ಈ ಪುಟವನ್ನು ಪ್ರಕಟಿಸಲಾಗಿದೆ

"ಸುಡುತ್ತೇನಮ್ಮ?"

"ಇಲ್ಲ..."

"ನಿಧಾನವಾಗಿ ಕುಡಿ. ತಟ್ಟೀನ ಕೈಲೆತ್ಕೊಂಡು ಕುಡೀಮ್ಮಾ...."

....ಹಾಗೆ ಗಂಜಿ ಕುಡಿದ ಮೇಲೆ ತುಂಗಮ್ಮನಿಗೆ ಹಾಯೆನಿಸಿತು.

ಆ 'ದೂಡ್ಡಮ್ಮ' ಆಗಲೂ ಏನನ್ನೂ ಕೇಳಲಿಲ್ಲ ತುಂಗಮ್ಮನ

ಕಣ್ಣೆದುರು ಶೂನ್ಯ ಅಣಕಿಸುತ್ತ ನಿಂತಿತ್ತು ಆ ಸಂಜೆಯ ವರೆಗೂ. ಮಾನವ ಪ್ರೇಮದಿಂದ ಮೆಲ್ಲ ಮಲ್ಲನೆ ತುಂಬಿಕೊಳ್ಳುತಿತ್ತು ಆ ಶೂನ್ಯ ಇದು ಸಾಧ್ಯವೆಂದು ಸಂಭವನೀಯವೆಂದು ಎಂದೂ ಭಾವಿಸಿರಲಿಲ್ಲ ತುಂಗಮ್ಮ- ಕನಸಿನಲ್ಲಿಯೂ.

ಸರಸಮ್ಮ ಎದ್ದು ತನ್ನ ಹಾಸಿಗೆ ಸರಿಪಡಿಸುತ್ತಾ ಹೇಳಿದರು:

"ಇನ್ನು ಮಲಗಿಕೋ ತುಂಗಮ್ಮ. ಆಯಾಸವಗಿದೆ ನಿನಗೆ, ದೇವ

ರಿದ್ದಾನೆ-ಎಲ್ಲಾ ಸರಿಹೋಗುತ್ತೆ.ಮಲಕ್ಕೋಮ್ಮಾ,,,"

ಹಾಗೆ ಹೇಳಿ ಅವರು, ಆಗಲೆ ಮಲಗಿ ಕೊಂಡಿದ್ದ ಹುಡುಗಿಯರ

ನ್ನೊಮ್ಮೆ ನೋಡಿಬರಲೆಂದು ಹೊರ ಹೋದರು.

ತನ್ನನ್ನು ಅಪರಾಧಿನಿಯ ಹಾಗೆ ಅವರು ಕಂಡಿರಲಿಲ್ಲ ಕ್ಷಮಿಸುವ

ಮಾತು ಬಂದಿರಲಿಲ್ಲ ಇಲ್ಲಿ ಅಭಯ ಕೇಳಲು ಬಂದಾಗ, ಅಂಜುತ್ತ ಅಂಜುತ್ತ ಎನೇನೋ ಭಾವಿಸುತ್ತ, ಆಕೆ ಬಂದಿದ್ದಳು. ಆದರೆ ಹಾಗೆ ಅಂಜುವ ಅಗತ್ಯವಿರಲಿಲ್ಲ ಅಲ್ಲವೆ ?

ತಾರಸಿಯ ಛಾವಣಿ ನೋಡುತ್ತ ತುಂಗಮ್ಮ ನೀಳವಾಗಿ ನಿಟ್ಟುಸಿರು

ಬಿಟ್ಟಳು. ಬಿಗಿಯಾಗಿದ್ದ ಮೈಯ ನರನಾಡಿಗಳು ಸಡಿಲಿದುವು

....ಬಚ್ಚಲು ಮನಗೆ ಹೋಗಿ ಬಂದರಾಗುತಿತ್ತು ಎನಿಸಿತು ಆಕೆಗೆ.

ಅವಳ ಮನಸಿನಲ್ಲಿದ್ದುದನ್ನು ಊಹಿಸಿದವಳಂತೆ ಜಲಜ ಕೇಳಿ

ದಳು:

"ಹೊರಗೆ ಹೋಗ್ಬೇಕಾ ತುಂಗಕ್ಕ ?"

ತುಂಗಕ್ಕ! ತನ್ನನ್ನು ಅಕ್ಕನೆಂದು ಕರೆದಳಲ್ಲವೆ ಆಕೆ ?

ತುಂಗಮ್ಮ ಹೌದೆಂದು ತಲೆಯಾಡಿಸಿದಳು.

"ದೊಡ್ಡಮ್ಮ ಬಂದ್ಬಿಡ್ತಾರೆ. ಕರಕೊಂಡು ಹೋಗ್ತಾರೆ ಆ ಮೇಲೆ."