ಈ ಪುಟವನ್ನು ಪ್ರಕಟಿಸಲಾಗಿದೆ

ಬ್ಬರನ್ನು ನೋಡಿಯೂ ನೋಡದಂತೆ ನಿಂತಿದ್ದ ಅಲಮೇಲು-ದಮಯಂತಿಯರನ್ನು ಕಂಡು ಜಲಜಳಿಗೆ ಕನಿಕರವೆನಿಸಿತು.

"ಯಾಕ್ರೇ ಸುಮ್ಸುಮ್ನೆ ಜಗಳಾಡ್ತೀರಾ ನೀವು?"

ದಮಯಂತಿ ಜಲಜಳನ್ನು ದುರುಗುಟ್ಟ ನೋಡಿದಳು.

"ಥೂ!ಇದೊಂದೂ ಚೆನ್ನಾಗಿಲ್ಲವಮ್ಮಾ. ಪ್ರತಿಸಾರೆಯೂ

ಹೀಗೆ-"

"ಚೆನ್ನಾಗೈತೋ ಇಲ್ವೋ ನಿನ್ನ ಯಾರು ಕೇಳ್ದೋರು? ನಿನ್ನಷ್ಟಕ್ಕೆ

ಸುಮ್ನಿದ್ಕೊ-ಬಾಯ್ಮುಚ್ಕೊಂಡು!"

-ಶಾಂತಳಾಗಿರಲಿಲ್ಲ ದಮಯಂತಿ.

"ನೋಡಿ ತುಂಗಕ್ಕ,ಹ್ಯಾಗಂತಾಳೆ!"

-ಎಂದು ಜಲಜ ತುಂಗಮ್ಮನಿಗೆ ದೂರು ಕೊಟ್ಟಳು.

ಆದರ ಸುಲಭವಾಗಿ ಸುಮ್ಮನಿರುವವಳಲ್ಲ ದಮಯಂತಿ.

"ಅಲ್ದೆ! ನಿಂಗ್ಯಾಕ್ಟೇಕು ನಮ್ಸಮಾಚಾರ? ನಾವು ಹೆಣ

ಚಾಕ್ರಿ

ಮಾಡ್ತೀವಿ, ಸಾಯ್ತೀವಿ, ಓಡ್ಹೋಗ್ತೀವಿ-ಎನಾದ್ರೇನು ನಿಂಗೆ? ನೀನಾಯ್ತು,ದೊಡ್ಡಮ್ನಾಯ್ತು. ತಲೆಸಿಡಿತ, ನೆಗಡಿ, ಕೆಮ್ಮು, ಜ್ವರ ಅಂತ ಬೆಚ್ಚಗೆ ಹೊದ್ಕೊಂಡು ಇಲ್ಲಿ ಮಲಕ್ಕೊ."

ತುಂಗಮ್ಮನಿಗೆ ಈ ಮಾತು ಕೆಡುಕೆನಿಸಿತು. ತಾನು ಜಲಜೆಗೆ

ಬೆಂಬೆಲವಾಗಿ ನಿಲ್ಲಬೇಕೆಂದು ಆಕೆಯೆಂದಳು:

"ನೀವು ಹಾಗನ್ಬಾ. ಜಲಜಾಗೆ ಜ್ವರ ಬಂದಿದೆ, ಕಾಣ್ಸೊಲ್ವೆ?"

ಆ ಮಾತು ಕೇಳಿ ನಿರುತ್ತರಳಾದಳು ದಮಯಂತಿ. ತಾನು ಆಡಿದ್ದು

ತಪ್ಪಾಯಿತೆಂದು ಆಕೆಗೆ ಆಗಲೆ ತಿಳಿದಿತ್ತು. ಆದರೆ ಹಾಗೆಂದು ಒಪ್ಪಿಕೊಳ್ಳಲು ಅವಳು ಸಿದ್ದಳಿರಲಿಲ್ಲ. ಅದಕ್ಕಾಗಿ, ಮುಖ ತಿರುಗಿಸಿಕೊಂಡು ಆಕೆ ಕಿಟಕಿಯಿಂದ ಹೊರನೋಡುತ್ತ ನಿಂತಳು.

ಅಲಮೇಲು ಆಗಲೆ ತಣ್ಣಗಾಗಿ ದಮಯಂತಿಯೊಡನೆ ಸಂಧಾನಕ್ಕೆ

ಸಿದ್ಧವಾಗಿಯೇ ಇದ್ದಳು. ಮಧ್ಯಾಹ್ನದ ಊಟದ ವರೆಗೂ ಉಪವಾಸವಿರಬೇಕೆನ್ನುವುದಂತೂ ಆಕೆಯ ಮನಸಿನ ಹೊಸ ರೀತಿಯ ಕಸಿವಿಸಿಗೆ ಕಾರಣವಾಗಿತ್ತು.