ಈ ಪುಟವನ್ನು ಪ್ರಕಟಿಸಲಾಗಿದೆ

೩೧೨

ಅಭಯ

ಸ್ಥಿತಿಯಲ್ಲೇ ಇರಲಿಲ್ಲ. ಅವರು ಕಿಟಕಿಯ ಆಚೆ ಆಕಾಶದತ್ತ ಶೂನ್ಯ ನೋಟ

ಬೀರುತ್ತ ಕುಳಿತರು


ತುಂಗಮ್ಮನ ತಂದೆ ಬಂದು ಹೋದಮೇಲೆ,ಮದುವೆಯ ಮಾತು ಅಭಯಧಾಮದ ಪ್ರತಿಯೊಬ್ಬರಿಗೂ ತಿಳಿದು ಹೋಯಿತು. ಬಹಳ ಜನರಿಗೆ ಸಂತೋಷವಾಯಿತು. ಕೆಲವರಿಗೆ ಅಸೂಯೆಯಾಗದಿರಲಿಲ್ಲ.


ಕುರುಡಿ ಸುಂದ್ರಾ ಜಲಜೆಯನ್ನು ಕೇಳಿದಳು:

" ಅವರು ಎಂಗಿದಾರೆ ನೋಡಕ್ಕೆ? "

" ಯಾರು?"

" ತುಂಗಕ್ಕನ ಅವರು ಕಣೇ"

" ಎಂಗಿದಾರೆ ಅನ್ಲೇ ?"

__ಆ ಬಳಿಕ ಸುಂದ್ರಾಳ ಪ್ರಶ್ನೆಗೆ ಉತ್ತರವಾಗಿ, ಜಲಜ ತಾನು ಮನ ಸ್ಸಿನಲ್ಲೆ ಚಿತ್ರಿಸಿಕೊಂಡಿದ್ದ ರಾಜಕುಮಾರನನ್ನು ವರ್ಣಿಸಿದಳು....


... ... ... ...


ಯುಗಾದಿ ಹಬ್ಬದತನಕ ಕಾದು ಕೂತಿರಲು ಸೋಮಶೇಖರ ಒಪ್ಪ ಲಿಲ್ಲ.


ಬೆಳಗಾಂವಿಗೆ ಹಿಂತಿರುಗಿದ್ದ ತುಂಗಮ್ಮನ ತಂದೆ ದೊಡ್ಡ ಮಗಳೊಡ ನೆಯೂ ಅಳಿಯನೊಡನೆಯೂ ಬಂದರು. ಪರೀಕ್ಷೆಯ ಸಿದ್ದತೆಯಲ್ಲಿದ್ದ

ತುಂಗಮ್ಮನ ತಮ್ಮ ಮಾತ್ರ ಬರಲಿಲ್ಲ. ಆದರೆ ಒಲವಿನ ಅಕ್ಕನಿಗೆ ಮುದ್ದಾದ
ಒಂದು ಕಾಗದವನ್ನು ಆತ ಬರೆದ.

ಮದುವೆ ಎಲ್ಲ ಜರಗಬೇಕೆಂಬುದರ ಬಗೆಗೆ ಸ್ವಲ್ಪ ರಂಪವೇ ಆಯಿತು.

ದೇವಸ್ಥಾನದಿಂದ ಸ್ಥಳ ಆರ್ಯಸಮಾಜಕ್ಕಿಳಿಯಿತು. ಆದರೂ ಜಪ್ಪಯ್ಯ
ಎನ್ನಲಿಲ್ಲ ಸೋಮಶೇಖರ.. ತುಂಗನೋ, "ಅವರು ಹೇಳಿದ ಹಾಗೆ"
ಎಂದಳು ಮಾತ್ರ.


'ಅವರು' ರೆಜಿಸ್ಟ್ರಾರರಮಂದೆ ಸಹಿ-ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಮದುವೆ ಯಾಗಲೆಂದರು.

ಹಾಗೆಯೇ ಆಯಿತು.


ಅಭಯಧಾಮದಲ್ಲಿ ಭಾರಿ ಭೋಜನವೇರ್ಪಟ್ಟಿತು. ವಧೂವರರು