ಈ ಪುಟವನ್ನು ಪ್ರಕಟಿಸಲಾಗಿದೆ

ದಾಮಿನಿ.

13

ಚತುರ್ಥಪರಿಚ್ಛೇದ.

ಬೆಳಗಾಯಿತು. ರಮೇಶನ ತಂದೆಯಾದ ಅದಿತಿವಿಶಾರದನು ನಾಮಾವಳಿಯನ್ನು ಹೊದೆದುಕೊಂಡು, ಹೊರಗೆ ಚಾವಡಿಗೆ ಬಂದನು. ಇನ್ನೂ ಸಂಧ್ಯಾವಂದನೆಯಾಗಿ ರಲಿಲ್ಲ. ದಾಮಿನಿಯಿಲ್ಲ;.- ಸಂಧ್ಯಾವಂದನೆಯ ಸಾಮಗ್ರಿಗಳನ್ನು ಇನ್ನಾರು ಒದ ಗಿಸಿಕೊಡುವರು? ವಿಶಾರದನು ಅತ್ಯಂತವಿಮರ್ಷಭಾವದಿಂದ ಒಬ್ಬನೇ ಕುಳಿತಿ ದ್ದನು. ಕ್ರಮಕ್ರಮವಾಗಿ ನೆರೆಕರೆಯವರೂ, ಗ್ರಾಮಸಿವಾಸಿಗಳೂ, ಆತ್ಮೀಯಬಂಧು ವರ್ಗದವರೂ, ತಮ್ಮ ತಮ್ಮ ಆತ್ಮೀಯತೆಯನ್ನು ತೋರಪಡಿಸುವುದಕ್ಕೆಂದು ಒಬ್ಬೊಬ್ಬ ರಾಗಿ ಬರಲಾರಂಭಿಸಿದರು. ಬಂದವರಲ್ಲಿ ಕೆಲಬರು- “ಆಹಾ! ಎಂತಹ ವಿಪತ್ತು ಎಂತಹ ವಿಪತ್ತು!” – ಎಂದೂ, ಕಲಬು--ಯಾವಾಗ ಯಾರಿಗೆ ಏನು ಸಂಭವಿಸು ವದೋ, ಯಾರು ಹೇಳಬಲ್ಲರು?”- ಎಂದೂ, ಮತ್ತೆ ಕೆಲಬರು“ಎಲ್ಲಕ್ಕೂ ಆದ್ಯ ಸ್ವವೇ ! ಅವನವನ ಅದೃಷ್ಟಕ್ಕೆ ಅನುಗುಣವಾಗಿಯೇ ಎಲ್ಲವೂ ನಡೆವುದು!” - Jಂದೂ ಬಗೆಬಗೆಯಾಗಿ ಹೇಳತೊಡಗಿದರು. ಅದಿತಿವಿಶಾರದನು ಇದೊಂದ ಕ ಉತ್ತರವನ್ನೇ ಕೊಡದಿರುವದನ್ನು ನೋಡಿ ಆ ಜನಸಮೂಹದಲ್ಲಿದ್ದ ಗಣೆಶ ಚಂದ್ರನೆಂಬ ಮಧ್ಯವಯಸ್ಕ ಸ್ಕೂಲಶರನೂ ಆದ ಪ್ರತಿವಾಸಿಯೊಬ್ಬನು ಆದಿ ತಿಯನ್ನು ಕುರಿತು-ಇದರ ಸೂಚನವಾವುದೂ ಮೊದಲೇ ಇರಲಿಲ್ಲವೆ? ಎಂದರೆ, ಮೊದಲು ತಮಗೆ ಇದಾವ ವಿಷಯವೂ ಗೊತ್ತಾಗಿರಲಿಲ್ಲವೆ ಏನು?” ಎಂದನು. ಅದಿತಿಯು ಮೆಲ್ಲ ಮೆಲ್ಲನೆ ನಿಶಾಸವನ್ನು ಪರಿತ್ಯಾಗಮಾಡಿ-- “ಅಣ್ಣ! ಮೊದಲೇ ಗೊತ್ತಿದ್ದರೆ, ಈ ರೀತಿಯಗುತ್ತಿತ್ತೆ? ರಮೇಶನನ್ನು ವಿದೇಶಕ್ಕಾದರೂ ಏತಕ್ಕೆ ಕಳಿಸಿ ಕೊಟ್ಟೆನೋ? ಈ ರಾತ್ರಿ ರಮೇಶನಿದ್ದಿದ್ದರೆ, ಸೃಗಾಲಗಳಿಗೆ ಸಿಂಹದ ಗುಹೆಯನ್ನು ಪ್ರವೇಶಮಾಡುವುದು ಸಾಧ್ಯವಾಗುತ್ತಿತೇನು?'... ಎಂದನು.
ಗಣೇಶ:- “ಅಹುದೆ? ಇ೦ತಹ ವೇಳೆಯಲ್ಲಿ ರಮೇಶನಿಂದಾದರೂ ಪ್ರಯೋ
ಜನವೇನು? ನಾವೇ ತಮ್ಮ ಸೊಸೆಯನ್ನು ಉಳಿಸಬಹುದಾಗಿದ್ದಿತು. ಆದರೆ, ಏನು ಮಾಡುವ ಎಲ್ಲ ಸಮಯಗಳಲ್ಲಿ ಯ ಸಾಹಸವಿರುವುದಿಲ್ಲ, ಯುವರು ಸುಮಾರು ಇಪ್ಪತ್ತು ಮಂದಿ; ನನೊಒಂಟಿತನು. ಆದರೂ ಚಿಂತೆಯಿಲ್ಲವೆಂದರೆ, ನಾನು ಹೊರಗಣ ಕೋಣೆಯಲ್ಲಿ ಮಲ ಆಗುತ್ತಿತ್ತು; ಏನಾದರೊಂದು ಮಾಟ ಬಿಡುತ್ತಿದ್ದೆನು. ಆದರೆ ತಮ್ಮ ದೌರ್ಭಾಗ್ಯದಿಂದಲೋ – ಅಥವಾ ರಮೇಶನ ದರ ದೃಷ್ಟದಿಂದಲೋ, ಏನೋ, - ನಾನು ಆ ಸಮಯದಲ್ಲಿ ಒಳಗೇ ಮಲಗಿಬಿಟ್ಟಿದ್ದೆನು. ಮಲಗಿದ ಮೇಲೆ ಫಕ್ಕನೆ ಏಳುವುದಕ್ಕೆ ಬರುವುದಿಲ್ಲ; ಆದರೂ, ಆಕ* ಕೂಗಿದ


* * ಹೆಂಡಿತಿಯ ಹೆಸರನ್ನು ಹೇಳದಿರುವುದು ಪೂರ್ವಸಂಪ್ರದಾಯದವರ ಪದ್ಧತಿ.