ಈ ಪುಟವನ್ನು ಪರಿಶೀಲಿಸಲಾಗಿದೆ

೨೦೨

ಅಭಯ

ಹೀಗಾಗಿತ್ತು ಒಂದೆರೆಡುಸಲ ನಡುರಾತ್ರೆ ಇಬ್ಬರು ಮೂವರು ಹುಡುಗಿಯರನ್ನು ಕರೆದುಕೊಂಡು ಬಂದಿದ್ದರು ಪೋಲೀಸರು. ಪುಸ್ತಕದಲ್ಲಿ ಸಹಿ ಮಾಡಿರಲಿಲ್ಲ
ಮರುದಿನ ಬೆಳಿಗ್ಗೆ ಅವರಲ್ಲಿ ಯಾವನಾದರೂ ಪೋಲೀಸಿನವನು ಬಂದು, ಹುಡುಗಿಯರನ್ನು ವಾಪಸು ಕೇಳುತಿದ್ದ.
"ಇವರ್‍ನೇನು ಮಾಡೀರಪ್ಪ?"
-ಎಂದು ದೊಡ್ದಮ್ಮ ಕೇಳುತಿದ್ದರು.
"ಸ್ಟೇಷನಿಗೆ ಕರಕೊಂಡು ಹೋಗಿ, ಅಲ್ಲಿಂದ ಕೋರ್ಟಿಗೆ ಸಾಗಿಸಿ ನ್ಯಾಯಾಧೀಶರ ಮುಂದೆ ಹಾಜರ್‍ಮಾಡ್ತೀವಿ"
"ಅಲ್ಲೇನಾಯ್ತೂಂತ ನೀವು ಸ್ವಲ್ಪ ಬಂದು ತಿಳಿಸ್ಬೇಕು"
"ಆಗಲಿ ಅಮ್ಮ."
ಆದರೆ ಏನಾಯಿತೆಂದು ತಿಳಿಸಿದವರು ಯಾರೂ ಇಲ್ಲ. ಎಷ್ಟೋವೇಳೆ ಅಂಥ ಹುಡುಗಿಯರು ನ್ಯಾಯಧೀಶರಿಂದ ವಿಚಾರಣೆಗೆ ಗುರಿಯಗುವುದಿತ್ತು. ಇನ್ನೆಷ್ಟೋವೇಳೆ, ಹುಡುಗಿಯರು ಹೊರಬಂದು ಅಭಯಧಾಮದ ದೃಷ್ಟಿಯಿಂದ ಮರೆಯಾದೊಡನೆ ಆ ಪೋಲೀಸರೇ ಶಿಕ್ಷೆ ವಿಧಿಸುತಿದ್ದರು.
ಅಂತಹ ಶಿಕ್ಷೆ, ಆ ಹುಡುಗಿಯರ ಇರುವಿಕೆ ರೂಪ-ಲಾವಣ್ಯಗಳನ್ನು ಅವಲಂಬಿಸುತಿತ್ತು. ಒಮ್ಮೊಮ್ಮೆ, ಆ ಹುಡುಗಿಯರಲ್ಲಿದ್ದ ಆಭರಣಗಳನ್ನಾಗಲೀ ದುಡ್ಡುದುಗ್ಗಾಣಿಯನ್ನಾಗಲೀ ಪೋಲೀಸರು ಕಿತ್ತುಕೊಳ್ಳುತಿದ್ದರು. ಅಧವಾ-ಅಧವಾ-......ಪೋಲೀಸರು ಹೇಳಿದಲ್ಲಿಗೆ ಹೋಗಿ ಒಂದೆರಡು ರಾತ್ರೆಗಳನ್ನು ಅವರು ಕಳೆಯಬೇಕಾಗುತಿತ್ತು.
"ಥೂ!"
-ಎಂದಳು ತುಂಗಮ್ಮ, ಜಲಜೆಯಿಂದ ಆ ವಿಷಯವನ್ನು ಕೇಳಿ ತಿಳಿಯುತಿದ್ದಾಕೆ.
"ಇದನ್ನೆಲ್ಲ ನೋಡಿ ಡೊಡ್ಡಮ್ನಿಗೆ ಬೇಜಾರಾಗಿದೆ ತುಂಗಕ್ಕ."
"ಬೇಜಾರಾಗ್ದೆ ಇದ್ದೀತೆ? ಎಷ್ಟೊಂದು ಕೆಟ್ಟವರು!"
"ಅಲ್ದೆ ಅವರು ಹಿಡಕೊಂಡು ಬರೋದು ಕೂಡಾ ಎಂಥವರ್‍ನ