ಈ ಪುಟವನ್ನು ಪರಿಶೀಲಿಸಲಾಗಿದೆ
ಪ್ರಕಾಶಕರ ನುಡಿ

ನಿರಂಜನರ ಪ್ರಥಮ ಕಾದಂಬರಿ 'ವಿಮೋಚನೆ' ಯಿಂದ ಆರಂಭವಾಗಿ ಹೊಸ ಕಾದಂಬರಿ 'ಮೃತುಂಜಯ'ದ ತನಕ ಒಟ್ಟು ೧೦ ಕಾದಂಬರಿಗಳನ್ನು ಕಥಾಸಾಹಿತ್ಯದ ಈ ಸರಣಿಯಲ್ಲಿ ಈ ವರ್ಷ ಹೊರತರುತ್ತಿದ್ದೇವೆ. ಈಗಾಗಲೇ ಪ್ರಕಟವಾಗಿರುವ ಕೃತಿಗಳು : 'ವಿಮೋಚನೆ '. ' ರಂಗಮ್ಮನ ವಠಾರ', 'ನೋವು', 'ನಂದಗೋಕುಲ', 'ಅಭಯ' ಮತ್ತು 'ಕಲ್ಯಾಣ-ಸ್ವಾಮಿ', ಏಳನೆಯದು 'ಬನಶಂಕರಿ', ಮುಂದಿನವು: 'ಬಂಗಾರದ ಜಿಂಕೆ', 'ಸ್ವಾಮಿ ಅಪರಂಪಾರ' ಮತ್ತು 'ಮೃತ್ಯುಂಜಯ'.

'ಬನಶಂಕರಿ 'ಯ ಪ್ರಥಮ ಆವೃತ್ತಿ ಪ್ರಕಟವಾದದ್ದು ೧೯೫೪ ರಲ್ಲಿ, ಮೈಸೂರಿನ ವಿದ್ಯಾನಿಧಿ ಬುಕ್ ಡಿಪೋ ಅವರಿಂದ ಎರಡನೇ ಮುದ್ರಣ ೧೯೫೯ ರಲ್ಲಿ ತಿಪಟೂರಿನ ಸುದರ್ಶನ ಪ್ರಕಾಶನದವರಿಂದ ಹೊರಬಂತು.

ಇಲ್ಲಿ ಬಳಸಿರುವ ಮುದ್ರಣ ಕಾಗದವನ್ನು ಪಡೆಯಲು ನೆರವಾದ ಕರ್ನಾಟಕ ಪ್ರಕಾಶಕರ ಮತು ಪುಸ್ತಕವ್ಯಾಪಾರಿಗಳ ಸಂಘದ ಅಧ್ಯಕ್ಷ ಶ್ರೀ ಎಚ್. ಕಮಲಾನಾಥ್ ಅವರಿಗೂ ಸೊಗಸಾದ ಮುದ್ರಣಕ್ಕೆ ಕಾರಣರಾದ ಬೃಂದಾವನ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರಕ್ಟರ್ ಶ್ರೀ ಎಂ. ಎಚ್. ಕೌಜಲಗಿ ಅವರಿಗೂ ಕಥಾ ಸಾಹಿತ್ಯ ಋಣಿಯಾಗಿದೆ.

ಆಗಸ್ಟ್ ೩೦, ೧೯೭೬
೫೧೫, ೭ನೇ ಮುಖ್ಯ ರಸ್ತೆ
೫ನೇ ಬ್ಲಾಕ್
ಜಯನಗರ ದಕ್ಷಿಣ
ಬೆಂಗುಳೂರು - ೫೬೦೦೪೧

ತೇಜಸ್ವಿನೀ ನಿರಂಜನ
ಕಥಾಸಾಹಿತ್ಯ ಪರವಾಗಿ