ಈ ಪುಟವನ್ನು ಪರಿಶೀಲಿಸಲಾಗಿದೆ

 " ಹಸಿವಿಲ್ಲಕ್ಕ ನಂಗೆ." "ಹಾಗಾದರೆ ನಾನೂ ಸುಮ್ನಿರ್ತಿನಿ.. ಇಬ್ಬರೂ ಉಪಾಸ ಇದ್ದಿಡೋಣ .. " ನೀನು ಊಟಮಾಡು ಹೋಗಕ್ಕ." " ಏಳು ಹಾಗಾದರೆ ನೀನೂ." ಅದಾದ ಮೇಲೆ ನಿದ್ದೆ. "ಮಲಕೋತಿಯೇನೆ? " ಮೌನ. "ನಿದ್ದೆ ಬಂತೇನೆ ಬನೂ?" " ಹುಂ? ಏನಕ್ಕ?" ಅನಾಯಾಸವಾಗಿ ದೊರೆತಿದ್ದ ಅಕ್ಕನ ಮನೆಯಲ್ಲಿ ಆ ಬಳಿಕ ನಿದ್ದೆ..ದಿನಗಳು ಕಳೆದುವು. ನಾಲಗೆಗಳು ಮತ್ತೆ ಮಾತನಾಡಿದುವು. ಅಲ್ಲಿಂದ ಇಲ್ಲಿಂದ ಬರುತ್ತಿದ್ದ ಸಹಾನು భూకియు ಸ್ವರವನ್ನು ಅಣಕಿಸಿ, ಭರ್ತ್ಸನೆಯ ಕುಟಿಲ ನುಡಿಗಳು ಕುಣಿದಾಡಿದುವು ' అంತು ಬನಶಂಕರಿ ! " " ಛೆ! ಪಾಪ! ಹಾಗೆಲ್ಲ ರಾಮಶಾಸ್ತ್ರಿ ಬಿಟಾಕಾನೇನ್ರಿ?' 'ಹೆಂಡತಿ ಬಸುರಿ. ಯಾರಾದರೊಬ್ಬರು ಬೇಕೇಬೇಕಲ್ಲ ಕೆಲಸಕ್ಕೆ–ಮನೆಗೆಲಸಕ್ಕೆ! ಕೆಲವರು ಯೋಚಿಸಿದರು: ಹೇಗಾದರೂ ಮಾಡಿ ಬನಶಂಕರಿಯನ್ನು ರಾಮಶಾಸ್ತ್ರಿ ಮನೆಯಿಂದ ಹೊರಹಾಕಿಸಬೇಕು : ಆ ಬಳಿಕ ಎಲ್ಲವೂ ಸುಲಭ! ಆದರೆ, ಒಳಗಿಂದ ಜ್ವಾಲಾಮುಖಿ ಕುದಿಯುತ್ತಿದ್ದರೂ ಹೊರಗಿಂದ ರಾಮಶಾಸ್ತ್ರಿ ಶಾಂತನಾಗಿದ್ದ. ಯಾವ ನಿಂದೆಯೂ ಅವನ ತಾಳ್ಮೆಯನ್ನು ಕದಡಿದಂತೆ ತೋರಲಿಲ್ಲ. ಸುಂದರಮ್ಮನೊಮ್ಮೆ ದೇವಸ್ಥಾನಕ್ಕೆ ಹೋಗಿದ್ದಾಗ ಯಾರೋ ಹೆಂಗಸು ಕೇಳಿದಳು: " ಎಲ್ಲಿ ಸುಂದರಮ್ಮೊರೆ–ದೇವರ ದರ್ಶನಕ್ಕೆ ನೀವು ಬರೋದು ಕಡಿಮೆ ಆಗ್ಬಿಡ್ರೇ..." " ಯಾಕ್ರೀ ಹಾಗಂತೀರ? ನಿಮ್ಮ ಮುಖ ಆಗಾಗ್ಗೆ ನೋಡ್ರಿಲ್ತಿನಲ್ಲ?" ಸದ್ಯಃ, ಸುಂದರಮ್ಮ ಮುಖ' ಎಂದಳು : ಮೂತಿ' ಎನ್ನಲಿಲ್ಲ. " ಅಲಾ, ಹಿಂದೆ ನಿಮ್ಮವೂ ನೀವೂ ಜತೇಲೆ ಹೋಗಾ ಬರಾ ಇದ್ರಿ. ಈಗ ಒಬ್ಬರೇ ಇದೀರಲಾ, ಅದಕ್ಕೆ ಹೇಳ್ವೆ, ಕೊಪಿಸ್ಕೋಬೇಡಿ ನನಾಯಿಗೂ... "ಜತೇಲೆ ಬರಾ ಇದಾಗ ನೋಡೋಕೆ "ನಿಮ್ಗೆನಪ್ಪ ಮಾತೆತ್ತಿದರೆ ಕೊಂಕು." "ಸಾಕ್ರಿ! ಎಳೇ ಮಗು...ವಾಪ--ನನಾತು ಕೇಳಿ ನೋವಾಯೆನೋ!!" .ಒಂದು ದಿನ ಸುಂದರಮ್ಮ ವೈದ್ಯರಲ್ಲಿಗೆ ಹೋಗಿದ್ದಳು. ಅಲ್ಲಿಂದ ಹಿಂತಿರುಗಿದಾಗ ಹಾದಿಯಲ್ಲಿ ಕಾಣಲು ದೊರೆತ ಹೆಂಗಸೊಬ್ಬಳು ಅಂದಳು.: "ಔಷಧಿ ತರೋಕೆ ಹೋಗಿದ್ರಿಂತ ಕಾಣುತ್ತೆ." " ಹೂನಮ್ಮ ." " ಔಷಧಿ-ನಿಮಗೋ ಬನಶಂಕರಿಗೋ ? " ಸುಂದರಮ್ಮ ಕಣ್ಣು ಕೆರಳಿಸಿ ಸಿಡಿನುಡಿದಳು: