ಈ ಪುಟವನ್ನು ಪ್ರಕಟಿಸಲಾಗಿದೆ

ತಾವಿನ್ನೂ ಸ್ವಂತ ಮನೆ ಮಾಡಿಕೊಂಡಿಲ್ಲ. ಅಕ್ಕತಂಗಿಯರು ತನಗಿಂತ ಹೆಚ್ಚು ಅನುಕೂಲವಾಗಿದ್ದಾರೆ. ಶ್ರೀಮಂತರಾಗಿದ್ದಾರೆ. ತವರುಮನೆಯ ಸಪೋರ್ಟ್ ಕಡಿಮೆಯಾಗಿದೆ. ಅಣ್ಣ ಅತ್ತಿಗೆ ಈಗ ಹೆಚ್ಚು ಮಾತಾಡಿಸುತ್ತಿಲ್ಲ. ನೋಡಲು ಬರುವುದಿಲ್ಲ. ತಾಯಿಗೆ ವಯಸ್ಸಾಗಿದೆ. ಅಷ್ಟು ಸಂತೋಷವಾಗಿಲ್ಲ. ಮಗ, ಸೊಸೆ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹೀಗೆ ಹತ್ತೆಂಟು ಕಾರಣಗಳಿಂದ ಖಿನ್ನತೆ ಬರುತ್ತದೆ. ಜೊತೆಗೆ ಹಿಂದೆ ಮಾಡಿದ ತಪ್ಪುಗಳು ಆಗಿಹೋದ ಕಹಿ ಘಟನೆ-ಅನುಭವಗಳಿಂದ ಖಿನ್ನತೆ ಹೆಚ್ಚಾಗುತ್ತದೆ. ದೇಹದಲ್ಲಿ ನೋವು, ಸುಸ್ತು, ನಿಶ್ಯಕ್ತಿ, ಮೊದಲಿನ ಚುರುಕುತನವಿಲ್ಲ. ಕೆಲಸಗಲ್ಲಿ ವೇಗ ಕಡಿಮೆಯಾಗಿದೆ. ಮಾಮೂಲಿನ ಕೆಲಸ ಮಾಡಲು ಈಗ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಟೈಮಿಗೆ ಸರಿಯಾಗಿ ಗಂಡ-ಮಕ್ಕಳಿಗೆ ಊಟ-ತಿಂಡಿ ಮಾಡಿಕೊಡಲಾಗುತ್ತಿಲ್ಲ. ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತಿಲ್ಲ. ಕಾಡುವ ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಥೈರಾಯ್ಡ್, ಕೀಲುಬೇನೆಗಳು ಖಿನ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಉದ್ಯೋಗಸ್ಥ ಮಹಿಳೆಯಲ್ಲಿ ಖಿನ್ನತೆ

ಗೃಹಕೃತ್ಯಗಳ ಜೊತೆಗೆ, ಹೊರಗಡೆ ಹೋಗಿ ಉದ್ಯೋಗ ಮಾಡಿ, ದುಡಿಯುವ ಹೆಂಗಸರಲ್ಲಿ ಒತ್ತಡ ಹೆಚ್ಚು ಉದ್ಯೋಗದ ಜವಾಬ್ದಾರಿಗಳು, ಹೆಚ್ಚು ಕೆಲಸ-ಕಡಿಮೆ ಸಂಬಳ, ಲಿಂಗತಾರತಮ್ಯ ನೇರ ಮತ್ತು ಅಪರೋಕ್ಷ ಲೈಂಗಿಕ ಕಿರುಕುಳಗಳು, ಪುರುಷ ಸಹೋದ್ಯೋಗಿಗಳ ಅಸಹಕಾರ ಮತ್ತು ಕಿರಿಕಿರಿ, ಗಂಡ, ಅತ್ತೆ ಮಾವಂದಿರ ದಬ್ಬಾಳಿಕೆ, ಅನುಮಾನಗಳು, ಆರ್ಥಿಕ ಸ್ವಾತಂತ್ರ್ಯವಿಲ್ಲದಿರುವುದು. ಅಭಿಪ್ರಾಯ ಸ್ವಾತಂತ್ರ ವಿಲ್ಲದಿರುವುದು, ದೈಹಿಕ ಅನಾರೋಗ್ಯ-ಈ ಎಲ್ಲವೂ ಸೇರಿ ಖಿನ್ನತೆಯನ್ನುಂಟು ಮಾಡಬಲ್ಲವು. ಪ್ರತಿಯೊಂದು ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಆಪ್ತ ಸಮಾಲೋಚನೆಯ ಸೌಲಭ್ಯ ಇರಬೇಕು.

■ ■

18 / ಖಿನ್ನತೆ: ಬನ್ನಿ ನಿವಾರಿಸೋಣ