ಈ ಪುಟವನ್ನು ಪ್ರಕಟಿಸಲಾಗಿದೆ
ಕ್ರಸಂ | ಪ್ರಶ್ನೆ | ಹೌದು | ಇಲ್ಲ |
---|---|---|---|
13. | ನೆನಪಿನ ಶಕ್ತಿ ಕಡಿಮೆಯಾಗಿ ಮರೆವು ಹೆಚ್ಚಾಗಿದೆಯೇ? | ||
14. | ಬದುಕು ಬೇಡ, ಜೀವನ ಮಾಡುವುದು ಕಷ್ಟ ಎಂದೆನಿಸುತ್ತಿದೆಯೇ? | ||
15. | ಸಾಯಬೇಕು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಲ್ಲಿಯಾದರೂ ದೂರ ಹೋಗಬೇಕು ಎಂದೆನಿಸಿದೆಯೇ? |
ಖಿನ್ನತೆ ಕಾಯಿಲೆಯ ಅಪರೂಪದ ಮತ್ತು ಅಸಾಮಾನ್ಯ ಲಕ್ಷಣಗಳು:
- ವಿಪರೀತ ಹಸಿವು. ಸದಾ ಏನನ್ನಾದರೂ ತಿನ್ನ ಬೇಕೆಂಬ ಆಸೆ. ಹೀಗಾಗಿ ತೂಕ ಹೆಚ್ಚಾಗುವುದು.
- ಅತಿಯಾದ ನಿದ್ರೆ, ಹಗಲಿನಲ್ಲಿ ನಿದ್ರೆ.
- ನಿದ್ರೆಯಲ್ಲಿ ನಡೆಯುವುದು.
- ಎಲ್ಲರೂ ತನ್ನ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ, ಆಡಿಕೊಂಡು ನಗುತ್ತಿದ್ದಾರೆ ಎನಿಸುವುದು.
- ಯಾರೋ ತನ್ನನ್ನು ಬೈದಹಾಗೆ, ಚುಚ್ಚಿ ಮಾತಾಡಿದ ಹಾಗೆ, ತನ್ನ ಹಿಂದಿನ ತಪ್ಪುಗಳನ್ನು ಎತ್ತಿ ಆಡಿದ ಹಾಗೆ ಭ್ರಮೆಯಾಗುವುದು.
- ತನ್ನ ದೇಹದ ಒಳ ಅಂಗಾಂಗಗಳು ಕೆಲಸಮಾಡುತ್ತಿಲ್ಲ. ಕಾಣೆಯಾಗಿವೆ. ನಾಶವಾಗಿವೆ ಎನಿಸುವುದು.
- ಒಂದು ಅವಧಿಯ ಎಲ್ಲ ಘಟನೆಗಳು, ಅನುಭವಗಳು ಮರೆತು ಹೋಗುವುದು. ತನ್ನ ಹೆಸರು, ಗುರುತು ನೆನಪಿಗೆ ಬಾರದಿರುವುದು.
- ಉದ್ದೇಶವಿಲ್ಲದೆ ಅಪರಾಧ ಮಾಡುವುದು.
■ ■
ಖಿನ್ನತೆ: ಬನ್ನಿ ನಿವಾರಿಸೋಣ / 13