ಈ ಪುಟವನ್ನು ಪರಿಶೀಲಿಸಲಾಗಿದೆ

ನಮ್ಮ ಮುಂಬರುವ ಕೃತಿ

                                                     ಬಿ ಸಿ ಲ  ತೆ ರೆ
 
                                       ಕೊ. ಸು. ಸೀತಾರಾಮ್ ರವರ ಕಾದಂಬರಿ


                             ಮಧ್ಯಮ ವರ್ಗದವರ ಜೀವನವೆಂದರೆ ಉನ್ನತಗಿರಿ-ಆಳವಾದ
ಕಮರಿಗಳ ನಡುವಿನ ಕಿರು ದಾರಿಯಂತೆ, ಇತ್ತ ಬಡತನದ ಆಳಕ್ಕೆ ಬೀಳ

ಲಾರದೆ ಅತ್ತ ಸಿರಿತನದ ಶಿಖರವೇರಲಾರದೇ ತತ್ತರಿಸುತ್ತಾರೆ. ಈ ವರ್ಗದವರು.

        ಇನ್ನು ಮಧ್ಯಮವರ್ಗದವನ ಆ ಬಾಳೋ..
        ಜೀವನದಲ್ಲಿ ತಾನು ನಿರೀಕ್ಷಿಸುವುದೇ ಒಂದು,  ನಿಜವಾಗಿ ಸಂಭವಿಸು

ವುದೇ ಬೇರೊಂದು. ಇಲ್ಲಿ ಮಿತ್ರನು ದೂರವಾಗುತ್ತಾನೆ, ಒಡಹುಟ್ಟಿದವರು ಬೆಳಗುತ್ತಾರೆ, ಹೆತ್ತವರು ಕಣ್ಣೆದುರೇ ಸಾಯುತ್ತಾರೆ-- ಆತ್ಮಹತ್ಯೆ ಮಾಡಿ ಕೊಳ್ಳುತ್ತಾರೆ. ಬಾಲ್ಯದಿಂದಲೂ ತಾನು ಪ್ರೀತಿಸಿದವಳು ಬೇರೊಬ್ಬನ

ಮಡದಿಯರಾಗುತ್ತಾಳೆ.
       ಇಷ್ಟೇ ಅಲ್ಲ. ಕಂಡುದೆಲ್ಲವೂ ಬಿಸಿಲ್ಗುದುರೆಗಳೇ ಆಗುವ ಈ ಬಾಳಿ

ನಲ್ಲಿ ತನ್ನ ಅಧಿಕಾರ ದರ್ಪವನ್ನೂ ತೋರಲಾಗುವುದಿಲ್ಲ. ತಾನು ಬೇಡ ವೆಂದು ದೂರೀಕರಿಸಿದ್ದ ಹೆಣ್ಣೂ ಸಹ ತನ್ನ ಹೆಂಡತಿಯಾಗಿಬಿಡಿತ್ತಾಳೆ!

     ರಾಮುವಿನ ಜೀವನವೊಂದು ಈ ವಿಚಿತ್ರ ಘಟನ ಪರಂಪರೆಗಳ ಸಿಕ್ಕು
ಬಲೆ ಎಲ್ಲ ಮಧ್ಯಮವರ್ಗದವರ ಜೀವನದ ಕೈಗನ್ನಡಿಯೀ ಕಾದಂಬರಿ.

ಸುಮಾರು ೨೬೦ ಪುಟಗಳು ತ್ರಿವರ್ಣ ಮುಖಚಿತ್ರ ಬೆಲೆ.೧--೮--೦