ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ಸುಟ್ಟು ಬೂದಿಮಾಡಿದ ಹಳ್ಳಿಯ ಆ ಮೂಲೆ... ಆ ಬಳಿಕ ಗಾಡಿ ಎಡಕ್ಕೆ ತಿರುಗಿ ಕೊಂಡು ಮುಂದೆ ಸಾಗಿತು. ಎತ್ತರವಾದ ಬೆಟ್ಟದೊಂದು ತಪ್ಪಲು ನೋಟಕ್ಕೆ ತಡೆಯಾಗಿ ನಿಂತು ರಾಯನಹಳ್ಳಿಯನ್ನು ಅಮ್ಮಿಯ ದೃಷ್ಟಿಯಿಂದ ಮರೆಮಾಡಿತು. ಆ ಕಣಿವೆಯಲ್ಲಿ ಗಾಡಿ ಸರಿಯಾಗಿ ಇಳಿಯಲಿಲ್ಲವೆಂದು ಗಾಡಿಯವನು ಎತ್ತುಗಳಿಗೆ ಗದರಿಸುತ್ತಿದ್ದ: "ನಿಮ್ ಮುಂಡಮೋಚ್ತು" ಜಪ್ಪೆನ್ನಲಿಲ್ಲ ಎತ್ತುಗಗಳು, "ನಿಮ್ ತಲೆ ಬೋಳಿಸ್ತು." ಜತೆಯಲ್ಲೆ ಬಾರು ಕೋಲಿನ ರಪ್ ರಪ್ ಸದ್ದು. ಮಾವ ಮೃದುಧ್ವನಿಯಲ್ಲಿ ಅಂದರು : " ಹಾಗನ್ಬಾರದಪ್ಪಾ–ಮೂಕ ದನಗಳಿಗೆ ಹಾಗೆ ಅಂತಾರೇನು? ಆರೀತಿ ಹೊಡೀ ತಾರೇನು?"

ಗಾಡಿ ಜೀವನಹಳ್ಳಿ ಸೇರಿದ ರಾತ್ರೆ ಹಾಲು ಚೆಲ್ಲಿದ ಹಾಗೆ ಬೆಳದಿಂಗಳಿತ್ತು, ಹೊಲಗಳಾಚೆ ಗಾಡಿ ನಿಂತಲ್ಲಿಗೇ ಬಂದ ರಾಮಕೃಷ್ಣ ಅವರನ್ನೆಲ್ಲ ಇದಿರ್ಗೊಂಡ, ಗಾಡಿಯಿಂದ ಇಳಿ ಯುತ್ತಿದ್ದವರನ್ನು ನೋಡುತ್ತ ಅವನೆಂದ : "ಆತ್ತೆ ಬರಲಿಲ್ವೆ ಮಾವಯ್ಯ ? ನಾಣಿನೂ ಬರಲಿಲ್ಲ!" "ಇಲ್ಲವಪ್ಪ, ಆಕೆಗಂತೂ ಮೈ ಚೆನಾಗಿಲ್ಲ. ಮನೇಲೂ ಯಾರಾದರೂ ಇರಬೇಡ್ವೆ?" ಆ ಮಾತು ನಿಜವಾಗಿದ್ದರೂ ರಾಮಕೃಷ್ಣನ ಮನಸ್ಸಿಗೆ ನೋವಾಯಿತು. ಆದರೂ; ಅದನ್ನು ಮರೆಯಲೆತ್ನಿಸುವವನಂತೆ ಆತ ಹೇಳಿದ: "ಅಜ್ಜಿ ಬಂದಿದ್ದಾರೆ ಅಮ್ಮಿ, ಬಾಳೆಮಣ್ಣೂರಿಂದ, ಅಂತೂ ಮೊಮ್ಮಗನ ಮದುವೆ ಗಾದರೂ ಬಂದ್ರು ! " "ಓ!" ಎಂದು ಸಂತೋಷದಿಂದ ಅಮ್ಮಿ ಉದ್ಗಾರವೆತ್ತಿದಳು. ತನ್ನ ಹುಟ್ಟು ಹಳ್ಳಿಗೆ ಮತ್ತೆ ಬಂದಿದ್ದಳು ಅಮ್ಮಿ, ಬಾಲ್ಯದ ಬವಣೆಗಳನ್ನೆಲ್ಲ ಬೊಂಬೆಯಾಟವಾಗಿ ಮಾರ್ಪಡಿಸಿದ್ದ ಆ ವಾತಾವರಣ ಎಷ್ಟು ಹಿತಕರ! ಈಗ ರಾತ್ರೆ.. ಬೆಳಗಾದ ಮೇಲೆ ಶಾನುಭೋಗರ ಮನೆಗೆ ಓಡಬೇಕು.ಅವರ ಮಡದಿ, ಮಗಳೆು.ಮೂರು ವರ್ಷಗಳಾಗಿದ್ದುವ ಅಮ್ಮಿ ಜೀವನಹಳ್ಳಿಯಿಂದ ಹೊರಟು, ಅವು ಕ್ಷಣಮಾತ್ರವೆಂಬಂತೆ ಕಳೆದು ಹೋದ ಮೂರು ವರ್ಷಗಳು. ಆ ಅವಧಿಯಲ್ಲಿ ಎಂತೆಂತಹ ಅನುಭವಗಳಾಗಿದ್ದುವು ಅವಳಿಗೆ! ಹುಡುಗ ರಂಗ ಆಯಾಸದಿಂದ ಆಗಲೆ ತೂಕಡಿಸುತ್ತಿದ್ದ. ಅವರೆಲ್ಲರೂ ಬೇಗ ಬೇಗನೆ