Pages   (key to Page Status)   

ಬಂಜೆ ಬೇನೆಯನರಿವಳೆ ? ಬಲದಾಯಿ ಮದ್ದ ಬಲ್ಲಳೆ ? ನೊಂದವರ ನೋವ ನೋಯದವರೆತ್ತ ಬಲ್ಲರೊ ? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ
ಎಲೆ ತಾಯಿಗಳಿರಾ ?