ಈ ಪುಟವನ್ನು ಪ್ರಕಟಿಸಲಾಗಿದೆ

ಖಿನ್ನತೆ ಕಾಯಿಲೆ ಬರದಂತೆ ತಡೆಗಟ್ಟಬಹುದೇ?

ಬಹುತೇಕ ಪ್ರಕರಣಗಳು ಆಗದಂತೆ ಖಂಡಿತ ತಡೆಗಟ್ಟಬಹುದು. ಇದು ಸಾಧ್ಯ. ಪಾಲಕರು, ಶಿಕ್ಷಕರು, ವೈದ್ಯರು, ಜನನಾಯಕರು, ಗುರುಗಳು, ವ್ಯಕ್ತಿ, ಕುಟುಂಬ ಮತ್ತು ಸಮಾಜ ಮನಸ್ಸು ಮಾಡಿದರೆ ಖಂಡಿತವಾಗಿ ಮಠಾಧೀಶರು, ಕಲಾವಿದರು ಎಲ್ಲರೂ ಕೈ ಜೋಡಿಸಿದರೆ ಖಿನ್ನತೆಯನ್ನು ನಿವಾರಿಸಬಹುದು. ಅದು ಉಲ್ಬಣವಾಗಿ ಆತ್ಮಹತ್ಯೆಗೆ ದಾರಿ ಮಾಡಿಕೊಡುವು ದನ್ನು ತಪ್ಪಿಸಬಹುದು.

1. ಆಸೆ-ಅತಿಆಸೆ-ಆಕಾಂಕ್ಷೆ-ಮಹತ್ವಾಕಾಂಕ್ಷೆಗೆ ಲಗಾಮು:

"ಆಸೆಯೇ ದುಃಖಕ್ಕೆ ಕಾರಣ" ಎಂಬ ಸತ್ಯವನ್ನು ಗೌತಮಬುದ್ಧ ಸಾರಿ ಹೇಳಿದ್ದಾನೆ. ಆಸೆಯನ್ನು ಬಿಡುವುದು ಹೇಗೆ? ಆಸೆಯೇ ಜೀವನದ ಗಾಡಿ ಮುಂದೆ ಹೋಗಲು ಬೇಕೇಬೇಕಾದ ಇಂಧನವಲ್ಲವೇ? ತಿನ್ನುವ ಆಸೆ, ಉಡುವ ಆಸೆ, ತೊಡುವ ಆಸೆ, ಸಿಂಗರಿಸಿಕೊಳ್ಳುವ ಆಸೆ, ಮಿಲನದ ಮಕ್ಕಳನ್ನು ಪಡೆಯುವ ಆಸೆ, ಹಣ-ಆಸ್ತಿ ಸಂಪಾದಿಸುವ ಆಸೆ, ಕೀರ್ತಿ ಗೌರವಗಳನ್ನು ಗಳಿಸುವ ಆಸೆ, ಅಧಿಕಾರ-ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುವ ಆಸೆ, ಶತಾಯುಷಿಯಾಗಿ ಬದುಕುವ ಆಸೆ, ದೇಶ ತಿರುಗುವ ಆಸೆ, ಸುಂದರವಾದ ವಸ್ತು ವಿಶೇಷಗಳನ್ನು ನೋಡುವ ಆಸೆ, ಆಸೆಯಿಲ್ಲದೆ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎನಿಸುತ್ತದೆ ಅಲ್ಲವೇ?

ಆಸೆಯಿರಲಿ, ಇರಲೇಬೇಕು. ಆದರೆ ಇತಿಮಿತಿಯಲ್ಲಿರಲಿ, ಅತಿ ಆಸೆ ಬೇಡ, ದುರಾಸೆ ಖಂಡಿತಾ ಬೇಡ. ಅತಿಆಸೆಯಿಂದ ನಮಗೆ ನಿರಾಶೆ ಕಟ್ಟಿಟ್ಟ ಬುತ್ತಿ ನಿರಾಶೆಯಿಂದ ದುಃಖ, ದುಃಖದಿಂದ ಖಿನ್ನತೆ, ದುರಾಶೆಯಿಂದ


ಖಿನ್ನತೆ: ಬನ್ನಿ ನಿವಾರಿಸೋಣ / 39