ಈ ಪುಟವನ್ನು ಪ್ರಕಟಿಸಲಾಗಿದೆ

"ನಾನು ದುರ್ಭಾಗ್ಯೆ ದೊಡ್ಡಮ್ಮ, ನನ್ನ ವಿಷಯ ಏನು ಹೇಳ್ಲಿ?"

"ಎಲ್ಲರೂ ಈ ಪ್ರಪಂಚದಲ್ಲಿ ಭಾಗ್ಯವಂತರಾಗೋದು ಸಾಧ್ಯವೆ

ತುಂಗ?"

"ನಾನು ತಪ್ಪು ಮಾಡಿದೀನಿ ದೊಡ್ಡಮ್ಮ."

"ಮಗೂ, ತಪ್ಪು ಮಾಡದೇ ಇರೋರ್ನ ಯಾರನ್ನಾದರೂ

ತೋರಿಸ್ತೀಯ?"

".........."

"ನಿಂಗ್ತಿಳೀದು ತುಂಗ. ಯಾವತ್ತಾದರೊಮ್ಮೆ ಪ್ರತಿಯೊಬ್ಬರೂ

ತಿಳಿದೋ ತಿಳೀದೆಯೋ ಏನಾದರೊಂದು ತಪ್ಪು ಮಾಡಿಯೇ ಮಾಡ್ತಾರೆ.'

ಎಷ್ಟೋ ತಿಂಗಳ ಮೇಲೆ ತಿಳಿವಳಿಕೆಯ ಹಿರಿಯೊಬ್ಬರಿಂದ ಬಂದ

ಸಹಾನುಭೂತಿಯ ಈ ಮಾತುಗಳು, ತುಂಗಮ್ಮನ ಅಳಲಿನ ಅಣೆಕಟ್ಟನ್ನು ಕುಲುಕಿದವು. ಫಳಕ್ಕನೆ ಚಿಮ್ಮಿಬಂದ ಕಣ್ಣೀರು, ಬತ್ತದ ಒರೆತೆಯಾಗಿ ನಿರ್ಲಜ್ಜವಾಗಿ ಎರಡೂ ಕೆನ್ನೆಗಳ ಮೇಲಿಂದ ಹರಿಯಿತು.

ಸರಸಮ್ಮ, ಅಭಯಧಾಮದ ನಿವಾಸಿಗಳ ಪೂರ್ವ ಚರಿತ್ರೆ ಬರೆದು

ಕೊಳ್ಳುವ ಆ ದೊಡ್ಡ ಪುಸ್ತಕವನ್ನು ಮುಚ್ಚಿದರು. ಕನ್ನಡವನ್ನು ತೆಗೆದು ಮೇಜಿನಮೇಲಿರಿಸಿದರು. ಒಂದು ಅಂಗೈಯಲ್ಲಿ ಇನ್ನೊಂದನ್ನು ಇರಿಸಿ ಕುರ್ಚಿ ಗೊರಗಿ ಕಾಲು ನೀಡಿ ತುಂಗಮ್ಮನನ್ನೇ ದಿಟ್ಟಿಸುತ್ತ ಕುಳಿತರು. ಆಡಳಿತದ ಸಮಿತಿಯವರೇನೋ ನಿಯಮ ನಿಬಂಧನೆಗಳನ್ನು ಗೊತ್ತು ಮಾಡಿದ್ದರು. ಏಕಪ್ರಕಾರವಾದ ಪ್ರಶ್ನಾವಳಿ.... ಆ ಪ್ರಶ್ನೆಗಳಿಗೆ ದೊರಕಿಸಿಕೊಳ್ಳಬೇಕಾದ ಉತ್ತರಗಳು... ಎಲ್ಲವೂ ವ್ಯವಸ್ಠಿತ, ಕ್ರಮಬದ್ಧ. ಆದರೆ ಮಾನವ ಜೀವಿಗಳು ಏಕ ಪ್ರಕಾರವಾಗಿಲ್ಲ ಅಲ್ಲವೆ? ಒಂದಕ್ಕಿಂತ ಇನ್ನೊಂದು ಎಷ್ಟೊಂದು ವಿಬಿನ್ನ! ಸರಸಮ್ಮ ಅದನ್ನು ತಿಳಿದಿದ್ದರು. ಹೆಚ್ಚು ಕಡಿಮೆ ಪ್ರತಿಸಾರೆಯೂ