ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯಧಾಮದ ಹುಡುಗಿಯರೆಲ್ಲ, ತುಂಗಮ್ಮ - ಜಲಜ - ಲಲಿತೆ

ಯರ ನೇತೃತ್ವದಲ್ಲಿ ಕನಕಲಕ್ಷಮ್ಮನನ್ನು ಬೀಳ್ಕೊಟ್ಟರು.

ಮದುವೆಯಾದ ಹುಡುಗಿ ಗಂಡನ ಮನೆ ಸೇರಿದಳು.

ಮದುವೆಗೆ ಸರಸಮ್ಮನ ಜತೆಯಲ್ಲಿ ಹೋಗಿದ್ದವಳು ಜಲಜ, ಆಕೆಯ ಸ್ವಾರಸ್ಯಪೂರ್ಣವರದಿಯನ್ನು ಕೇಳಿಹಿಡುಗಿಯರು ಬಿದ್ದು ಬಿದು ನಕ್ಕರು.

ಸಂತೋಷ ಚಿತ್ತಳಾಗಿದ್ದ ತುಂಗಮ್ಮನಿಗೆ ಆರಾತ್ರೆ ಬಹಳ ಹೊತ್ತು ನಿದ್ದೆ ಬರಲಿಲ್ಲ, ಆಯಾಸದಿಂದ ಬಳಲಿದ್ದ ಸರಸಮ್ಮ ಮತ್ತು ಜಲಜ ಬಲು ಬೇಗನೆ ನಿದ್ದೆ ಹೋದರು.

ಜಗಲಿದೀವದ ಬೆಳಕಿನ ಕೆಳಗೆ ಕುಳಿತು ತುಂಗಮ್ಮ ತನ್ನ ತಂದೆ ಗೊಂದು ಕಾಗದ ಬರೆದಳು.

ಆ ಒಂದು ವಾರವೆಲ್ಲ, ತಾನು ಉವಾಧಾಯಿನಿಯಾದ ಬಳಿಕ, ಆಕೆ ಬರೆದೇ ಇರಲಿಲ್ಲ.

ಸಣ್ಣಪುಟ್ಟ ಘಟನೆಗಳೆಲ್ಲ ದೊಡ್ಡ ಆಕೃತಿ ತಳೆದುವು ಈಗ ವಾಕ್ಯಗಳು ಬೆಳೆದು ಪುಟಸಂಖ್ಯೆ ಹೆಚ್ಚಾಯಿತು. " ಇವತ್ತು ಕನಕಲಕ್ಷಮ್ಮ ಅಂತ ನಮ್ಮ ಒಬ್ಬಳು ಹುಡುಗಿಗೆ ಮದುವೆ ಯಾಯ್ತು, ನಿರ್ಗತಿಕಳಾಗಿದ್ದ ಒಬ್ಬಳು ಹುಡುಗಿ ಈದಿನ ಗಂಡನ ಮನೆ ಸೇರಿದಳು...ಮುದಿನ ತಿಂಗಳು ಸಂಬಳ ಬಂದಮೇಲೆ ಅವಳಿಗೊಂದು ಉಡುಗೊರೆ ಕಳುಹಿಸಕೊಡಬೇಕೆಂದಿದ್ದೇನೆ. ಕೊಡಲೆ ಅಣ್ಣ?"