ಈ ಪುಟವನ್ನು ಪರಿಶೀಲಿಸಲಾಗಿದೆ

೧೬೪ ಏಕಾಂಗಿನಿ ಕೃಷ್ಣಪ್ಪನವರು ಕಿರಚಿಕೊ೦ಡರು: “ಮುಚ್ಚಿರಿ ಬಾಯಿ! ಬಾಯ್ಮುಚ್ಚಿರಿ!” ಅವರು ಪುಟ್ಟಣ್ಣನಿಗಾಗಿ ಹುಡುಕಿದರು. ಭುಜ ಕುಪ್ಪಳಿಸಿ ನಸುನಕು ಹೊರಟು ಹೋಗಿದ್ದ ಆತ ಕೃಷ್ಣಪ್ಪನವರ ಕಣ್ಣಿಗೆ ಬೀಳುವುದಾದರೂ ಹೇಗೆ? “ತಪ್ಪಿಸ್ಕೊಂಡ! ತಪ್ಪಿಸ್ಕೊಂಡ!' ಮುದುಕ ಹಾಗೆ ಕೂಗಿದುದನ್ನು ಕಂಡು ಒಬ್ಬನೆಂದ: " ಇದು ತಮಾಷೆಯಾಗಿದೆ. ಸಿಕ್ಕಿ ಹಾಕ್ಕೊಂಡ್ಮೇಲೆ ಸ್ವತಃ ತಾನೇ ಕೂಗೋದು-ತಪ್ಪಿಸ್ಕೊಂಡ, ಅಂತ, ಹ್ಝೆ?” ಬೆನ್ನ ಹಿಂದಿನಿಂದೊಬ್ಬ ಕೃಷ್ಣಪ್ಪನವರ ಟೋಪಿ ಯನ್ನು ಮುಂದಕ್ಕೆ ತಳ್ಳಿದ.ಅವರು ಕೆಣಕಿದ ಹುಲಿಯಂತೆ ಗುರುಗುಟ್ಟಿದರು. “ಮೈ ಮುಟ್ಟಿದರೆ ಹುಷಾರ್ !" "ಯಾವನೋ ಹುಚ್ಚ ಅಂತ ತೋರುತ್ತೆ.” “ಹೌದು, ನುನು ಹುಚ್ಚ!” ಯಾರೋ ಸಾಧು ಪ್ರಾಣಿಗೆ ಅವಮಾನವಾಗುತ್ತಿದೆ_ ಎಂದು ಭಾವಿಸಿದವರೂ ಆ ಗುಂಪಿನಲ್ಲಿ ಇಲ್ಲದಿರಲಿಲ್ಲ.ಆದರೆ ಯಾರಿಗೆ ಬೇಕು ಜಗಳ?ಅಂಥವರು ಮುಂದೆ ಹೋದರು. ಉಳಿದವರೂ ಅಷ್ಟೆ.ಬಿಟ್ಟ ಮನೋ ರಂಜನೆ ಮುಗಿಸುತ್ತಾ ಚೆದರಿದರು. ಸದ್ಯಃ ಆನುಮಾನಾಸ್ಪದವಾದ ವ್ಯಕ್ತಿಯಾಗಿ ವೋಲೀಸರ ಕೈಗೆ ಕೃಷ್ಣಪ್ಪನವರು ಬೀಳಲಿಲ್ಲ . ಅವರು ಮಂಕು ಹಿಡಿದವರಂತೆ ಮೆಲ್ಲನೆ ನಡೆಯುತ್ತ ಧರ್ಮಾಂಬುಧಿಕೆರೆ ಬಯಲಿನ ಬಳಿಗೆ ಬಂದರು. ಆ ವಾರ ಒಂದೆರಡು ಮಳೆ ಬಿದ್ದಿದ್ದರೂ ನೆಲ ತೇವವಾಗಿರಲಿಲ್ಲ. ಹಸಿರು ಹುಲ್ಲಿನ ಮೇಲೆ ಜನರಿಲ್ಲದ ಕಡೆ ಅವರು ಕುಳಿತರು. ಬತ್ತಿಹೋಗಿದ್ದ ಬಾವಿಗಳಂತಹ ಕಣ್ಣುಗಳಿಂದ ಕಂಬನಿಯ ಒರತೆಗಳು ಒಸರಿ ಹೊರಕ್ಕೆ ಹರಿದುವು - ಅಲ್ಲಿಂದ ಅವರು ಎದಾಗ ಮುಚ್ಚಂಚೆಯಾಗಿತ್ತು. ಮೈ ಜುಮ್ಮೆನ್ನು ತ್ತಿತ್ತು ನಡೆದುದನ್ನು ಸ್ಮರಿಸಿಕೂ೦ದಾಗ. ನಿಜವಾಗಿಯೂ ಹೀಗೆ ಸ೦ಭವಿ ಸಿತೇ ? ಇದು ಭ್ರಮೆಯಲ್ಲವೆ '... ಎಂದೂ ಯೋಚಿಸುವ ಹಾಗಾಯಿತು.