ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ೯೩ ....ಆ ಒಂದು ದಿನ ಮೊನಚಾದ ಈಟಿಯಿಂದ ಬಲವಾಗಿ ತಿವಿದಹಾಗೆ ಆ ಮಾತು ಬಂದಿತ್ತು. "ಅಂತೂ ಕೊನೆಗೆ ಎಂಥಾ ವಿನೋ ಬುಟ್ಟಿಗ್ಬಿತು ನೋಡು!"

ಹಾಗೆ ಹೇಳಿದ ಹೆಂಗಸು ಮಿನಿನ ಬುಟ್ಟಿಯನ್ನು ಎಂದಾದರೂ ಕಂಡಿದ್ದಳೋ ಇಲ್ಲವೋ ! ಆದರೆ ಬನಶಂಕರಿಯನ್ನು ಬಲೆ ಬೀಸುವ ಬೆಸ್ತರವಳೆಂದು ಕರೆಯಲು ಆಕೆ ಹಿಂದು ಮುಂದು ನೋಡಲಿಲ್ಲ.

ಅಮ್ಮಿಗೆ ನದೀದಂಡೆಯ ಕೊಂಕುಮಾತಿನ ಅರ್ಥವಾಗಿತು, ಹಾಗಾದರೆ ನಾರಾಯಣ ರಾಯರೊಡನೆ ತಾನು ಮಾತನಾಡುತ್ತಿದ್ದುದನ್ನು ಯಾರೋ ನೋಡಿದ್ದರೆಂದಾಯಿತು. ಮತ್ತೊಂದು ಸ್ವರ :

"ಆಹಾ! ಅದೇನು ಚಕ್ಕಂದವೊ! ಅದೇನು ಸರಸಸಲಾಪವೊ!" "ಹೋಗಲಿ ಬಿಡೆ. ನಮಗೇನಂತೆ? ಪಾಪ ಮಾಡಿದವರು ರೌರವ ನರಕಕ್ಕೆ ಹೋಗ್ತರೆ".

ಎಂತಹ ಔದಾರ್ಯ! ಅಮ್ಮಿ ಆ ಗುಂಪನ್ನು ದಾಟಿ ನದಿಯ ದಂಡೆಯ ಮೇಲೆಯೇ ಕೆಳಕ್ಕೆ ಬೇಗಬೇಗನೆ ನಡೆದು ಹೊದಳು. ಒಬ್ಬ ಹೆಂಗಸು ಸ್ವರವೇರಿಸಿ ಅಂದಳು : " ಇನ್ನೂ ಸ್ವಲ್ಪ ದೂರ ಹೋಗೇ ಮಾರಾಯ್ತಿ. ನಿಮ್ನಾಟ್ಟ ನೋಡಿ ನಾವಾಕೆ ಪಾಪಿಗ್ಳಾಗೋಣ?" ಕೊನೆಯದಾಗಿ ಬಂದ ಆ ಮಾತು: "ಅಲಾಂದ್ರೆ...ದೇವಸ್ಥಾನದ ಪಾರುಪತ್ಯಗಾರನನ್ನೇ ಹಿಡ್ಕೋಂಡ್ವಿಟ್ಲಲ್ಲ?" ಅಮ್ಮಿಯ ಕಾಲುಗಳು ಕಂಪಿಸಿದುವು. ಎದೆ ಡವಡವನೆ ಒಂದೇ ಸಮನೆ ಹೊಡೆದು ಕೊಂಡಿತು. ಉರಿಯುತ್ತಿದ್ದ ಮನೆಯಿಂದ ಓಡುವವಳ ಹಾಗೆ, ಆಕೆ ನದೀ ದಡವನ್ನು ಬಿಟ್ಟು ಮನೆಯತ್ತ ಬೇಗಬೇಗನೆ ನಡೆದಳು. ಬಟ್ಟೆಗಳನ್ನೂ ಒಗೆಯದೆ ಆಕೆ ಓಡಿಬಂದ ರೀತಿಯನ್ನು ಕಂಡು ಸುಂದರಮ್ಮ ಒರಗಿ ಕುಳಿತಲ್ಲಿಂದಲೇ ಕೇಳಿದಳು : ಏನಾಯೆು? ಯಾವನೇ ಆತ ಮಾತಾಡ್ಸೋಕೆ ಬಂದವನು?" ಮುಖದ ಮೇಲೆ ಬರೆದುದನ್ನು ಓದುವವಳ ಹಾಗೆ ಆ ಪ್ರಶ್ನೆ ಕೇಳಿದಳು ಸುಂದರಮ್ಮ. ತಡವರಿಸುತ್ತ ತಡವರಿಸುತ್ತ ಅಮ್ಮಿ ಸುಳ್ಳು ಹೇಳಿದಳು.:

"ಏನೂ ಇಲ್ಲಕ್ಕ, ಯಾರೂ ಇಲ್ಲಕ್ಕ.ಜಾಸ್ತಿ ಜನ ಸೇರ್ಬಟ್ಟದ್ರು. ಮನೇಲೆ ಒಗಯೋಣಾಂತ ಬಂದೆ."

ಅದು ಸುಳ್ಳು ಎಂಬುದು ಸ್ಪಷ್ಟವಾಗಿತ್ತು. ತಾನು ಓಡಾಡುವಂತಿದ್ದರೆ ಸ್ವತಃ ಸುಂದ ರಮನೇ ನದೀದಡಕ್ಕೆ ಬಂದು, ಬನಶಂಕರಿಯನ್ನು ಕೆಣಕುವ ಎದೆಗಾರಿಕೆ ತೋರಿದವರೊಡನೆ ಮಾತನಾಡುತ್ತಿದ್ದಳು. ಈಗ ಆಕೆ ಅಸಹಾಯಳು. ಸುಂದರಮ್ಮನಿಗೆ ವ್ಯಥೆಯಾಯಿತು ಹೆಚ್ಚು ಮಾತನಾಡಿ ಗೆಳತಿಯನ್ನು ನೋಯಿಸಬಾರದೆಂದು ಅವಳು ಉಗುಳು ನುಂಗಿಕೊಂಡು