ಈ ಪುಟವನ್ನು ಪರಿಶೀಲಿಸಲಾಗಿದೆ

ಏಕಾಂಗಿನಿ ೧೬೧ ಚಂಪಾ ಓದು ಮುಗಿಸಿದ ಮೇಲೆ ಉಪಾಧ್ಯಾಯಿನಿಯಾಗುವಳು. ತಾನು? ಮಿಡಲ್ ಸ್ಕೂಲಿನಲ್ಲಿ ತಾನೂ ಉಪಾಧ್ಯಾ ಯಿನಿಯಾಗಬಹುದು ಅಲ್ಪ ಸಂಬಳ. ಸಂಬಳವಲ್ಲ ಮುಖ್ಯ, ಸ್ವಾವಲಂಬಿಯಾಗಬೇಕು. ಆಗ ಮಾತ್ರ ಮನಸ್ಸಿನ ಬೇಸರ ನೀಗುವುದು ಸಾಧ್ಯ. -ತಾನು ಇಳಿಯಬೇಕಾದ ಸ್ಥಳ ಬಂತೆಂದು ಸುನಂದಾ ಬೆನ್ನು ನಿಡಿದು ಕುಳಿತಳು ಅಲ್ಲಿಯೇ. ಮತ್ತೆ ನಾಲ್ಕು ಹೆಜ್ಜೆಗಳ ಕಾಲ್ನಡಿಗೆ- ..ರಾಧಮ ಕಾದಿದ್ದರು. “ನೀವು ಬರೋದಿಲ್ವೇನೋ ಅಂತ ಬೇಸರವಾಗಿತ್ತು,” ಎಂದಳು ಕುಸುಮಾ. ಹೊಸ ಪರಿಚಯದ ಸೀತಮ್ಮನ ಮನೆಗೆ ಹೋದ ವಿಷಯ ಸುನಂದಾ ಹೇಳಿದಳು. “ಆಕೆ ಗಂಡ ವಕೀಲರು,” ಎಂದಳು. ಹಾಗೆ ಹೇಳಿದಾಗ ವಿನಾ ಕಾರಣ ವಾಗಿ ಮನಸ್ಸಿನೊಳಗೆ ಗೊಂದಲ ವಾಯಿತು. ರಾಧಮ್ಮನ ದೃಷ್ಟಿಯಲ್ಲಿ ಆ ಮಾತಿಗೆ ಮಹತ್ವವಿರಲ್ಲಿಲ್ಲ ಒಬ್ಬೊಬ್ಬ ಗಂಡನಿಗೆ ಒಂದೊಂದು ಕೆಲಸ. ಆದರೆ ಕುಸುಮಾ ಮಾತ್ರ ಸುನಂದೆಯ ಮುಖವನ್ನು ಚಕಿತಳಾಗಿ ನೋಡಿದಳು. ಅಷ್ಟರಲ್ಲೆ ಸುನಂದೆಯ ಮನಸ್ಸು ಅಸ್ತವ್ಯಸ್ತವಾಗಿತ್ತು. ಹೆಚ್ಚು ಹೊತ್ತು ಅಲ್ಲಿರಲಾರದೆ ಆಕೆ ತನ್ನ ಮನೆಯ ಕಡೆ ಹೊರಟಳು.

                          ೨೧

ರಾಧಮ್ಮ-ಕುಸುಮೆಯರೆನ್ನು ಸುನಂದಾ ಇದಿರು ನೋಡುತಿದ್ದ ದಿನ ಅವರು ಬರಲಿಲ್ಲ ಬಳಿಕ, ಆರು ಕಾಸಿನ ಅಂಚೆಯ ಕಾರ್ಡು ವಿವರಣೆಯೊ ಡನೆ ಬಂತು ಕುಸುಮೆಯ ಮನೆಗೆ ನೆಂಟರದೊಂದು ತಂಡವೇ ಬಂದಿಳಿದಿತ್ತು. ಅದು ಕಾರಐ. "ಸ್ವಲ್ಪ ಹೊತ್ತು ಎಲ್ಲಾದರೂ ದುಡಿದು ಸಂಪಾದಿಸಬೇಕೆಂಬ ಕೃಷ್ಣಪ್ಪನವರ | |