ಈ ಪುಟವನ್ನು ಪರಿಶೀಲಿಸಲಾಗಿದೆ

xiii

ಕ್ರಾಂತಿಯಾಯಿತು. ಕಂದ ಮತ್ತು ಸೀಸಪದ್ಯಗಳು ಹೋಗಿ ಹಲವು ಗೀತ ರೂಪಗಳು ಬಂದವು. ವೃತ್ತಗಳನ್ನು ಓಡಿಸಿದ್ದ. ಷಟ್ಟದಿಗಳು ಸರಳ ರಗಳೆಯ ಮುಂದೆ ಕಾಲ್ಗೆಗೆದವು. ಬೇಂದ್ರೆಯವರು ಮೊದಲಲ್ಲಿ ಬರೆದ ಕೆಲವು ಷಟ್ಟದಿಗಳು ತೆಗೆದು ಹಾಕುವಂತಿದಿದ್ದರೂ ಅವರು ಬಳಿಕ ಬರೆದ ಕೆಲವು ಷಟ್ಟದಿಗಳು ತೆಗೆದು ಹಾಕುವಂತಿಲ್ಲದಿದ್ದರೂ ಅವರು ಬಳಿಕ ಬರದ ಜಾನಪದ ಗೀತೆಗಳ ಧಾಟಿಯ ಕವಿತೆಗಳಂತೆ ಯಶಸ್ವಿಯಾಗಿಲ್ಲ. ಈಗಿನ ಕೆಲವು ಕಿರಿಯ ಕವಿಗಳು ಬೇಂದ್ರೆಯವರ ಮಾರ್ಗದಲ್ಲಿ ಬರೆಯುತ್ತಿರುವ ಕವಿತೆಗಳೂ ಹೀಗೇ ನಿರ್ಜೀವವಾಗುತ್ತಿವೆ, ನಿಸ್ತೇಜವಾಗುತ್ತಿವೆ. ಪುಟ್ಟಪ್ಪನವರ ಮತ್ತು ಬೇಂದ್ರೆಯವರ ನೆರಳಿನಲ್ಲಿ ನಡೆಯುವ ಕವಿಗಳಿಗೆ ಕಣ್ಣು ಕುರುಡಾಗಿ ಗತಿ ಕುಂಠಿತವಾಗುತ್ತಿದೆ.

ಎರಡನೆ ಮಹಾಯುದ್ಧವಾದ ಮೇಲೆ ನಮ್ಮ ಜೀವನವೇ ಬಹು ಮಟ್ಟಿಗೆ ಬದಲಾಯಿಸಿಬಿಟ್ಟಿದೆ. ಸ್ವಾತಂತ್ರ್ಯಸಂಗ್ರಾಮದ ಧೈಯಂಯುಗ ಮುಗಿದು ಗಣರಾಷ್ಟರಚನಾತ್ಮಕ ಕಾರ್ಯಯುಗ ಮೊದಲಾಗಿದೆ. ಆರ್ಥಿಕ ಅಸಮತೆ, ಅಹಾರ ವಸ್ತ್ರಗಳ ಬರ, ಆಧ್ಯಾತ್ಮಿಕ ತತ್ವಗಳಲ್ಲಿ ಅಪನಂಬಿಕೆ, ನೀತಿ ಸಂಸ್ಕೃತಿಗಳ ನೆಲಗಟ್ಟೆ ಕಳಚುತ್ತಿರುವುದು ಎಲ್ಲರ ಮನಸ್ಸಿನಲ್ಲಿಯೂ ನಿರಾಶೆ, ಅಶಾಂತಿ, ದುಃಖ, ಕಟುತ್ವ ಹುಟ್ಟಿಸುತ್ತಿದೆ. ಆದರೂ ಮೆಲ್ಲಗೆ ರಚನಾತ್ಮಕ ಕಾರ್ಯವೂ ಸಾಗುತ್ತಿದೆ. ಇಂಗ್ಲೆಂಡಿನಲ್ಲಿ ಹತ್ತೊಂತ್ತನೇ ಶತಮಾನದಲ್ಲಿ ಹುಟ್ಟಿದ ರೋಮ್ಯಾಂಟಿಕ್ ಸಾಹಿತ್ಯದಿಂದ ಹಿರಿಯರು ಸ್ಫೂರ್ತಿ ಪಡೆದಂತ ಕಿರಿಯರು ಇಪ್ಪತ್ತನೇ ಶತಮಾನದಲ್ಲಿ ಯೂರೋಪಿನಲ್ಲಿ ಈಚೆಗೆ ಹುಟ್ಟಿರುವ ನವ್ಯ ಸಾಹಿತ್ಯದಿಂದ ಸ್ಫೂರ್ತಿ ಪಡೆಯುವುದು ಸಹಜವೇ. ಇವತ್ತಿನ ಪ್ರಪಂಚದಲ್ಲಿ ಹೆಚ್ಚು ಜನರು ನಾಗರಿಕ ಜೀವನದಲ್ಲಿ ಮುಳುಗಿ ತೇಲುತ್ತಿದ್ದಾರೆ. ಮರಾತನ ಧರ್ಮದಲ್ಲಿ ಶ್ರದ್ಧೆ ಕಡಿಮೆಯಾದಂತೆ ಪ್ರಕೃತಿಯಲ್ಲಿ ಆಕ್ರೋನ್ನತಿಯ ಸಾಧನವನ್ನು ಕಾಣುವ ದೃಷ್ಟಿಯೂ ಕಡಿಮೆಯಾಗಿದೆ. ವಿಜ್ಞಾನದ ಪ್ರಗತಿಯಿಂದ ಜಗತ್ತಿನ ಪ್ರಲಯವೇ ಆಗುವ ಸೂಚನೆಗಳು ನಮ್ಮ ಕಣ್ಣ ಮುಂದೆ ಬಂದಿವೆ. ಹೀಗಿರುವಾಗ ಮಾನವನ ಚರಿತ್ರೆ ಪ್ರಗತಿಪರವಾಗಿದೆಯೆಂದು ನಂಬುವುದು ಕಷ್ಟವಾಗುತ್ತಿದೆ. ಮಾನಸಿಕ ಶಾಸ್ತ್ರದ ಸಂಶೋಧನೆಗಳಿಂದ ನಮ್ಮ ಬುದ್ಧಿ ನಮ್ಮ ಚಿತ್ತದ ತುದಿ ಮಾತ್ರ ಎಂದು ನಮಗೆ ಅರಿವಾಗುತ್ತಿದೆ. ಗುಪ್ತಚಿತ್ತದ ವ್ಯಾಪಾರಗಳು ಸ್ವಲ್ಪ ಸ್ವಲ್ಪವಾಗಿ ಬೆಳಕಿಗೆ ಬರುತ್ತಿವೆ. ಈ ಕಾಲಕ್ಕೆ ಉಚಿತವಾದ ಶೈಲಿಯನ್ನು ನವ್ಯ ಕವಿ ರಚಿಸಬೇಕಾಗುತ್ತದೆ.

ಗೋಕಾಕರ ಪ್ರಾಯೋಗಿಕ “ನವ್ಯ ಕವಿತೆಗಳು” ಎಂಬ ಸಂಕಲನದ ಒಂದೆರಡು ಕವಿತೆಗಳಲ್ಲಿಯೂ ಗೋಪಾಲಕೃಷ್ಣ ಅಡಿಗರ “ನಡೆದು ಬಂದ ದಾರಿ” ಎಂಬ ಸಂಕಲನದ ಕೆಲವು ಯಶಸ್ವಿ ಕವಿತೆಗಳಲ್ಲಿಯೂ “ದೀಪದಾನ” ಎಂಬ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಡಿಗರ ದೀರ್ಘ ಕವನಗಳಲ್ಲಿಯೂ ಈ