ಈ ಪುಟವನ್ನು ಪ್ರಕಟಿಸಲಾಗಿದೆ

"ತುಂಗಮ್ಮ."

"ಓ"--ಎಂದಳು ಜಲಜಾ. ಆ ಧ್ವನಿಯಲ್ಲಿ ನಿರಾಸೆಯಿತ್ತು. ಆ

ಉದ್ಗಾರ ತುಂಗಮ್ಮನಿಗೆ ವಿಚಿತ್ರವೆನಿಸಿತು.

ಯಾಕೆ, ಚೆನ್ನಾಗಿಲ್ವೆ?--ಎಂಬ ಪ್ರಶ್ನೆಯೇನೋ ಆಕೆಯ ಮನಸ್ಸಿ

ನಲ್ಲಿ ರೂಪುಗೊಂಡಿತು. ಆದರೆ ಅದು ಹೊರಬೀಳಲಿಲ್ಲ.

ಅಷ್ಟರಲ್ಲೆ ಇನ್ನೊಬ್ಬ ಹುಡುಗಿ ಒಳ ಬಂದು ಕೇಳಿದಳು:

"ನಿಮ್ಮ ಹೆಸರೇನೂಂತ ಕೇಳ್ತಾರೆ ದೊಡ್ಡಮ್ಮ"

ಆ ಮಾತಿನ ಅರ್ಥವನ್ನು ಮಧಿಸುತ್ತ ತುಂಗಮ್ಮ ಯೋಚಿಸಿದಳು-

ಆ ಹೆಂಗಸು ಈಕೆಗೂ ದೊಡ್ಡಮ್ಮನೇನೊ ಹಾಗಾದರೆ?

"ತುಂಗಮ್ಮ ಕಣೇ."

ಜಲಜ ಉತ್ತರವಿತ್ತಳು, ತುಂಗಮ್ಮನ ಪರವಾಗಿ.

ಬಂದಿದ್ದ ಹುಡುಗಿ ನಕ್ಕು, ಹಿಂದಿರುಗುತ್ತ ಹೇಳಿದಳು:

"ಅಷ್ಟರಲ್ಲೇ ಪರಿಚಯ ಮಾಡ್ಕೊಂಬಿಟ್ಯಲ್ಲೇ!"

ಜಲಜ, ತುಂಗಮ್ಮ ಮಲಗಿದ್ದ ಮಂಚದ ಮಗ್ಗುಲಿಗೆ ಹೊರಳಿ

ಕೊಂಡಳು.

"ನಿಮ್ಮ ಹೆಸರ್ನ ರೆಗಿಸ್ಟರ್ ನಲ್ಲಿ ಬರ್ಕೋತಾರೆ, ಅದಕ್ಕೆ"

ದಪ್ಪಗಿನ ಪುಸ್ತಕದಲ್ಲಿ ಹೆಸರು ಬರೆದುಕೊಳ್ಳುವ ಪದ್ಧತಿ. ತುಂಗಮ್ಮ

ನಿಗೆ ನೆನಪಿತ್ತು--ಆಕೆ ಮೊದಲ ಬಾರಿ ಶಾಲೆಗೆ ಹೋದಾಗ ಹಾಗೆಯೇ ಬರೆದುಕೊಂಡಿದ್ದರು ಹಿಂದೆ.

ಆ ದೊಡ್ಡಮ್ಮ, ತನ್ನ ಹೆಸರಿನ ಹೊರತು ಬೇರೇನನ್ನೂ ಕೇಳಿರಲಿಲ್ಲ.

ಆಕೆಯ ಬದಲು, ಈ ಹುಡುಗಿ ಕೇಳುವಳೇನೊ--ಈ ಜಲಜ?

ಜಲಜ ವಾಚಾಳಿಯಾಗಿದ್ದಳು.

"ಈಗ ಬಂದಿದ್ದಳಲ್ಲ-ಗುಜ್ಜಾನೆಮರಿ?ಅವಳ ಹೆಸರು ಸರಸ್ವತೀಂತ."

ಗುಜ್ಜಾನೆಮರಿ ಎಂಬ ಪದ, ತುಂಗಮ್ಮ ನಗುವಂತೆ ಮಾಡಿತು.

"ಹೆಸರು ಸರಸ್ವತೀಂತ. .ಓದೋಕ್ಮಾತ್ರ ಊಹೂಂ....ಒಂದಕ್ಷರ

ಬರೆಯೋಕೆ ಬರಲ್ಲ. ದಡ್ಡೀಂದ್ರೆ ದಡ್ಡಿ...."

ಇದೊಳ್ಳೆಯ ತಮಾಷೆಯಾಗಿತ್ತು. ಇದು ಶಾಲೆಯೇ ಸರಿ! ತಾನು