ಈ ಪುಟವನ್ನು ಪ್ರಕಟಿಸಲಾಗಿದೆ

".....ಮೂಗಿ, ಜಲಜೆಗಾಗಿ ಒಂದು ತಟ್ಟೆಯಲ್ಲಿ ಇಷ್ಟು ಹಾಲನ್ನ

ತಂದಳು. ಬಡಿಸಿ ಸಿದ್ಧವಾಗಿದ್ದ ಇನ್ನೊಂದು ತಟ್ಟೆಯೂ ಲೋಟನೀರೂ ತುಂಗಮ್ಮನಿಗಾಗಿ ಬಂದುವು.

ಹೊಸಬಳಿಗೆ ಹೀಗೆ ಬಡಿಸಲು ತನಗೆ ಸಂತೋಷವಾಗಿದೆ ಎನ್ನುವಂತೆ

ಆ ಮೂಗಿ ಸದ್ದುಮಾಡಿದಳು ಆಕೆಯ ಹೂಂ - ಹೀಂ - ಕಿಕಿ - ವಿಕಿ ಸ್ವರ ಕೊಠಡಿಯ ತುಂಬ ಅಲೆವಾಡಿತು ತುಂಗಮ್ಮನಿಗಾಗಿ ತಂದಿಟ್ಟ ತಟ್ಟೆಯಲ್ಲಿ ನಜ್ಜಾಗಿದ್ದ ಒಂದು ಭಾಗವನ್ನು ಬೊಟ್ಟು ಮಾಡಿ ತೋರಿಸಿ ಮೂಗಿ ನಕ್ಕಳು.

ತುಂಗಮ್ಮನಿಗೆ ಅರ್ಧವಾಗಲಿಲ್ಲ.

"ಜಲಜ, ಇದೇನೆ ಈಕೆ ಹೇಳ್ತಿರೋದು ?"

- ಎಂದು ತುಂಗಮ್ಮ ಜಲಜೆಯನ್ನು ಕೇಳಿದಳು

ಮತ್ತೂ ಹೆಚ್ಚಿನ ಸದ್ದು ಮಾಡಿದಳು ಮೂಗಿ. ತಟ್ಟೆಯನ್ನು ಜಲಜೆಗ

ತೋರಿಸುತ್ತಾ, 'ನಿನಗೆ ಗೊತ್ತಿಲ್ಲವೇನೆ? ಈ ತುಂಗನಿಗೆ ಆರ್ಧವೇ ಆಗಲ್ವಂತೆ ನೀನು ಸ್ವಲ್ಪ ವಿವರಿಸಿ ಹೇಳೇ...' ಎನ್ನುವಂತೆ ಮೂಗಿ ಅಭಿನಯಿಸಿದಳು.

ಜಲಜೆಗೆ ವಿಷಯ ಅರ್ಧವಾಯಿತು. ಮುಖ ಆರಳಿತು. ಆದರೂ

ಆಕೆ ಬಾಯಿ ಬಿಡಲಿಲ್ಲ.

"ಏನಮ್ಮಾ ಆದು?"

- ಎಂದು ತುಂಗಮ್ಮ ಮತ್ತೊಮ್ಮೆ ಕೇಳಿದಳು

'ಹೇಳೇ ಹೇಳೇ' ಎಂದು ಮೂಗಿ ಆಭಿನಯಿಸಿದಳು ಮತ್ತೊಮ್ಮೆ.

'ನೀನು ಹೋಗಿ ಊಟ ವಾದ್ಮೇಲೆ ಹೇಳ್ತೀನಿ'

ಎಂಬ ಆಭಿನಯದ ಆಶ್ವಾಸನೆಯ ಬಳಿಕ ಮೂಗಿ ಕೊಠಡಿಯ ಹೊರಹೋದಳು.

ಜಲಜೆ ಸುಮ್ಮನಿದ್ದುದನ್ನು ನೋಡಿ ತುಂಗಮ್ಮ ಕೇಳಿದಳು:

"ಆದೇನು ಆನ್ತಾ ಇದ್ದಿದ್ದು ಆಕೆ?"

ಜಲಜ ನಕ್ಕಳು.

"ಹೇಳ್ಲೇ ಬೇಕೇನು? ಆದು ಇನ್ನೊಂದು ಕಧೆಯೇ ಆಗತ್ತೆ."

"ರಾಜಕುಮಾರ - ರಾಜಕಮಾರಿ ಕಥೇನೇನೊ!"