ಈ ಪುಟವನ್ನು ಪ್ರಕಟಿಸಲಾಗಿದೆ

ಮನಸ್ಸನ್ನು ಸುತ್ತುವರಿದುವು ತುಂಗಮ್ಮ ದೊಡ್ದ ಸಂಸಾರವಂದಿಗಳು ಹಾಗಾದರೆ. ಆಕೆಗೆ ತಮ್ಮನೂ ಇದ್ದ. ತನಗೆ ?

ಯೋಚನೆಯೇ ಸ್ವರ ತಳೆದು ಹೊರಟ ಹಾಗೆ ಜಲಜೆಯ ಮಾತು

ಬಂತು:

"ನನಗೆ ಯಾರೂ ಇಲ್ಲ !"

_ನಿಧಾನವಾಗಿ,ಕುಗ್ಗಿದ ಸ್ವರದಲ್ಲಿ,ಅಳುವಿನ ಅಲೆಯಂತೆ ಬಂದ

ಮಾತು. ತುಂಗಮ್ಮನಿಗಾದರೋ ಸಂಬಂಧಿಕರಿದ್ದರು ಆದರೆ ಇದ್ದೂ ಏನಾಗಿತ್ತು? ಅಂತೂ, ತಾನು ಮತ್ತು ಜಲಜ ಇಬ್ಬರಿಗೂ ಆಸರೆಯನ್ನಿತ್ತುದು ಅಭಯಧಾಮವೇ ಅಲ್ಲವೆ?

ಇದು ನಿಜವಾಗಿದ್ದರೂ ಏಕಾಕಿನಿಯೆಂದು ಭಾವಿಸಿ ನೊಂದಿದ್ದ

ಜಲಜೆಯನ್ನು ತಾನು ಸಂತೈಸಬೇಕೆಂದು ತುಂಗಮ್ಮನಿಗೆ ತೋರಿತು.

"ನಿನ್ನ ತಾಯಿಗೆ ನೀನೊಬ್ಬಳೇ ಮಗಳಾ ಜಲಜ ?"

"ನಂಗೊತ್ತಿಲ್ಲ ತುಂಗಕ್ಕ.ತಾಯಿನ ಯಾರು ನೋಡಿದಾರೆ?"

"ಪಾಪ !ನೀನು ಕೂಸಾಗಿದ್ದಾಗಲೇ ತೀರಿಕೊಂ?"

"ಆ ವಿಷಯ ನಂಗೇನು ಗೊತ್ತು ತುಂಗಕ್ಕ ?"

ತುಂಗಮ್ಮನ ಗಂಟಲು ಕಕೊಂಡಿತು.ಮುಂದೇನು ಹೇಳಬೇಕೋ

ಆಕೆಗೆ ಹೊಳೆಯಲಿಲ್ಲ.

ಜಲಜೆಯೇ ತಡೆ ತಡೆದು ಉಗುರಿನಿಂದ ನೆಲ ಕೆರೆಯುತ್ತ ಒಂದೆರಡು

ವಿಷಯ ಹೇಳಿದಳು..

....ಕಡು ಬಡವರಾದ ತಾಯಿತಂದೆ ತಮ್ಮ ಏಳು ಮಕ್ಕಳೊಡನೆ ಗುಳೆ

ಹೊರಟು ಎಲ್ಲಿಂದಲೋ ಬಂದಿದ್ದರಂತೆ. ಜಲಜ ಆಗ ನಾ ವಗಳ ಮುದ್ದಾದ ಮಗು ಶ್ರೀಮಂತರೊಬ್ಬರ ಮಕ್ಕಳಿಲ್ಲದ ಯುವಕ ಹೆಂಡತಿ ಬೇಡಿ ಕಾಡಿ ಆ ಮಗುವನ್ನು ಇಸಕೊಂಡಳಂತೆ. ಆಕೆಯ ಪರವಾಗಿ ಮನೆಯ ಕೆಲಸದವಳು ಮಗುವನ್ನು ಸಾಕಿದಳು ಶ್ರೀಮಂತರ ಮನೆಯವರಿಟ್ಟ ಹೆಣ್ಣು ಮಗುವನ್ನೆ ಹತ್ತಳು. ಆ ಹೊಸ ಬೊಂಬೆಯ ಆಗಮನದ ಸಂಭ್ರಮದಲ್ಲಿ ಹಳೆಯ ಬೊಂಬೆಯ ಮೂಲೆ ಪಾಲಾಯಿತು.ದೊಡ್ದ ಮನೆಯ ಆವರಣದ.