ಈ ಪುಟವನ್ನು ಪ್ರಕಟಿಸಲಾಗಿದೆ

ಸುಂದರಿ ಜಲಜ! ಯಾವಶಿಲ್ಪಿ ಯಾವ ರಸಘಳಿಗೆಯಲ್ಲಿ ಕಡೆದನೊ ಆಕೆಯನ್ನು!ಬಿಲ್ಲ ಹುಬ್ಬು,ಪುಟ್ಟ ಚಿಗರೆಗಣ್ಣುಗಳು,ಮಾಟವಾದ ಮೂಗು,ಶಾಂತವಾಗಿ ನಿಶ್ಚಲವಾಗಿದ್ದ ಎಳೆಯ ತುಟಿಗಳು..

"ಜ್ವರ ಹೇಗಿದೆ ಜಲಜ?"

"ಪರವಾಗಿಲ್ಲ ನೀವು!ನೀವು ಹೇಗಿದೀರಾಂತ ಕೇಳೋಣಾಂತಿದ್ರೆ,

ನನ್ನನ್ನೇ ಆ ಪ್ರಶ್ನೆ ಕೇಳ್ತೀರಲ್ಲ!"

"ನನಗೇನಾಗಿದೆ?ಚೆನ್ನಾಗಿಯೇ ಇದೀನಿ."

"ನನಗೆ ಮಾತ್ರ ಏನಾದರೂ ಆಗಿತ್ತೇನೊ!"

"ಜ್ವರ?"

"ನೀವು ನಿನ್ನೆ ಬಂದ್ಕೂಡ್ಲೆ ಹೊರಟು ಹೋಯಿತು.ಈಗ್ನೋಡಿ,ಈ

ಮಗ್ಗುಲು ಹಾಸಿಗೆಯೆಲ್ಲಾ ಒದ್ದೆ ಹ್ಯಾಗೆ ಬೆವತಿದೇಂತಾ!"

"ಬೆವತರೆ ಒಳ್ಳೇದು"

"ಮೈಕೈ ನೋಯುತ್ತೆ ಅಲ್ವೇ ನಿಮಗೆ? ನಿನ್ನೇನೆ ಹೇಳಿದ್ನಲ್ಲಾ

ಚೆನ್ನಾಗಿ ನಿಮಗೆ ಸ್ನಾನ ಮಾಡಿಸ್ತೀನಿ ಅಂತ."

"ನೀವೇಳ್ಕೋಡದು ಜಲಜ ನಿಮ್ಮ ದೊಡ್ಡಮ್ಮ ಬಯ್ತಾರೆ."

ಜಲಜ ಗೊಳ್ಳೆಂದು ನಕ್ಕಳು ತಮಾಷೆಯಾದುದೇನನ್ನೋ ಕಂಡು

ಕೇಳಿದ ಎಳೆಯ ಮಗುವಿನ ಹಾಗೆ ಹೊದಿಕೆಯೊಳಗೆ ಕಾಲು ಕುಣಿಸಿ ನಕ್ಕಳು.

ತುಂಗಮ್ಮನಿಗೆ ನೆಚ್ಚು ವೆಚ್ಚಾಯಿತು

.

"ಯಾಕೆ?ಯಾಕ್ನಗ್ತೀರಾ?ನಿಮ್ಮ ದೊಡ್ದಮ್ಮ ನಯ್ಯಲ್ವೇನು?"

ಮತ್ತಷ್ಟು ಗಟ್ಟಿಯಾಗಿ ಜಲಜ ನಕ್ಕಳು-ಖೋ ಖೋ ಎಂದು.

ತುಂಗಮ್ಮನ ಮುಖ ಸಪ್ಪಗಾಯಿತು.ಆಡಬಾರದ್ದೇನನ್ನೂ ತಾನು

ಆಡಲಿಲ್ಲ ಅಲ್ಲವೇ?

"ಯಾಕೆ ಜಲಜ?"

ಪದ ಪದಕ್ಕೂ ನಗುತ್ತ ನಗುತ್ತ ತಡೆ ತಡೆದು ಜಲಜ ಹೇಳಿದಳು:

"ಅಲ್ರೀ,ಅವರು ನನ್ನ ದೊಡ್ಡಮಾಂತ ತಿಳಕೊಂಡ್ರೇನು?ನಿಮ್ಮ

ದೊಡ್ಡಮ್ಮ ಅಲ್ವೇನು ಹಾಗಾದರೆ?"