ಚಿತ್ರ: ಅನುರಾಗ ಅರಳಿತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ವಾಣಿ ಜಯರಾಂ




ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ||ಪಲ್ಲವಿ||

ಕಾಡಲ್ಲಿ ಮೊಗ್ಗೊಂದು ಅರಳಿ ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು
ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ ||

ಹೂವಂಥ ಈ ಮೆತ್ತೆ ಇಂದು
ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ
ಮೈಯೆಲ್ಲ ಬಿಸಿಯಾಯಿತು
ಒಂಟಿ ಬಾಳಿಂದು ಸಾಕು ಸಾಕೆಂದು
ನಾನಿನ್ದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ
(ಉಶ್..)
ಚಳಿ ತುಂಬುತಲಿ ಈ ರಾತ್ರಿಯಲಿ
ಸಂಗಾತಿ ಎಲ್ಲೆಂದು ಕೇಳುತ್ತ ಕಾಡುತ್ತಾ||




ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ