ಈ ಪುಟವನ್ನು ಪ್ರಕಟಿಸಲಾಗಿದೆ

ದರೆ!"... ಆ ಕತ್ತಲು ಈಗ ಬಂದಿತ್ತು. ಯಾರಾದರೂ ನೋಡಿ ಗುರುತಿಸಬಹುದೆಂಬ ಭಯವಿಲ್ಲ ಈಗ. ಆದರೆ, ಯಾರಾದರೂ ತನ್ನ ಮೇಲೆ ಈ ಕತ್ತಲಲ್ಲಿ ಕೈ ಮಾಡಿದರೆ-? ಅದು ಆಕೆಯನ್ನು ಕಾಡಿದ ಹೊಸ ಭೀತಿ....

ಭೀತಳಾದ ತುಂಗಮ್ಮ ಬೇಗ ಬೇಗನೆ ಹೆಜ್ಜೆ ಇಟ್ಟಳು. ಹೆಜ್ಜೆ

ಹೆಜ್ಜೆಗೂ ಆಯಾಸ ಹೆಚ್ಚುತ್ತಿತ್ತು

ಯಾರು ಯಾರೋ ಬರುತಿದ್ದರು ಎದುರುಗಡೆಯಿಂದ. ಕೆಲವರ

ತಲೆಯ ಮೇಲೆ ಮಕ್ಕರಿ-ಹಾರೆ. ಅವರು, ದುಡಿದು ಬಡ ಮನೆಗಳಿಗೆ ಹಿಂತಿರುಗುತಿದ್ದ ಜೀತದ ಜೀವಿಗಳು.

ತುಂಗಮ್ಮನ ಹಿಂಬದಿಯಿಂದಲೂ ಯಾರೋ ಬಂದು ಆಕೆಯನ್ನು

ಹಿಂದಿಕ್ಕಿ ಮುಂದೆ ಸಾಗುತ್ತಿದ್ದರು.

ಅವರೆಲ್ಲ ಆಕೆಯನ್ನು ನೋಡದೆ ಇರುತಿರಲಿಲ್ಲ. ಮಬ್ಬುಗತ್ತಲಿ

ನಲ್ಲೂ ಆ ದೃಷ್ಟಿಗಳನ್ನು ಅರ್ಥಮಾಡಿಕೊಳ್ಳಲು ತುಂಗಮ್ಮ ಸಮರ್ಥಳಾಗಿದ್ದಳು. ಯಾವ ಭಾವನೆಯೂ ಇಲ್ಲದ ಬಳಲಿದ ನೋಟ; ಕುತೂಹಲ; ತಿಳಿವಳಿಕೆ; ಜತೆಯಲ್ಲೆ ಇನ್ನೊಂದು_ಕಬಳಿಸ ಬಯಸುವ ಹಸಿದ ದೃಷ್ಟಿ....ತಾನು, ಸಂಕಟ ಅನುಭವಿಸುತ್ತಿರುವ ತಾಯಿಯಾಗಲಿರುವ ಹೆಣ್ಣು ಎಂಬ ಕನಿಕರವೂ ಆ ಹಸಿದ ಪಶುಗಳಿಗೆ ಇಲ್ಲ,ಅಲ್ಲವೆ?

ಹಾದಿ ಮೌನವಾಗಿ ಸಾಗಿತು. ಎರಡು ಬದಿಗಳಲ್ಲೂ ಕಲ್ಲು ಕಡಿದ

ಕಂದಕಗಳು ಅಳುಮೋರೆಯೊಡನೆ ಮೈ ಚಾಚಿ ಮಲಗಿದ್ದುವು.

ದಾರಿ ಒಂದು ಏರಿಯನ್ನು ಕಳೆದು ಬಲಕ್ಕೆ ತಿರುಗಿಕೊಂಡಾಗ

ತುಂಗಮ್ಮ, ಅರುವತ್ತು ಎಪ್ಪತ್ತರಷ್ಟು ಮನೆಗಳು ಅಲ್ಲಲ್ಲಿ ಹರಡಿಕೊಂಡಿದ್ದ ಆ ಪ್ರದೇಶವನ್ನು ಕಂಡಳು ನೂರಾರು ವಿದ್ಯುದ್ದೀಪಗಳು. ಹಲವು ಸ್ವರಗಳೆದ್ದು ಒಂದರಲ್ಲೊಂದು ಬೆರೆತು ಅರ್ಥವಾಗದೊಂದು ಧ್ವನಿ ಮೇಲಕ್ಕೇರಿ ಆಕಾಶದಲ್ಲಿ ಸುಳಿದಾಡುತ್ತಿತ್ತು. ನಗರದ ಹೃದಯದಿಂದ ಹೊರಟು ಹೊರಗೆ ಹಳ್ಳಿಗಳತ್ತ ಸಾಗಿದ್ದ ಕರಿಯ ಡಾಮರು ಹಾದಿಯೊಂದು ಆ ಪ್ರದೇಶದೊಂದು ಭಾಗವನ್ನು ಸುತ್ತುವರಿದಿತ್ತು.

ಆ ಹೆದ್ದಾರಿಯ ಸಮೀಪದಲ್ಲೆ ಒಂದು ಮನೆಯ ಅಂಗಳದಲ್ಲಿ ನಾಯಿ

ಸಾಭಿ ಭೇದಿಸುವಂತೆ ಬೊಗಳುತ್ತಿತ್ತು; ಬೌ ಬೌ ವೌವ್....