ಈ ಪುಟವನ್ನು ಪ್ರಕಟಿಸಲಾಗಿದೆ

೩೦೬

ಅಭಯ

ಎಂದಿನಂತೆ ಇರದ ತುಂಗಮ್ಮನನ್ನು ಕಂಡ ಸರಸಮ್ಮ,'ಏನೋ ಆಗಿರ ಬೇಕು'ಎಂದು ಕೊಂಡರು.ತುಂಗಮ್ಮ ತನ್ನಿಂದ ಏನನ್ನೂ ಬಚ್ಚಿಡಲಾರಳು ಎಂಬ ಸಂಶಯ ಅವರಿಗೆ ಸೋಮಶೇಖರ ತುಂಗಮ್ಮನನ್ನು ಪ್ರೀತಿಸುವುದು ನಿಜವೇ ಎಂದಾದರೆ,ತಮಗೆ ಬಲುಪ್ರಿಯಳಾಗಿದ್ದವಳು ಅಭಯಧಾಮವನ್ನು ಬಿಟ್ಟು ಹೋಗಬೇಕಾಗುವುದಲ್ಲಾ ಎಂಬ ದುಃಖ.ಅದರಬದಲು ಅಚಾ ತುರ್ಯವೇನಾದರೂ ನಡೆದರೆ ತಮ್ಮ ಸಾಧನೆ ಮಣ್ಣು ಪಾಲಾಗುವುದಲ್ಲಾ ಎಂಬ ಭೀತಿ.

ಅಂತೂ ಅವರ ಮನಸ್ಸಿನ ನೆಮ್ಮದಿ ಕದಡಿ ಹೋಯಿತು

................

ಮುಂದಿನ ಒಂದು ವಾರದ ಅವಧಿಯಲ್ಲಿ ಅಭಯಧಾಮದವರ ಪಾಲಿಗೆ ದೊಡ್ಡ ಘಟನೆಯೆಂದರೆ,ಹೊಸ ಹುಡುಗಿಯೊಬ್ಬಳ ಆಗಮನ ಕಸಬಿನವಳು. ವಯಸ್ಸು ಹದಿನೆಂಟೇ ಆಗಿದ್ದರೂ ಮೇಹರೋಗ ಅವಳಿಗೆ ಅಂಟ ಕೊಂಡಿತ್ತು ಆಕೆಯ ಆರೈಕೆಗಾಗಿ ಹೆಚ್ಚು ಶ್ರಮ ವಹಿಸಬೇಕಾಯಿತು ಯಾರು ಮುಟ್ಟದ ತಾನೇ ತೊಳೆಯುವ ತಟ್ಟಯೊಡನೆ ಬಟ್ಟೆಬರೆಗಳೊಡನೆ ಒಂದು ಮೂಲೆಯಲ್ಲಿ ಆಕೆ ಬೀಡು ಬಿಟ್ಟಳು

................

ಎರಡುವಾರಗಳಾದರೂ ಸೋಮಶೇಖರ ಬರಲಿಲ್ಲ. ಸುಂದರಮ್ಮನ ಸುದ್ದಿಯೂ ಇರಲಿಲ್ಲ.

ಏನೂ ನಡೆದೇ ಇಲ್ಲವೇನೋ ಎಂಬಂತೆ ತುಂಗಮ್ಮ ಹಿಂದಿನಂತೆ ನಗುನಗುತ್ತ ಇರಲು ಯತ್ನಿಸಿದಳು. ಆದರೆ ದೀಪ ಆರಿದ ಬಳಿಕ ಕತ್ತಲಿನಲ್ಲಿ ಆಕೆಯೊಬ್ಬಳೇ ಉಳಿದಾಗ,ಅಂತರ್ಮುಖಿಯಾದಾಗ,ಯೋಚನೆಯ ಕುದುರೆಗಳಿಗೆ ಹುಚ್ಚುಹಿಡಿಯುತಿತ್ತು.ಹೃದಯದ ನೋವು ಅಂಗಾಂಗವನ್ನೆಲ್ಲ ವ್ಯಾಪಿಸುತಿತ್ತು.

ಆಡಳಿತ ಸಮಿತಿಯ ಸಭೆ ಮುಗಿದ ಒಂದು ಸಂಜೆ, ಕಾರ್ಯದರ್ಶಿನಿ ಕಮಲಮ್ಮ ಮತ್ತು ಸದಸ್ಯೆ ಸುಂದರಮ್ಮ ಇಬ್ಬರೇ ಉಳಿದರು. ಅಭಯ ಧಾಮಕ್ಕೆ ಹೊರಟದ್ದ ಸರಸಮ್ಮನವರನ್ನು ಅವರು ಕರೆದರು.

"ಇರಿ ಸರಸಮ್ಮ, ಸ್ವಲ್ಪ ಇದ್ಬಿಟ್ಟು ಹೋಗಿ."