ಈ ಪುಟವನ್ನು ಪರಿಶೀಲಿಸಲಾಗಿದೆ

ಊಟಕ್ಕೆ ಕುಳಿತಾಗ ಕಲ್ಯಾಣಿ ಬಂದು ಗಲಾಟೆ ಮಾಡಿದಳು.
'ಇವತ್ತಾದರೂ ಹೇಳೆ-ಹೇಳೆ'
-ಎನ್ನುವಂತಿತ್ತು ಜಲಜೆಯ ಎದರ ಆಕೆ ಮಾಡಿದ ಸದ್ದು-ಅಭಿನಯ.
"ಏನಂತೆ ಅವಳಿಗೆ ?"
-ಎಂದು ತುಂಗಮ್ಮ ಕೇಳಿದಳು. "ಅದೇ-ತಟ್ಟೆಯ ವಿಷಯ."
ತುಂಗಮ್ಮನ ಹುಬ್ಬು ಗಂಟಿಕ್ಕಿತು. ಎಷ್ಟೊಂದು ಸಮಯದಿಂದ ಅದೇನೆಂದು ಹೇಳದೆ ಸತಾಯಿಸುತ್ತ ಬಂದಿದ್ದಳು ಆ ಜಲಜ !
"ಹೋಗಲಿ, ಹೇಳು !"
ಜಲಜ ನಗುವನ್ನು ತಡೆಯತ್ತಾ ಅಂದಳು :
"ಹಿಂದೆ ಕಮಲಾಕ್ಷೀಂತ ಒಬ್ಬಳಿದ್ಲು."
"ಹೂಂ."
"ಅವಳಿಗೆ ಮದುವೆಯಾಗಿ ಹೊರಟ್ಹೋದ್ಲು"
"ಅದಕ್ಕೆ-?"
"ಆ ಮೇಲೆ ವಿಶಾಲಾಕ್ಷೀಂತ ಒಬ್ಳು ಬಂದ್ಲು."
"ಹೂಂ."
"ಅವಳೂ ಮದುವೆಯಾಗಿ ಹೋದ್ಲು"
"ಆಗಲಿ ಅವರ ಮದುವೆಗೂ ಈ ತಟ್ಟೆಗೂ ಸಂಬಂಧ ?"
"ಅವರಿಬ್ಬರೂ ನಿನ್ನ ಈ ತಟ್ಟೇಲೆ ಊಟಮಾಡಿದ್ದು."
ತುಂಗಮ್ಮನ ಮುಖ ಕೆಂಪಗಾಯಿತು. ನಗುತ್ತ ಜಲಜ ಅಂದಳು :
"ಈ ತಟ್ಟೇಲಿ ಊಟ ಮಾಡ್ದೋರೆಲ್ಲಾ ಮದುವೆಯಾಗಿ ಹೋಗ್ತಾರೆ ಅಕ್ಕ !"
"ಥೂ !"
ತುಂಗಮ್ಮ-ಜಲಜೆಯರ ಸಂಭಾಷಾಣೆಯನ್ನೆ ಈಕ್ಷಿಸುತಿದ್ದ ಕಲ್ಯಾಣಿ ಬಿದ್ದು ಬಿದ್ದು ನಕ್ಕಳು.