ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ

ಬಾಧಿಸಿತು. ಆದರೆ ಅಂತಹ ತುಮುಲ ದೀರ್ಘಕಾಲವಿರುತ್ತಿರಲಿಲ್ಲ, ಅನಾಯವಾಗಿ ಬೀದಿಪಾಲಾಗಬೇಕಾದವಳನ್ನು ತಾನು ರಕ್ಷಿಸುತ್ತಿದ್ದೇನೆ ಎಂದಿತು ಮನಸ್ಸಿನೊಂದು ಭಾಗ. ಆ ಭಾಗದ ಯೋಚನೆಯನ್ನು ಕಂಡು ಇನ್ನೊಂದು ಭಾಗ ನಕ್ಕಿತು. ಯತಿಗಳು ಸುಮ್ಮನಿರಲಿಲ್ಲ. ನಾರಾಯಣರಾಯರ ಆಸಕ್ತಿಯನ್ನು ತಿಳಿಯದ ಅವರು ರಾಮಶಾಸ್ತ್ರಿಯ ಮೇಲೆಯೇ ಹರಿಹಾಯ್ದರು. ಯಾವ ನಾಚಿಕೆಯೂ ಇಲ್ಲದೆ ಬನಶಂಕರಿಗೆ ನೆರವಾಗಿ ಹೇಳಿ ಕಳುಹಿದರು. ಆಕೆ ನದಿಗೆ ಹೊರಟಾಗಲೆಲ್ಲ ಮಠದ ದೂತ ಹಿಂಬಾಲಿಸತೊಡಗಿದ. " ಏನಮ್ಮ ಬನಶಂಕರಿ ? ಎಷ್ಟು ದಿವಸಾಂತ ಆ ರಾಮಶಾಸ್ತ್ರಿಯ ಭಿಕ್ಷಕ್ಕೆ ಕೈಯೊಡ್ರೀ ಯಮ್ಮ ನೀನು ?" ಸಾಧ್ಯವಿದ್ದಷ್ಟು ದಿವಸ ಅಂತಹ ಮಾತುಗಳನ್ನು ಅಮ್ಮಿ ಸಹಿಸಿದಳು. ಆಮೇಲೆ ಆತ್ಮರಕ್ಷಣೆಗೆಂದು ವ್ಯಗ್ರಳಾದಳು. "ನಿಮ್ಮ ಹಾದಿ ಹಿಡಿದು ನೀವು ಹೋಗಿ.. ಇನ್ನೊಮ್ಮೆ ಮಾತಾಡ್ಸೋಕೆ ಬಂದ್ರೆ, ಮ೦ಗಳಾರತಿ ಮಾಡ್ರಿಡ್ತೀನಿ ! " " ಓ! ಅಷ್ಟು ಧೈರ್ಯ! " "ಸಾಕು! ನಾಚಿಕೆ ಆಗೋದಿಲ್ಲ ನಿಮಗೆ?" " ನಮಗಾಕಮಾ ನಾಚಿಕೆ? ನಾವೇನು ಬಸವಿಯ ಹಾಗೆ ಬೆಳೀತಾ ಊರ ಚಾಕರಿ ಮಾಡ್ರಿದ್ದೇವೇನು?" "ಏನಂದಿರಿ?" " ಏನೋ ಅಂದೆ. ನಿನ್ಮೇಲೆ ದಯೆ ಇಟ್ಟು ಸ್ವಾಮಿಗು ಹೇಳಿಕಳಿಸಿದ್ರೆ ಇಂಥ ಮಾತಾಡ್ರೀಯಲ್ಲಾ ! " .ಬನಶಂಕರಿ ಆ ವಿಷಯವನ್ನು ಸುಂದರಮ್ಮನಿಗೆ ತಿಳಿಸಲಿಲ್ಲ, ಹಾಗೆ ಹೇಳಿ, ತುಂಬಿದ ಬಸುರಿಯಾದ ಸುಂದರಮ್ಮನಿಗೆ ತೊಂದರೆಕೊಡಲು ಆಕೆ ಇಷ್ಟಪಡಲಿಲ್ಲ. ರಾಮ ಶಾಸ್ತ್ರಿಗೂ ಆ ವಿಷಯ ಹೇಳಲಿಲ್ಲ, ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂಬ ಭೀತಿ ಯಾಯಿತು ಅವಳಿಗೆ. ತನ್ನ ಭವಿಷ್ಯತ್ತಿನ ಬಗೆಗೂ ಭಯವಾಯಿತು. ಕೆಲವು ದಿನಗಳ ಮೇಲೆ ನಾರಾಯಣರಾಯರು ಮತ್ತೊಮ್ಮೆ ಕಾಣಲು ದೊರೆತರು. ಅವರನ್ನು ಕಂಡಾಗ ಅಮ್ಮಿಗೆ ಸಮಾಧಾನವೆನಿಸಿತು. ನದಿಯಿಂದ ಹಿಂತಿರುಗುವಾಗ ನಾಲ್ಕು ಮಾರು ದೂರದಲ್ಲೇ ಆಕೆಯನ್ನು ಹಿಂಬಾಲಿಸುತ್ತಾ ಅವರು ಬ೦ದರು. ನಾರಾಯಣರಾಯರೆಂದರು: "ರಾಮಶಾಸ್ತ್ರಿ ಮನೇಲಿದಾರೇನು ?" "ಇದಾರೆ," ಮನೇಲಿ ಎಲ್ರೂ ಚೆನ್ನಾಗಿದಾರಾ? ಅವರಿಗೆ ಎಲ್ಲ ವಿಷಯವೂ తిళిదిದೆ ಎಂದುಕೊಂಡಳು ಅಮ್ಮಿ, “ಚೆನಾಗಿದ್ದಾರೆ..."