ಈ ಪುಟವನ್ನು ಪ್ರಕಟಿಸಲಾಗಿದೆ

ಆಯಾಸ ತುಂಗಮ್ಮನಿಗೂ ಆಗಿತ್ತು.ಮೈಕೈಗಳು ನೋಯುತಿ

ದ್ದುವು ಹೆಜ್ಜೆ ಹೆಜ್ಜೆಗೂ ತಾನುಗರ್ಭಿಣಿ ಎಂದು ದೇಹ ನೆನಪು ಮಾಡಿ ಕೊಡುತಿತ್ತು. ಆದರೂ ಆಕೆ ಉಸಿರೆತ್ತೆಲಿಲ್ಲ.

ಮುಖ ತೊಳೆದುಕೊಂಡು ಸೆರಗಿನಿಂದ ನೀರಹನಿ ಒರೆಸಿದ ಮೇಲೆ

ತುಂಗಮ್ಮ ಕೇಳಿದಳು:

"ಕಕ್ಕಸು ಎಲ್ಲಿ?"

"ಶುದ್ಧ ಮೂರ್ಖಳುನಾನು. ನಿಮ್ಮನ್ನ ಮೊದ್ಲೇ ಕೇಳ್ಬೇಕಾಗಿತ್ತು.

ಇಲ್ಲೇ ಇದೆ, ಬನ್ನಿ..."

....ಪ್ರಾತರ್ನಿಧಿಗಳನ್ನು ತೀರಿಸಿ ತುಂಗಮ್ಮ ಜಲಜೆಯರು ಆಫೀಸು

ಕೊಠಡಿಗೆ ಹಿಂತಿರುಗಿ ಬಂದಾಗ, ದಮಯಂತಿ--- ಅಲಮೇಲು ಇಬ್ಬರೂ ಅಳುತ್ತ ಕುಳಿತಿದ್ದರು. ದೀರ್ಘಸ್ರವಚನ ಮಾಡಿ ಮುಗಿಸಿ ಮೌನವಾಗಿ ಸರಸಮ್ಮ ವಿರಮಿಸುತಿದ್ದ ಹಾಗಿತ್ತು.

ಬೆಳಗ್ಗಿನ ತಿಂಡಿಯ ಹೊತ್ತು. ತುಂಗಮ್ಮ ಜಲಜೆಯರಿಗಷ್ಟೇ

ಕೊಠಡಿಗೆ ತರಿಸಿ, ಉಳಿದ ಆ ಇಬ್ಬರು ಹುಡುಗಿಯರನ್ನು ಅಲ್ಲಿಯೇ ಉಪವಾಸ ಇರಗೊಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಸರಸಮ್ಮ ಬೇರೆ ನಿಧಾರ್ರಕ್ಕೆ ಬಂದಿದ್ದರು.

"ಈ ಸಾರೆ ನಿಮ್ಮನ್ನ ಕ್ಷಮಿಸಿದೀನಿ ತಿಳೀತೆ?"

ಆ ಇಬ್ಬರೂ ಉತ್ತರನೀಯಲಿಲ್ಲ ಬಿಕ್ಕಿ ಬಿಕ್ಕಿ ಅಳುತಿದ್ದರು ಮಾತ್ರ.

"ಇನೊಂದ್ಸಲಿ ತಪ್ಪು ಮಾಡಿದ್ರೀಂದ್ರೆ---ನೋಡ್ಕೊಳ್ಳಿ ಆ ಮೇಲೆ"

ಆಗಲೂ ಹಾಗೆಯೇ ಇದ್ದರು ಹುಡುಗಿಯರು.

"ಇನ್ನು ಹೊರಡಿ!"

ಆ ಆಜ್ಜೆಯನ್ನಿತ್ತೊಡನೆ ಹುಡುಗಿಯರು ಹೊರಟರು. ಅವರ

ಹಿಂದೆಯೇ ಸರಸಮ್ಮ ತಾವು ಕೊಠಡಿಯ ಬಾಗಿಲು ದಾಟುತಿದ್ದಂತೆಯೇ ಸರಸಮ್ಮ, ತುಂಗಮ್ಮ ಜಲಜೆಯರತ್ತ ನೋಡಿ ಮುಗುಳ್ನಕ್ಕರು.

"ನೋಡಿದಿರಾ ಅಕ್ಕ? ನಮ್ಮಿಂದಾಗಿ ಇವತ್ತು ಅವರಿಬ್ರೂ ಬಚಾಯಿ

ಸ್ಕೊಂಡರು."

"ಹ್ಯಾಗೆ?"