ಈ ಪುಟವನ್ನು ಪ್ರಕಟಿಸಲಾಗಿದೆ

ತಾವಿಬ್ಬರೇ ಇರುತಿದ್ದರು.ಕಳ್ಳತನದಿಂದ ತಮಗೆ ಪ್ರಿಯವಾಗಿದ್ದುದನ್ನು ಕೊಟ್ಟು ಪಡೆಯುತಿದ್ದರು.

ಒಂದು ದಿನ ತುಂಗಮ್ಮ ಕೇಳಿದಳು:

"ಯಾವತ್ತು ?"

"ಏನು ?"

"....ಮದುವೆ."

"ಅಪ್ಪಯ್ಯನಿಗೆ ಕಾಗದ ಬರೀತೀನಿ ತುಂಗ."

"ಖಂಡಿತ ?"

"ಅಲ್ದೆ !"

"ಅದಷ್ಟು ಬೇಗ್ನೆ ಆಗ್ಬೇಕು.ನಿಮ್ಮನ್ನ ಬಿಟ್ಟು ಇರೋಕೆ ಆಗಲ್ಲ

ನಂಗೆ."

"ನಂಗಾಗುತ್ತೇನೊ ಬಿಟ್ಟಿರೋಕೆ !"

"ಪದ್ದಕ್ಕನಿಗೆ ಬರೀಲಾ ?"

"ಏನೂಂತ ?"

"ಅದೇ,ಈ ವಿಷಯ."

ಥಟ್ಟನೆ ಒಪ್ಪಿಗೆಯ ಉತ್ತರ ಬರುವುದೆಂದು ತುಂಗಮ್ಮ ನಿರೀಕ್ಷಿ

ಸಿದ್ದಳು.

ಆದರೆ ಹಾಗಾಗಲಿಲ್ಲ.

ತುಂಗಮ್ಮ ತಲೆಯೆತ್ತಿ,ಆಮನಸನ್ನು ಓದಬಯಸಿದವಳಂತೆ ಸೂಕ್ಷ್ಮ

ವಾಗಿ ಆತನ ಮುಖವನ್ನೆ ದಿಟ್ಟಿಸಿದಳು.

"ಯಾಕೆ,ಇಷ್ಟವಿಲ್ವಾ ನಿಮಗೆ ?"

"ಹಾಗಲ್ಲ ತುಂಗಾ."

"ಮತ್ತೆ ?"

"ಇನ್ನೂ ಸ್ವಲ್ಪದಿನ ತಡಿ.ಏನೀಗ ಅವಸರ ?"

ಅವಸರವೇನೂ ಇರಲಿಲ್ಲ ಅಲ್ಲವೆ !ಆಕೆ ತಡೆದ್ದಿದ್ದ ಅಷ್ಟೊಂದು

ದಿನಗಳೂ ಅಲ್ಪವಾಗಿ ಹೋದುವು ಅಲ್ಲವೆ ?

ತುಂಗಮ್ಮ ತಲೆಬಾಗಿಸಿದಳು.ಮನಸಿನ ಕ್ಷೋಭೆ ಕಣ್ಣೀರಿನ

ರೂಪತಳೆದು ಒತ್ತರಿಸಿಕೊಂಡು ಬಂತು.