ಈ ಪುಟವನ್ನು ಪ್ರಕಟಿಸಲಾಗಿದೆ

ಮೇಲೆ ಕ್ಷಣಕಾಲ ಎರಡು ಹಕ್ಕಿಗಳೂ ಜತೆಯಾಗಿಯೇ ಕುಳಿತುವೇನೋ...ಕೊಕ್ಕಿಗೆ ಕೊಕ್ಕು ತಗಲಿಸಿ ಮುದ್ದಿತಟ್ಟುವೇನೋ...

ಆ ಮಾತುಕತೆ..

"ಹೊರಗೆ ಚಳಿ..ಆ ಹಟ್ಟಿಯ ಸೂರಿನಲ್ಲೆ ಹೊತ್ತು ಕಳೆದೆ.."

"ಹೊಂ...ನಾನು ಒಬ್ಬಳ್ಳೇ ಇಲ್ಲಿ_"

"ನಿನಗೇನಂತೆ.ಕೊಠಡಿ ಬೆಚ್ಚಗಿದೆ.ಜನರೂ ಒಳ್ಳೆಯವರು."

"ಬಹಳ ದಿನ ಹೀಗೇ ಇರೋಕಾಗಲ್ಲ.ಅವರು ರಾತ್ರೆ ಎದ್ದು ದೀಪ

ಉರಿಸಿದಾಗಲೆಲ್ಲಾ ಭಯವಾಗತ್ತೆ"

"ಇನ್ನೆರಡೇ ದಿನ ಚಿನ್ನ..ಸಿದ್ದವಾಗ್ತಾ ಬಂತು ಗೂಡು."

"ಹೂಂ.."

"ಇಲ್ನೋಡೆ.."

"ಎದ್ಬಿಡ್ತಾರೆ ಆ ಜನ..ಹೊರಕ್ಕೆ ಹಾರಿ ಹೋಗೋಣ.."

ಹಕ್ಕಿಗಳ ಅರ್ಥವಾಗದ ಭಾಷೆಯನ್ನು ಹಾಗೆ ಕಲ್ಪಿಸಿಕೊಂಡ

ತುಂಗಮ್ಮ ನಸುನಕ್ಕಳ್ಳು.ಆದರೆ ಹಾಗೆ ನಕ್ಕಾಗ ಆಕೆಯ ಮನಸ್ಸಿಗೆ ನೋವಾಯಿತು.

ಹೃದಯದ ನೆಮ್ಮದಿ ಕೆಡಿಸಿಕೊಂಡು ತುಂಗಮ್ಮ ಮಗ್ಗುಲು ಮಗುಚಿ

ದಳು.ಹಾಗೆ ಮಾಡಿದಾಗ ಆ ಕಿಟಕಿ ಮತ್ತೆ ಆಕೆಯ ದೃಷ್ಟಿಗೆ ಬಿತ್ತು.ಹಕ್ಕಿಗಳು ಅಲ್ಲಿರಲಿಲ್ಲ.ಹಾರಿ ಹೋಗಿದ್ದವು.

ತನಗಾದರೋ ಯಾರೂ ಇಲ್ಲ 'ತುಂಗಾ' ಎಂದು ಕರೆದೆಬ್ಬಿಸುವ

ಇನಿಯನಿಲ್ಲ.ಹಾರಿ ಹೋಗಲು ರೆಕ್ಕೆಗಳಿಲ್ಲ ತನಗೆ.ಹೋದರೂ,ಇರಲು ಗೂಡಿಲ್ಲ.ತಾನು ಅಸಹಾಯಳಾದ ಹೆಣ್ಣು.

ಆ ಅಭಿಪ್ರಾಯವನ್ನು ಅಲ್ಲಗಳೆಯುವ ಹಾಗೆ ಜಲಜಳ ಸ್ವರಬಂತು;

"ತುಂಗಕ್ಕಾ,ಎಚ್ಚರವಾಯ್ತೆ ತುಂಗಕ್ಕಾ..."

ಯೋಚನೆಯ ಮತ್ತೊಂದು ಪುಟವನ್ನು ಮಗುಚಿ,"ಹೊಂ"ಎಂದಳು

ತುಂಗಮ್ಮ,ತಾನೂ ಜಲಜಳ ಕಡೆಗೆ ಮಗುಚಿಕೊಳ್ಳುತ್ತಾ.

ಬೆಳಕು ಹೊನಲಾಗಿ ಬರತೊಡಗಿತು ಕಿಟಕಿಯ ಎಡೆಯಿಂದ.ರಾತ್ರೆ

ಹೊತ್ತು ಆಕೆಯನ್ನು ಸರಿಯಾಗಿ ಕಂಡೇ ಇರಲಿಲ್ಲ ತುಂಗಮ್ಮ.ಎಷ್ಟೊಂದು