ಈ ಪುಟವನ್ನು ಪರಿಶೀಲಿಸಲಾಗಿದೆ

ಬಂದರು. ಅವರು ಬಂದುದು, ಮಗುವನ್ನು ಹಿರಿಯ ಮಗಳ ಕೈಗೆ ಕೊಡಬೇಕೆಂದು.

     "ಎಲ್ಲಿದೀಯೆ ಸುನಂದಾ? ಈ ಸರಸ್ವತೀನ ಒಂದಿಷ್ಟು ಕರಕೋಬಾರದೇನೇ?"
     ಸುನಂದಾ,ವಿಜಯಾ ತಡಬಡಿಸಿ ಎದ್ದು ನಿಂತರು. ಹಾಸಿಗೆಗಳಿನ್ನೂ ಹಾಗೆಯೇ ಅಸ್ತವ್ಯಸ್ತವಾಗಿರುವಾಗಿದ್ದುದನ್ನು ಕಂಡು ಅವರ ತಾಯಿಗೆ ರೇಗಿತು.
     "ಇದೇನ್ರೇ ಇದು? ಯಾವತ್ತಮ್ಮಾ ವಿಜಯಾ ನಿನಗೆ ಬುಧ್ಧಿ ಬರೋದು? ಗಂಡನ ಮನೇಲೂ ಎಂಟು ಗಂಟೆಗೆ ಎದ್ದು ಹೆತ್ತೋರಿಗೆ ಒಳ್ಳೇ ಹೆಸರು ಬರೋ ಹಾಗೆ ಮಾಡು. ಥೂ..!"
     ವಿಜಯಳ ಮುಖ ವಿವರ್ಣವಾಯಿತು. ಹೆತ್ತವರಿಗೆ ಒಳ್ಳೆಯ ಹೆಸರು ತರುವ ಮಕ್ಕಳ ಪ್ರಸ್ತಾಪ ಬಂತೆಂದು, ಛೇಳು ಕುಟುಕಿದ ಹಾಗೆ ಅನುಭವವಾಯಿತು ಸುನಂದೆಗೆ. ಏನೇ ಬಂದರೂ ತಂಗಿಯನ್ನು ಹರ್ಷಚಿತ್ತಳಾಗಿಯೆ ಇಡಬೇಕೆಂದು ನಿರ್ಧಾರ ಮಾಡಿದ್ದ ಆಕೆ ಸಂಕಟದ ಯೋಚನೆಗಳೆನ್ನೆಲ್ಲ ಆಳ ಆಳಕ್ಕೆ ತಳ್ಳಿ ಧೃಡ ನಡಿಗೆಯಿಂದ ತಾಯಿಯ ಎದೆಗೆ ಬಂದು, ಸರಸ್ವತಿಯನ್ನೆತ್ತಿಕೊಳ್ಳುತ್ತ ಅಂದಳು:
    "ಇರಲಿ ಬಿಡಮ್ಮ, ಸ್ಟೇಷನಿಂದ ಮನೆಗೆ ಬರೋದಕ್ಕೆ ಇನ್ನೂ ಹೊತ್ತಿದೆ. ಇನ್ನೇನು ಎರಡು ದಿನದ ಆದ್ಮೇಲೆ ನೀನು ಬಂದು ಎಬ್ಬಿಸೋಕೆ ವಿಜಯಾ ಎಲ್ಲಿರ್ತಾಳೆ?"
    ಪರಿಣಾಮಕಾರಿಯಾಗಿತ್ತು ಆ ಮಾತು ಕರುಳಿನೊಂದು ತುಣುಕನ್ನು ಬೀಳ್ಕೊಡುವ ಯೋಚನೆ ಯಾವ ಕಾಲದಲ್ಲಿ ಯಾರಿಗೆ ಪ್ರಿಯವಾಗುವುದು ಸಾಧ್ಯ? ತನ್ನ ಕಿರಿಯ ಮಗಳನ್ನು ನೋಡುತ್ತ, ತಾನಾಗಿಯೇ ತಾಯಿಯ ಸ್ವರ ಮೃದುವಾಯಿತು.
    "ಬಾರೆ ವಿಜಯಾ. ಸ್ನಾನದ ಮನೇಲಿ ಉರಿಹಾಕಿದ್ದೆ ನೀರು ಕಾದಿದೆಯೋ ನೋಡು. ರಾತ್ರಿಯೆಲ್ಲಾ ಪ್ರಯಾಣ ಮಾಡಿ ನಿದ್ದೆ ಕೆಟ್ಟಿರ್ತಾರೆ. ಒಂದಿಷ್ಟು ಎರಕೊಂಡು ವಿಶ್ರಾಂತಿ ತಗೊಳ್ಲಿ."
    "ಹೂನಮ್ಮಾ."
    ವಿಜಯಾ ತಾಯಿಯನ್ನು ಹಿಂಬಾಲಿಸಿದಳು. ಅಳು ನಿಲ್ಲಿಸಿದ ಸರ