ಈ ಪುಟವನ್ನು ಪ್ರಕಟಿಸಲಾಗಿದೆ

ಸಾವು-ಬದುಕುಗಳ ತೂಗುಯ್ಯಾಲೆಯಲ್ಲಿ ತೂಗಾಡುತ್ತಾ ಬಸವಳಿದು ಇಲ್ಲಿಗೆ ಬಂದು ಬಿದ್ದಿದ್ದರೆ, ಇಲ್ಲಿ ಇವರೆಲ್ಲ ಓದುವ ಬರೆಯುವ ಮಾತನ್ನಾಡುತಿದ್ದರು!

ಜಲಜಳ ಮಾತಿಗೆ ತಾನೂ ಏನಾದರೂ ಪ್ರತ್ಯುತ್ತರ ನುಡಿಯ

ಬೇಕೆಂದು ತೋರಿತು ತುಂಗಮ್ಮನಿಗೆ. ಆದರೆ ಏನನ್ನು?

ಆ ಸಮಸ್ಯೆಯ ಪರಿಹಾರಕ್ಕೆಂದೇ ಜಲಜ, ಉತ್ತರಿಸಲೇ ಬೇಕಾ

ದೊಂದು ಪ್ರಶ್ನೆ ಕೇಳಿದಳು.

"ಏನ್ರಿ, ನಿದ್ದೆ ಬಂತೆ?"

"ಇಲ್ಲ..."

"ಆಯಾಸವೇನೊ?"

"ಹುಂ...."

"ನಾಳೆ ಬೆಳಿಗ್ಗೆ ನಾನು ಎದ್ಬಿಡ್ತೀನಿ. ಎಣ್ಣೆ ನೀರಿನ ಸ್ನಾನಮಾಡಿಸ್ತೀನಿ

ನಿಮಗೆ."

ತುಂಗಮ್ಮ ಮುಗುಳ್ನಕ್ಕಳು ಅಂತಹ ಮಾತುಗಳನ್ನು ಆಕೆ ಕೇಳದೆ

ಎಷ್ಟೋ ಕಾಲವಾಗಿತ್ತು.

ಅಭಯಧಾಮದವರೆದುರು ಚೆನ್ನಾಗಿ ಇತ್ತು, ಅಳಲಿನ ಕೊಡವನ್ನು

ಬರಿದುಗೊಳಿಸಿ, ಅವರ ವಾದ ಹಿಡಿದು, ರಕ್ಷಣೆಯ ಯಾಚನೆ ಮಾಡಬೇಕೆಂದು ಯೋಚಿಸುತ್ತ ಬಂದಿದ್ದಳು ತುಂಗಮ್ಮ. ಆದರೆ ಇಲ್ಲಿ ಪ್ರತಿಯೊಂದೂ ವ್ಯತಿರಿಕ್ತವಾಗಿತ್ತು.

ನಿಟ್ಟುಸಿರು ಬಿಟ್ಟು ತುಂಗಮ್ಮ ಪ್ರಯಾಸಪಟ್ಟು ಎದ್ದು ಕುಳಿತಳು.

"ಯಾಕೆ ಎದ್ದಿರಿ?"

--ಎಂದಳು ಜಲಜ; ಆ ಧ್ವನಿಯಲ್ಲಿ ಕಾತರವಿತ್ತು.

"ಸುಮ್ಮನೆ ಎದ್ದೆ."

"ಏಳ್ಬೇಡ. ಮಲಕ್ಕೋ--"

--ಎನ್ನುತ್ತಲೇ ಸರಸಮ್ಮ ಒಳ ಬಂದರು. ಅವರ ಹಿಂದೆಯೇ

ಸಾವಿತ್ರಿ, ಒಂದು ಹಾಸಿಗೆಯ ಸುರುಳಿಯನ್ನೆತ್ತಿಕೊಂಡು ಬಂದಳು. ಅದನ್ನು ಆಕೆ, ಜಲಜಳಿಗಿಂತ ಸ್ವಲ್ಪ ದೂರದಲ್ಲಿ ಗೋಡೆಯ ಬದಿಯಲ್ಲಿ ಬಿಡಿಸಿ ಹಾಸಿದಳು.