ಈ ಪುಟವನ್ನು ಪರಿಶೀಲಿಸಲಾಗಿದೆ

ಆ ಹುಡುಗಿಯನ್ನು ತಾಯಿ ಮನ್ನು ಅಣ್ಣನೊಡನೆ ಆ ಕೊಠಡಿಯಲ್ಲಿ ಬಿಟ್ಟು ಕಾರ್ಯರ್ಶಿನಿ ಆಫೀಸು ರೂಮಿಗೆ ಬಂದರು. " ಹೆಸರು ಏನೂಂತ ಬರಕೊಳ್ಳೋಣ?” –ಎ೦ದು ಕೇಳಿದರು ಸರಸಮ್ಮ. "ಏನಾದರೊಂದು ಬರಕೊಂಡ್ಡಿ ಡಿ.ವಾ. ಇದೊಳ್ಳೆ ಗೋಳು ! ಇದೊಳ್ಳೆ ಸಮಾಜಸೇವೆ! ಅಂತೂ ಬಾಡಿಗೆಮನೆ ಕೆಟ್ಟೋಯ್ತು ಈ ಅಭಯಧಾಮ."

ಎದುರಲ್ಲಿ ಅಷ್ಟೊಂದು ವಿನಯದಿಂದ ಅವರೊಡನೆ ವರ್ತಿಸುತಿದ್ದವರು, ಅವರಿಂದ ದೂರ ಉಳಿದಾಗ ಬೇಸರ ವ್ಯಕ್ತಪಡಿಸುತ್ತ ಮುಖ ಒರೆಸಿಕೊಂಡರು ಸರನಮ್ಮನಿಗೂ ಅದು ತಿಳಿದಿತ್ತು, ಆದರೆ ಅದಕ್ಕೆಲ್ಲ ಒಪ್ಪದೆ ಬೇರೆ ಹಾದಿ ಇರಲಿಲ್ಲ, ಸಮಾಜದಲ್ಲಿನ ಪ್ರತಿಷ್ಠಿತರ ಹಣಸಹಾಯದ ಆಧಾರದ ಮೇಲೇಯೇ ಮುಖ್ಯವಾಗಿ ನಡೆದಿತ್ತು ಆ ಅಭಯಧಾಮ ಎಲ್ಲಾದರೂ ಒಂದೆಡೆ ಅಗೌರವವಾದರೂ ಸಾಕು,ಆಡಳಿತ ಸಮಿತಿ ಮುರಿದು ಮಣ್ಣುಪಾಲಾದ ಹಾಗೆಯೇ. ಆ ಯುವಕ ಬಂದು ಹೇಳಿದ;

" ಇನ್ನು ಹೊರಡ್ಡಹುದೇ ಅಂತ ಮಮ್ಮಿ ಕೇಳ್ತಾರೆ."

"ಕೊಠಡಿಯಲ್ಲಿ ಹುಡುಗಿ ತಾಯಿಯಮಡಿಲಲ್ಲಿ ಮುಖವಿಟ್ಟ ಅತ್ತಳು;

"ಅಳಬೇಡ ಮಗೂ...ಆದಷ್ಟು ಬೇಗನೆ ಮನೆಗೆ ಕರಕೊಂಡು ಹೋಗ್ತೀವಿ” " ಹಿ..ಹಿ .. ದಿಗಿಲಾಗುತ್ತಮ್ಮ ...” " ಇಲ್ಲಿರೋ ಜನರಿಗೆ ಹೇಳ್ತೀನಿ ನಿನಗೇನೂ ಕೊರತೆ ಆಗದ ಹಾಗೆ ನೋಡೋತಾರೆ." ಹುಡುಗಿ ಅಳು ನಿಲ್ಲಿಸಿದಳು.

ಡ್ರೈವರ್, ಕಾರ್ಯದರ್ಶಿನಿ ಮತ್ತು ಆ ಯುವಕ ಹೊರಗೆ ಅಂಗಳ ಕ್ಕಿಳಿದ ಮೇಲೆ, ಹುಡುಗಿಯ ತಾಯಿಯೊಬ್ಬರೇ ಸರಸಮ್ಮನೆಡೆಗೆ ನಡೆದು ಬಂದರು.