ಈ ಪುಟವನ್ನು ಪ್ರಕಟಿಸಲಾಗಿದೆ

ಮನೆಯೊಳಗೆ ನಡೆದದ್ದನ್ನು ಯಾರಿಗೂ ಹೇಳುವ ಹಾಗಿರಲಿಲ್ಲ,

ಯಾರಿಗೂ.

....ವರನ ಕಡೆಯವರು ಏಲ್ಲಾ ಶಾಸ್ತ್ರಗಳನ್ನೂ ಮುಗಿಸಿ ಮರುದಿನವೇ

ಹೊರಟರು

ಹೊರಡುವುದಕ್ಕೆ ಮುಂಚೆ ಮೈಸೂರಿನ ಹುಡುಗಿ ಬಂದು ಕೇಳಿದಳು

"ನಾಣಿ ಮತ್ತು ನಾನು ಹೋಗ್ತೀನಿ ತುಂಗಮ್ಮ."

ಆವರೆಗೂ ಆತನ ಹೆಸರು ತುಂಗಮ್ಮನಿಗೆ ತಿಳಿದಿರಲಿಲ್ಲ. ಈಗ ತಿಳಿದ

ಹಾಗಾಯಿತು ಆದರು ಆಕೆ ಕೇಳಿದಲು:

"ಯಾರು ನಾಣಿ ಅಂದ್ರೆ?"

"ಓ! ಇದ್ಬೇರೆ! ನಾರಾಯಣಮೂತಿರ್ ಕಣೇ- ನಮ್ಮಣ್ಣ"

"ಹಾಗೋ ಅವರ ಹೆಸರು?"

"ಹ್ಯಾಗೆ ಹೇಳು?"

"ನಾರಾಯಣ ಮೂತೀರ್ಂತ"

"ಹೆಸರು ಹೇಳ್ಬಿಟ್ಟಯಲ್ಲ್ಲೇ.!"

"ಸಾಕು ಹೋಗು!"

"ಏನ್ಹೇಳ್ಲಿ ನಮ್ಮಣ್ನಿಗೆ?"

"ಇನ್ನೊಂದ್ಸಲಿ ಈ ಮನೆಗೆ ಬಂದ್ರೆ ಹಲ್ಲು ಮುರ್ದು ಕೈಗೆ ಕೊಡ್ತೀ

ನೀಂತ ಹೇಳು!"

ನಗುತ್ತ ತಮಾಷೆಯಾಗಿ ಹಾಗೆ ಹೇಳಬೇಕೆಂದುಕೊಂಡಿದ್ದರೂ

ತುಂಗಮ್ಮ,ಆ ಮಾತು ಹೇಳಿದಾಗ ಗಂಭೀರಳಾಗಿಯೇ ಇದ್ದಳು.

ಆ ಹುಡುಗಿಗೆ ಚೇಳು ಕುಟುಕಿದ ಹಾಗಾಯಿತು

"ಓ" ಎಂದವಳು ಮುಖತಿರುಗಿಸಿಕೊಂಡು ತನ್ನ ಪರಿವಾರ ಸೇರಿದಳು.

ಪರಿವಾರವನ್ನು ರೈಲು ನಿಲ್ದಾಣಕ್ಕೆ ಕರೆದೊಯ್ಯಲೆಂದು ಜಟಕಾಗಾಡಿಗಳು ಬಂದು ಸಾಲಾಗಿ ನಿಂತವು. ಗುರಿಯಿಲ್ಲದೆ ಅಲೆಯುತಿದ್ದ ತುಂಗಮ್ಮನ ದೃಷ್ಟಿಗೆ ನಾರಾಯಣಮೂತಿರ್ ಬೀಳದೆ ಇರಲಿಲ್ಲ. ತನ್ನ ತಂಗಿಯಿಂದ, ತುಂಗಮ್ಮನ ಬೆದರಿಕೆಯ ಸಂದೇಶವನ್ನು ಕೇಳಿ ತಿಳಿದಿದ್ದ ಆತ ಮುಗುಳು ನಗಲು ಪ್ರಯತ್ನಿಸಲಿಲ್ಲ.