ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ೨೧೨ "ಈಗೆಲ್ಲಿಂದ ಬಂದೆ ಅಮ್ಮಿ ? " " ಬೆಂಗಳೂರಿಂದ ಬಂದೆ ಕಣಪ್ಪ, ನನ್ನ ಮಗ ಅಲ್ಲೇ ಇದಾನೆ ಕಾಲೇಜ್ನಲ್ಲಿ ಓದ್ತಿದಾನೆ. ... ಈಗ ಪರೀಕ್ಷೇಂತ ಪಕ್ಕದ್ಮನೆ ಈ ಹುಡುಗನ್ನ ಜತೆ ಕೊಟ್ಟ ಕಳಿಸಿದಾನೆ. ಪರೀಕ್ಷೆ ಮುಗಿಸಿ ಆತನೂ ಬಂದ್ಬಿಡ್ತಾನೆ . . . ಮಗಳ್ನ ಬೊಂಬಾಯಿಗೆ ಕೊಟ್ಟಿದೀನಿ ನಾಣಿ... ಈಗ ಬಸುರಿ . . . ಚೊಚ್ಚಲು . . ." ಆ ಕಿಂವದಂತಿಗೆ ಆಧಾರವಿತ್ತು ಹಾಗಾದರೆ, ನಾಣಿ ಗಾಬರಿಯಿಂದ ಎಡಕ್ಕೂ ಬಲಕ್ಕೂ ನೋಡಿದ. ಬಂದವರಿಗಾಗಿ ಅಡುಗೆಯ ಏರ್ಪಾಡಿಗೆಂದು اಅವನ ಹೆಂಡತಿ ಒಳ ಹೋಗಿದ್ದಳು. ನಾಣಿ ನಿಟ್ಟುಸಿರುಬಿಟ್ಟರೂ ಸಂತೋಷವಾಗಿರಲು ಯತ್ನಿಸುತ್ತ, "ಚೆನ್ನಾಗಿದೀಯಾ ಒಟ್ನಲ್ಲಿ?" ಎಂದ. ಒಟ್ಟಿನಲ್ಲಿ--- "ನನ್ನ ನೋಡಿದರೆ ಹ್ಯಾಗನಿಸುತ್ತಪ್ಪಾ ?” ತನ್ನದು ತಪ್ಪಿಲ್ಲ, ತನಗೊಂದೂ ತಿಳಿಯದು, ಎಂಬಂತೆ ಆತ ತಲೆಯಾಡಿಸಿದ. " ರಂಗಣ್ಣ ಎಲ್ಲಿ ? --" ಮರತೇ ಬಿಟ್ಟೆ ಹೇಳೋಕೆ... ಮದುವೆಯಾದ್ಮೇಲೆ ಈಗ ಹತು ವರ್ಷದಿಂದ ಇನ್ನೊಂದು ಹಳ್ಳೀಲಿದಾನೆ... ಇಬ್ಬರು ಮಕ್ಕಳು. . . ಅಲ್ಲೇ ಒಂದಿಷ್ಟು ಜಮೀನಿದೆ."

" ಪಾಲಾಯ್ತು ಅನ್ನು." -
ー'ಅವರು' ಇದ್ದಿದ್ದರೆ ಸೋದರರು ಮೂವರಾಗುತ್ತಿದ್ದರು, ಮೂರು ಪಾಲು. 

"ಹೂಂ.. ಹಾಗೇಂತ್ಲೆ ಅನ್ವೇಕು. ಇಲ್ಲಿ ಆಡ್ತಾ ಇದ್ದಲ್ಲ ಹುಡುಗಿ? ಆಕೆ ನನ್ಮಗಳು. ದೊಡ್ಡೋನು ಚಿಕ್ಕಮಗಳೂರಲ್ಲಿ ಹೈಸ್ಕೂಲ್ ಓದ್ತಾ ಇದಾನೆ . . ." ದೇವರಂತಹ ಮಾವನಿರಲಿಲ್ಲ. ಪ್ರೀತಿಯ ಅತ್ತೆ ಇರಲಿಲ್ಲ, ಆದರೂ ಆ ಮನೆತನದ ಮಲ್ಲಿಗೆ ಬಳ್ಳಿ ಅಡರಿಕೊಂಡು ಚಪ್ಪರವೇರುತ್ತಿತ್ತು, ಹಿರಿಯ ಮಗನ ಹೆಂಡತಿಯಾಗಿ ತನ್ನದಾಗಬೇಕಾಗಿದ್ದ ಗೌರವ ಅದು. ತನಗೆ ಮಕ್ಕಳಿದ್ದಾರೆ, ಆದರೆ ಆ ಗೌರವವಿರಲಿಲ್ಲ. ನಾಣಿ ಮನಸ್ಸಿನೊಳಗೂ ಹೊರಗೂ ಯಾವ ಭೇದಭಾವವನ್ನೂ ಕಲ್ಪಿಸದೆ,ಮಿಂದು ಮಡಿಯುಟ್ಟ ನಿಂತಿದ್ದ ಅಮ್ಮಿಯನ್ನು ಅಡುಗೆ ಮನೆಗೊಯ್ದ, ಊಟಕ್ಕೆಂದು. . . ತಾನು ಸೊಸೆಯಾಗಿ ಓಡಾಡಿದ್ದ ಅಡುಗೆ ಮನೆ. ನೆನಪಿನ ಬುತ್ತಿ ಮುಗಿಯದೇ ಇದ್ದ ಆ ಹೊತ್ತಿನಲ್ಲಿ, ಎದುರಿಗಿದ್ದ ಸೊಗಸಾದ ಅನ್ನವನ್ನು ಗಂಟಲಿನೊಳಗೆ ತುರಕುವುದು ಸಾಧ್ಯವಾಗಲಿಲ್ಲ. "ಯಾಕಮ್ಮೀ,ಇಷ್ಟೇ ಉಣ್ತಿದೀಯಾ?" "ನಂಗೆ ಹಸಿವಿಲ್ಲಪ್ಪ..."

"ಹೋಗಲಿ, ರಾತ್ರೆ ಬೇರೆನಾದ್ರೂ ಮಾಡಿಸೋಣವಂತೆ."
"ರಾತ್ರೆ! ರಾತ್ರೆಯನೂ ಆ ಮನೆಯಲ್ಲಿ ತಾನಿರಬೇಕೆ?" " ಇಲ್ಲ ನಾಣಿ... ಸಾಯಂಕಾಲ ಒಂದು ಮೋಟಾರಿದೆಯಂತಲ್ಲ. ಅದರಲ್ಲಿ ಜೀವನಹಳ್ಳಿಗೆ ಹೋಗ್ತೀನಿ... . ."

T

  • *