೆಯೂ ಇರಲಿಲ್ಲ. ವಾರಕ್ಕೊಬ್ಬಳು ಹುಡುಗಿಯಾದರೂ ತಪ್ಪಿಸಿ ಕೊಂಡು ಓಡಿಹೋಗುತಿದ್ದಳು. ಅದಕ್ಕೆ ಕಾರಣ, ದೇಹಕ್ಕಂಟದ ಚಟವಲ್ಲ; ತುಂಬದೇ ಇದ್ದ ಹೊಟ್ಟೆ....ಆ ಬಳಿಕ ಆಡಳಿತ ಸಮಿತಿ ಬದಲಾಯಿತು. ಅನಾಮಧೇಯರೊಬ್ಬರು ಹೊಸಕಟ್ಟಡಕ್ಕಾಗಿ ಇಪ್ಪತೈದು ಸಾವಿರ ರೂಪಾಯಿಯ ಸಹಾಯಧನವನ್ನಿತ್ತರು. ಸಮಿತಿಯ ಕಾರ್ಯದರ್ಶಿನಿಗೆ ಈ ಕೆಲಸ ಸ್ವಯಂಪ್ರತಿಷ್ಠೆಯನ್ನು ಬೆಳೆಸುವ ಸಾಧನವಾಗಿರಲಿಲ್ಲ. ಮತ ಪ್ರಸಾರಕರೂ ನಾಚುವಹಾಗೆ ಆಕೆ ವತಿತೆಯ ಉದ್ಧಾರಕ್ಕಾಗಿ ದುಡಿದರು.

ಆ ರೀತಿ ಎಷ್ಟು ಉದ್ದಾರವಾಯಿತೆನ್ನುವ ಮಾತು ಬೇರೆ ಎಷ್ಟೋ ವೇಳೆ ಸರಸಮ್ಮನಿಗೆ ನಿರಾಶೆ-ನಿರುತ್ಸಾಹಗಳುಂಟಾಗುತಿದ್ದುವು. ಆದರೂ ತಾವು ಮಾಡುತಿದ್ದುದು ಒಳ್ಳೆಯ ಕೆಲಸವೆಂಬ ಅವರ ವಿಶ್ವಾಸ ಅಚಲ ವಾಗಿತ್ತು.

ಸರಸಮ್ಮನ ತಲೆಗೂದಲೆಲ್ಲ ಬಿಳಿಯಾದುದು ಆ ಬದುಕಿನಲ್ಲೆ. ಎಷ್ಟೊಂದು ಜನಕ್ಕೆ ಅವರು ದೊಡ್ಡಮ್ಮನಾಗಿರಲಿಲ್ಲ!....ಕಾಹಿಲೆ ಬಿದ್ದು ನರಳಿದ ಮೇಲೂ ಅದೇ ಕೊಂವೆಗೆ ಓಡಿ ಹೋದವರು, ಕ್ರಮಬದ್ಧ ಜೀವ ನಕ್ಕೆ ಒಳಗಾಗಲಾರದೆ ಪ್ರತಿಭಟಿಸಿ ತಪ್ಪಿಸಿಕೊಂಡವರು, ಮದುವೆಯಾಗಿ ಹೋದಮೇಲೂ ಹಳೆಯ ಜೀವನಕ್ಕೆ ಹಿಂದಿರುಗಿದವರು ಹಲವರಿದ್ದರೂ ಸರಿಯಾದ ಹಾದಿಯಲ್ಲೆ ಸಾಗಿ ಮನುಷ್ಯ ಜೀವಿಗಳು ಎನ್ನಿಸಿಕೊಂಡವರ ಸಂಖ್ಯೆಯೇನೂ ಕಡಿಮೆಯಾಗಿರಲಿಲ್ಲ. ಅಂಥವರನ್ನು ನೆನೆಸಿಕೊಂಡಾಗ ಸರಸಮ್ಮನಿಗೆ ಸಮಾಧಾನವೆನಿಸುತಿತ್ತು....

ಆ ಸೂರ್‍ಯಕಾಂತಿ ಹೂ—ಹೂದೋಟ..

ಹಿಂದೆ ಅಭಯಧಾಮವಿದ್ದ ಕಟ್ಟಡದಲ್ಲಿ ಹೂದೋಟವಿರಲಿಲ್ಲ. ಹೂ ಹೋಗಲಿ, ಒಂದು ತುಳಸಿ ಕಟ್ಟೆಯೂ ಇರಲಿಲ್ಲ ಈಗಿನದು, ಈಗ ಎಂಟು ವರ್ಷಗಳ ಹಿಂದೆ ಸಿದ್ದವಾದ ಹೊಸಕಟ್ಟಡ. ಅದರ ನಿರ್ಮಾಣದಲ್ಲಿ ಸರಸಮ್ಮ ಬಹಳ ಆಸಕ್ತಿ ವಹಿಸಿದ್ದರು.... ಆಗ ಪತ್ರಿಕೆಗಳು ವರದಿ ಮಾಡಿದ ಹಾಗೆ 'ದಿವಾನರ ಪತ್ನಿಯವರ ಅಮೃತ ಹಸ್ತದಿಂದಲೇ' ಅಭಯಧಾಮದ ಹೊಸಕಟ್ಟಡದ ಉದ್ಘಾಟನೆಯಾಯಿತು.

ಹೊಸಕಟ್ಟಡದೊಡನೆ ಆರಂಭವಾದುದು ಹೊಸ ಅಧ್ಯಾಯ.