ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೩೦೯

ಸೋಮಶೇಖರ ಬಂದ. ದೊಡ್ಡಮ್ಮನಿಗೆ ನಮಸ್ಕರಿಸಿ, ಅಕ್ಕನ ಬಳಿಯಲ್ಲಿದ್ದ ಕುರ್ಚಿಯ ಮೇಲೆ ಕುಳಿತ.

ಸುಂದರಮ್ಮ ಏಕಪ್ರಕಾರವಾದ ಸ್ವರದಲ್ಲಿ ಅಂದರು:

"ನಾನು ಹೇಳ್ತಾ ಇದ್ನೆಲ್ಲ ಸರಸಮ್ಮ? ಆ ಏಕ್ಸ್ ಮಹಾಶಯ

ಈತನೇ!"

ಸರಸಮ್ಮ ದಂಗುಬಡೆದವರಂತೆ ಕುಳಿತರು ತನ್ನ ಮದುವೆಯ ಪ್ರಸ್ತಾ ಪವೇನಾದರೂ ಬಂದಿತ್ತೇನೋ ಎಂದು ಸೋಮಶೇಖರನ ಮುಖ ರಂಗೇರಿತು.

"ಅದೇನಕ್ಕ ಎಕ್ಸ್,ವೈ,ಜೆಡ್ಡು?"

"ಅಭಯಧಾಮದಿದಂದ ಪ್ರಯೋಜನ ಇಲ್ಲಾಂತ ನೀನು ಹೇಳ್ತಿದ್ದೆ ನೋಡು. ಆ ವಿಷಯ ಮಾತಾಡ್ತಿದ್ವಿ"

"ಓ ಅದಾ!"

ತೋರಿಕೆಗೆ ಅದೇನೋ ಅಕ್ಕ-ತಮ್ಮಂದಿರ ನಡುವಿನ ತಮಾಷೆಯ ಜಗಳವಾಗಿತ್ತು. ಆದರೆ ಸೋಮಶೇಖರನ ವಾದದಲ್ಲಿ ಸತ್ಯಾಂಶವೂ

ಇತ್ತಲ್ಲವೆ?

ಸರಸಮ್ಮ,ವಿಚಾರಿಯಾದ ಅ ತರುಣನ ಸುಂದರ ಮುಖವನ್ನು

ನೋಡುತ್ತ ತುಂಗಮ್ಮನನ್ನು ಜ್ನಾಪಿಸಿಕೊಳ್ಳುತಿದ್ದಾಗಲೆ,ಕೇಳಿಬಂದಮಾತು

ಅವರನ್ನು ಎಚ್ಚರಗೊಳಿಸಿತು.

"ಈ ದಿನ ನಿಮಗೆ ಹೇಳ್ಬೇಕೊಂತಲೇ ಮಾಡಿದ್ವಿ ಸರಸಮ್ಮ. ಅದಕ್ಕೇ ಇವನೂ ಬಂದಿರೋದು. ತನ್ನನ್ನ ಅಳಿಯನಾಗಿ ಮಾಡ್ಕೋ ಬೇಕೂಂತ ಸೋಮಶೇಖರ ನಿಮ್ಮನ್ನ ಕೇಳ್ತಿದಾನೆ"

ಅನಿರೀಕ್ಷಿತವಾಗಿ ಬಂದಿದ್ದ ಆ ಮಾತುಕೇಳಿ ಸರಸಮ್ಮ ಕಕ್ಕಾವಿಕ್ಕಿ ಯಾದರು.

"ತಮಾಷೆ ಮಾಡ್ತಿರಾ!"

"ಇಲ್ಲ ಸರಸಮ್ಮ ಇವನ್ನೇ ಕೇಳಿ ಬೇಕಾದ್ರೆ ಹೇಳೋ ಸೋಮು."

ಕಮಲಮ್ಮನ್ನೂ ಧ್ವನಿ ಕೂಡಿಸಿದರು:

"ಸಮಾಜ-ಸರಕಾರ-ಪುನರ್ಘಟನೆ ಅಂತ ವಾದಿಸ್ತೀರಾ, ಇಷ್ಟು

ಹೇಳೋದಕ್ಕೇನ್ರಿ?"