ಚಲನಚಿತ್ರ ಸಮಾಜಗಳು ( FILM SOCIETIES ) ಚಲನಚಿತ್ರಗಳಬಗ್ಗೆ ಆಸಕ್ತಿ, ಒಲುಮೆ ಇಟ್ಟುಕೊಂಡು, ಅವುಗಳ ಬಗ್ಗೆ ಅಧ್ಯಯನ ಮಾಡಲು ಇಚ್ಛೆಯಿರುವ ಸ್ನೇಹಿತರು ಒಟ್ಟಾಗಿ ಸೇರಿ, ಹಿಂದಿನ ವರ್ಷಗಳಲ್ಲಿ ತಯಾರಾಗಿರುವ ಹಾಗೂ ಇಂದಿನ ಪ್ರಸಕ್ತ ಸನ್ನಿವೇಶದಲ್ಲಿ ತಯಾರಾಗಿ ಬರುತ್ತಿರುವ, ಅಸಂಖ್ಯಾತ ಚಲನಚಿತ್ರಗಳ ಪೈಕಿ ನಮಗೆ ಬೇಕಿನಿಸಿದ ಚಿತ್ರವನ್ನು ಆಯ್ದುಕೊಂಡು, ವೀಕ್ಷಿಸಿ ಅದರ ಬಗ್ಗೆ ಚರ್ಚೆ, ವಿಮರ್ಶೆ, ಬರವಣಿಗೆ ಮಾಡುವ ಹವ್ಯಾಸವನ್ನು ಇಟ್ಟುಕೊಂಡಿರುವ ಸಂಸ್ಥೆಗಳಿಗೆ ಚಲನಚಿತ್ರಸಮಾಜಗಳು ಎಂದು ಕರೆಯುತ್ತಾರೆ.
ಅವಶ್ಯಕತೆ : 1920ರ ದಶಕದಲ್ಲಿ, ಬ್ರಿಟನ್ನಿನಲ್ಲಿ, ವ್ಯಾಪಾರೀ ದೃಷ್ಟಿಯಿಂದ, ಲಾಭಗಳಿಸುವ ಸಲುವಾಗಿ, ಎಲ್ಲ ಸಾರ್ವಜನಿಕ ಚಿತ್ರಮಂದಿರಗಳಲ್ಲಿ, ಮನರಂಜನೆಗೆ ಸೀಮಿತಗೊಂಡ ಚಿತ್ರಗಳಿಗೆ ಮಾತ್ರ ಪ್ರದರ್ಶನಾವಕಾಶ ದೊರೆಯುತ್ತಿತ್ತು. ಹೀಗಾಗಿ ಅನೇಕ ಉತ್ತಮ ಚಿತ್ರಗಳಿಗೆ, ಮನರಂಜನೆಗೆ ಬೇಕಾದ ಅಂಶಗಳು ಇಲ್ಲವಾದ ಕಾರಣ, ಪ್ರದರ್ಶನಾವಕಾಶ ಸಿಕ್ಕದೆ ಡಬ್ಬಗಳಲ್ಲಿ ಕೊಳೆಯಬೇಕಾಗಿ ಬಂತು. ಕ್ರಾಂತಿಕಾರಿ ವಸ್ತುಗಳನ್ನು ಹಾಗೂ ಗಂಭೀರ ವಿಷಯಗಳನ್ನು ಆಳವಡಿಸಿಕೊಂಡು ತಯಾರುಮಾಡಿದ ಚಿತ್ರಗಳಿಗೆ ಸಾರ್ವಜನಿಕವಾಗಿ ಪುರಸ್ಕಾರ ದೊರೆಯುವುದು ದುರ್ಲಭವಾಗಿಬಿಟ್ಟಿತ್ತು. ಬ್ಯಾಟóಲ್ ಷಿಪ್ ಪೊಟಿಂಕಿನ್ ಅಂತಹ ಅದ್ಭುತ ರಷ್ಯನ್ ಚಿತ್ರಕ್ಕೆ ಅವಕಾಶ ಸಿಕ್ಕದೆ ಇದ್ದಾಗ, ಈ ಚಿತ್ರದ ಉತ್ತಮ ಗುಣಗಳ ಬಗ್ಗೆ ವಿಷಯ ತಿಳಿದಿದ್ದ ಕೆಲವು ಬುದ್ಧಿಜೀವಿಗಳು ಒಟ್ಟಿಗೆ ಸೇರಿ, ತಮ್ಮನ್ನು ಚಲನಚಿತ್ರ ಸಮಾಜದ ಸದಸ್ಯರು ಎಂದು ಕರೆದುಕೊಂಡು, ಸಾರ್ವಜನಿಕ ಪ್ರದರ್ಶನಗಳು ಇಲ್ಲದ ವೇಳೆಯಲ್ಲಿ, ಚಿತ್ರ ಮಂದಿರಗಳನ್ನು ಬಾಡಿಗೆಗೆ ತೆಗೆದುಕೊಂಡು ವೀಕ್ಷಿಸಿ ಅದರ ಬಗ್ಗೆ ಅಧ್ಯಯನ ಮಾಡಲು ಪ್ರ್ರಾರಂಭಿಸಿದರು. ಈ ಒಂದು ಹವ್ಯಾಸವನ್ನು ಉದ್ದೇಶವಾಗಿಟ್ಟುಕೊಂಡು ಸ್ಥಾಪನೆಯಾದ ಸಂಸ್ಥೆಗಳಿಗೆ ಚಲನಚಿತ್ರ ಸಮಾಜಗಳು ಎಂಬ ಹೆಸರು ಚಾಲನೆಗೆ ಬಂತು. 1925ರ, ಅಕ್ಟೋಬರ್, 25ರಂದು, ಲಂಡನ್ನಿನಲ್ಲಿ ಮೊಟ್ಟಮೊದಲ ಚಲನಚಿತ್ರಸಮಾಜ ಪ್ರಾರಂಭ ವಾಯಿತು. ಆಂಥೊನಿ ಅಸ್ಕಿತ್, ಸಿಡ್ನಿ ಬರ್ನ್ ಸ್ಟಿನ್, ಹೆಚ್.ಜಿ.ವೆಲ್ಸ್, ಜಾರ್ಜ್ ಬರ್ನಾಡ್ ಷಾ, ಆಗಸ್ಟಸ್ ಜಾನ್, ಮೈನಾರ್ಡ ಕೇನ್ಸ್ ಇವರುಗಳು, ಈ ಚೊಚ್ಚಲು ಚಿತ್ರಸಮಾಜದ ಸಂಸ್ಥಾಪಕರುಗಳಾಗಿದ್ದರು.
ಈ ಒಂದು ಹವ್ಯಾಸ, ಕ್ರಮೇಣವಾಗಿ ಚಳುವಳಿಯಾಗಿ ರೂಪುಗೊಂಡಿತು, 1930ರ ವೇಳೆಗೆ, ಬ್ರಿಟನ್ನಿನ ಆನೇಕ ಪಟ್ಟಣಗಳಲ್ಲಿ ಇಂತಹ ಚಿತ್ರಸಮಾಜಗಳು ಉದ್ಭವ ಗೊಂಡು ಕಾರ್ಯನಿರತವಾದವು. ನಂತರದ ವರ್ಷಗಳಲ್ಲಿ ಪ್ರಪಂಚದ ಎರಡನೇ ಮಹಾಯದ್ಧದ ಕಾರಣದಿಂದಾಗಿ ಈ ಚಳುವಳಿ ಸ್ಥಗಿತಗೊಂಡು, ಯುದ್ಧದ ನಂತರ ಮತ್ತೆ ಪ್ರಾರಂಭವಾಯಿತು. ಆದರೆ, ಸಾರ್ವಜನಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನದ ಶುಲ್ಕ ಕ್ರಮೇಣವಾಗಿ ಹೆಚ್ಚಿದ್ದರಿಂದ, ಹಾಗೂ ಪ್ರದರ್ಶನಕ್ಕೆ ತಕ್ಕ ವೇಳೆ ಸಿಕ್ಕದೇ ತೊಂದರೆಯಾದ್ದರಿಂದ, ಆರ್ಥಿಕ ವಾಗಿ ಅಶಕ್ತವಾಗಿದ್ದ ಚಿತ್ರ ಸಮಾಜಗಳು ಮುಗ್ಗಟ್ಟಿನ ಪರಿಸ್ಥಿತಿ ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ತಾಂತ್ರಿಕ ವಿಕಸನೆಯ ಬಳುವಳಿಯಾಗಿ 35 mm ಚಿತ್ರಗಳನ್ನು 16 mm ಗೆ ಪರಿವರ್ತಿಸಿ, 16 mm ಪ್ರೊಜೆಕ್ಟರ್‍ಗಳಲ್ಲಿ ಚಾಲನೆಮಾಡಿ ಪ್ರದರ್ಶನಮಾಡುವ ತಂತ್ರ ಬಳಕೆಗೆ ಬಂತು. ಈ ಒಂದು ಸೌಲಭ್ಯ ಒದಗಿದಮೇಲೆ, ಚಿತ್ರ ಸಮಾಜಗಳ ಸಂಖ್ಯೆ ಶತಕಗಳಿಂದ, ಸಾವಿರಗಳಿಗೆ ಹೆಚ್ಚಿತು. 16 mm ನಲ್ಲಿ ಚಿತ್ರಗಳನ್ನು ವಿತರಣೆ ಮಾಡುವ ಸಂಸ್ಥೆಗಳೂ ಹುಟ್ಟಿಕೊಂಡವು. ಚಿತ್ರಸಮಾಜದ ಹವ್ಯಾಸ ಪಟ್ಟಣಗಳಿಂದ ಗ್ರಾಮಗಳಿಗೂ ಹರಿಯಿತು. ಸುಲಭವಾಗಿ ಒಂದು 16mm ಪ್ರೊಜೆಕ್ಟರ್‍ನ್ನು ಬಾಡಿಗೆಗೊ ಆಥವಾ ಕೊಂಡೋ, ಸದಸ್ಯರುಗಳು ಒಂದಾಗಿ ಸೇರಿ ಒಂದು ಪುಟ್ಟ ಸಭಾಂಗಣದಲ್ಲಿ ಚಿತ್ರಗಳನ್ನು ತಾವೇ ಚಾಲನೆ ಮಾಡುವ ಯಂತ್ರದ ಮೂಲಕ ಪ್ರದರ್ಶನಮಾಡಿ ವೀಕ್ಷಿಸಿ ಆಧ್ಯಯನ ಮಾಡುವ ಪರಿಪಾಠ ವ್ಯಾಪಕವಾಗಿ ಬೆಳೆಯಿತು. ಈ ಒಂದು ಚಳುವಳಿ ಯೂರೋಪಿನ ಮತ್ತಿತರ ದೇಶಗಳಿಗೂ ಹರಡಿತು. 1925ರಲ್ಲೇ ಫ್ರಾನ್ಸಿನಲ್ಲಿ ಕೂಡ ಈ ಚಳುವಳಿ ಪ್ರಾರಂಭಗೊಂಡು ಅತಿವೇಗವಾಗಿ ಬೆಳೆಯಿತು. ಚಲನಚಿತ್ರ ಸಮಾಜಗಳು ವ್ಯಾಪಕವಾಗಿ ಬೆಳೆದ ಕಾರಣದಿಂದಾಗಿ, ಅವುಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ, 1937ರಲ್ಲಿ ಬ್ರಿಟಿಷ್ ಫೆಡರೇಶನ್ ಆಫ್ ಫಿಲ್ಮ್ ಸೊಸೈಟೀಸ್ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂತು.
ಭಾರತದಲ್ಲಿ ಚಲನಚಿತ್ರ ಸಮಾಜಗಳ ಬೆಳವಣಿಗೆ : ಭಾರತದಲ್ಲಿ ಮೊದಲ ಬಾರಿಗೆ, ಬೊಂಬಾಯಿಯಲ್ಲಿ 1937ರಲ್ಲಿ ಅಮೇಚರ್ ಸೈನ್ ಸೊಸೈಟಿ ಎಂಬ ಸಂಸ್ಥೆಯನ್ನು, ಸಾಕ್ಷ್ಯಚಿತ್ರಗಳ (ಆoಛಿumeಟಿಣಚಿಡಿಥಿ ಜಿiಟms) ತಯಾರಕರ ತಂಡವೊಂದು ಪ್ರಾರಂಭಿಸಿತು. ಈ ತಂಡದಲ್ಲಿ ಹೆಸರಾಂತ ಚಿತ್ರ ತಯಾರಕರಾದ ಪಿ.ವಿ.ಪತಿ, ಅಂಬಾಲಾಲ್, ಬಿ.ಬಿ.,ಯೋಧ್, ಎಜ್ರ ಮೀರ್, ಭವನಾನಿ, ಫೆರೆನೆಕ್ ಬೊರ್ಕೊ. ಮುಂತಾದ ಆನೇಕ ಗಣ್ಯವ್ಯಕ್ತಿಗಳಿದ್ದರು. ಈ ಸೊಸೈಟಿ, ಹೆಚ್ಚಾಗಿ ಸಾಕ್ಷ್ಯ ಚಿತ್ರಗಳನ್ನು ತಯಾರು ಮಾಡುವ ಬಗ್ಗೆ ಶಿಕ್ಷಣ ಕೊಡುವುದು, ತರಬೇತಿ ಸಿಬಿರಗಳನ್ನು ನಡೆಸುವುದು, ಮುಂತಾದ ಚಟುವಟಿಕೆಗಳಿಗೆ ಮಾತ್ರ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿತ್ತು. 1943ರಲ್ಲಿ, ಫೆರ್ನೆಕೊ ಬೊರ್ಕೊ, ಎಂಬ ಹಂಗೇರಿಯದ ಛಾಯಾಗ್ರಹಕಾರರು ಬಾಂಬೆ ಫಿಲಂ ಸೊಸೈಟಿ ಯನ್ನು ಸ್ಥಾಪಿಸಿದರು. ಈ ಚಿತ್ರ ಸಮಾಜ ಭಾರತದಲ್ಲಿ ಹುಟ್ಟಿದ ಮೊಟ್ಟಮೊದಲ ಅಧಿಕೃತ ಚಲನಚಿತ್ರ ಸಮಾಜವೆಂದು ಪರಿಗಣಿಸಲು ಅರ್ಹತೆ ಪಡೆಯಿತು. ಈ ಚಿತ್ರಸಮಾಜ ವರ್ಷಕ್ಕೆ 12 ರೂಪಾಯಿ ಶುಲ್ಕ ವಿಧಿಸಿ, ಎರೋಸ್ ಚಿತ್ರ ಮಂದಿರದಲ್ಲಿ ಚಿತ್ರ ಪ್ರದರ್ಶನಗಳನ್ನು ಮಾಡಿ, ನಂತರ ಉತ್ಸಾಹಕರ ಚರ್ಚೆಕೂಟಗಳನ್ನು ಚಿತ್ರಮಂದಿರದ ಒಂದು ಕೊಠಡಿಯಲ್ಲಿ ನಡೆಸುತ್ತಿತ್ತು. Iಟಿ ತಿhiಛಿh ತಿe seಡಿve, ಃಟiಣhe Sಠಿiಡಿiಣ, ಅiಣizeಟಿ ಏಚಿಟಿe, ಒiಡಿಚಿಛಿಟe ಚಿಣ ಒiಟಚಿಟಿ, ಖಿhe ಖiveಡಿ, ಊeeಡಿಚಿ ಒoಣi, ಮುಂತಾದ ಉತ್ತಮ ಚಿತ್ರಗಳನ್ನು ಪ್ರದರ್ಶಿಸಿ ಹೆಸರು ಮಾಡಿತು. 1960 ರ ಹೊತ್ತಿಗೆ ಸುಮರು 60 ಮಂದಿ ಸದಸ್ಯರನ್ನು ಹೊಂದಿ ಅಚ್ಚುಕಟ್ಟಾಗಿ ಕೆಲಸಮಾಡತ್ತಿತ್ತು. ಈ ಸಂಸ್ಥೆಯಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಹೆಸರು ಮಾಡಿದ, ಆರ್.ಇ.ಹಾಕಿನ್ಸ್, ಜಗಮೋಹನ್, ಕೆ.ಎಲ್.ಖಾಂಡಪುರೆ, ಎಮ್.ವಿ.ಕೃಷ್ಣಸ್ವಾಮಿ ಮುಂತಾದ ಗಣ್ಯರು ಕಾರ್ಯಕಾರಿ ಸಮಿತಿಯಲ್ಲಿದ್ದರು.
ಕಲ್ಕತ್ತ ಫಿಲಂಸೊಸೈಟಿ : ಚಲನಚಿತ್ರ ಸಮಾಜಗಳಿಗೆ ಭದ್ರವಾದ ಬುನಾದಿ ಹಾಕುವ ಕಾರ್ಯ, 1947ರ ಅಕ್ಟೋಬರ್, 5 ರಂದು, ಕಲ್ಕತ್ತದಲ್ಲಿ, ಕಲ್ಕತ್ತ ಫಿಲಂ ಸೊಸೈಟಿ ಸ್ಥಾಪನೆಯ ಮೂಲಕ ಜರುಗಿತು. ಭಾರತದ ಚಲನಚಿತ್ರದ ಮೇರು ವ್ಯಕ್ತಿಯೆನಿಸಿಕೊಂಡ ಸತ್ಯಜಿತ್ ರಾಯ್, ಹೆಸರಾಂತ ವಿಮರ್ಶಕ ಚಿದಾನಂದದಾಸ್ ಗುಪ್ತ, ಹಿರಣ್ ಕುಮಾರ್ ಸನ್ಯಾಲ್, ಬನ್ಸಿ ಚಂದ್ರಗುಪ್ತ, ಹರಿ ದಾಸ್ ಗುಪ್ತ, ಮೋಹನ ಭಟ್ಟಾಚಾರ್ಯ ಮತ್ತು ಅವರ ಸ್ನೇಹಿತರುಗಳು ಕೂಡಿಕೊಂಡು ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಪ್ರಪಂಚದ ಶ್ರೇಷ್ಠ ಚಿತ್ರಗಳನ್ನು ಬ್ರಿಟಿಷ್ ಫಿಲಂ ಇನ್ಸ್ಟಿಟ್ಯೂಟ್ ಸಹಾಯದಿಂದ ತರಿಸಿ, ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಸಂಸ್ಥೆಯಾಯಿತು. ಆದರೂ 1952 ರವರೆಗೆ ಸದಸ್ಯತ್ವದ ಸಂಖ್ಯೆ 60 ಕ್ಕಿಂತ ಹೆಚ್ಚು ಏರಲೇಇಲ್ಲ. ಮತ್ತು ಈ ಸಂಸ್ಥೆ ಕುಂಟುತ್ತಲೇ ಮುಂದುವರೆಯಿತು. 1952ರಲ್ಲಿ ರಾಯ್‍ರವರು ತಮ್ಮ ಪಥೇರ್ ಪಾಂಚಾಲಿ ಚಿತ್ರದ ನಿರ್ಮಾಣದಲ್ಲಿ ಪೂರ್ಣವಾಗಿ ತೊಡಗಿಕೊಂಡದ್ದರಿಂದ ಚಿತ್ರಸಮಾಜ ಪೂರ್ಣ ಸ್ಥಗಿತಗೊಂಡಿತು. 1956ರ ನಂತರದಲ್ಲಿ, ಬ್ರಿಟನ್ನಿನ ಹೆಸರಾಂತ ಚಿತ್ರ ವಿಮರ್ಶಕರಾಗಿದ್ದ ಮೇರಿ ಸೀಟನ್ ಎಂಬ ಮಹಿಳೆ ಭಾರತಕ್ಕೆ ಬಂದು ಕಲ್ಕತ್ತದಲ್ಲಿ ತಂಗಿ, ಪಥೇರ್ ಪಾಂಚಾಲಿ ಚಿತ್ರದ ಬಿಡಗಡೆಯಿಂದ ಸ್ಫೂರ್ತಿಗೊಂಡು, ಮತ್ತೆ ಕಲ್ಕತ್ತ ಫಿಲಂ ಸೊಸೈಟಿಯನ್ನು ಜೀರ್ಣೋದ್ಧಾರ ಮಾಡಿ, ಉತ್ತಮ ಚಿತ್ರಗಳ ಪ್ರೋತ್ಸಾಹಕ್ಕೆ ಚಲನಚಿತ್ರ ಸಮಾಜಗಳ ಆವಶ್ಯಕತೆಯನ್ನು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ಈ ಒಂದು ಚಳುವಳಿಗೆ ಹೊಸ ಚೈತನ್ಯವನ್ನು ಕೊಟ್ಟರು. ಕಲ್ಕತ್ತ ಫಿಲಂ ಸೊಸೈಟಿ ಮತ್ತೆ ಹುರುಪಿನಿಂದ ಕಾರ್ಯ ಪ್ರಾರಂಭಿಸಿತು. ಮೃಣಾಲ್ ಸೇನ್, ಋತ್ವಿಕ್ ಘಟಕ್, ಬಿ.ಎನ್.ಸರ್ಕಾರ್, ಆರ್.ಸಿ.ಬೋರಾಲ್, ಮುಂತಾದ ಅನೇಕ ಗಣ್ಯರು ಚಿತ್ರಸಮಾಜಗಳ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಈ ಚಳುವಳಿಗೆ ಒಂದು ಹೊಸ ಆಯಾಮವನ್ನು ಕೊಟ್ಟರು. ಇದರಿಂದ ಸ್ಫೂರ್ತಿಗೊಂಡ ಅನೇಕ ವ್ಯಕ್ತಿಗಳು, ಕಲ್ಕತ್ತದಲ್ಲೇ ಅಲ್ಲದೆ ಭಾರತದ ಇನ್ನಿತರ ಪಟ್ಟಣಗಳಲ್ಲಿ ಕೂಡ ಚಿತ್ರಸಮಾಜಗಳನ್ನು ಸ್ಥಾಪಿಸಿದರು.
ದೆಹಲಿಯಲ್ಲಿ ದೆಹಲಿ ಫಿಲಂಸೊಸೈಟಿ, ಮದ್ರಾಸಿನಲ್ಲಿ ದಿ ಮದ್ರಾಸ್ ಫಿಲಂ ಸೊಸೈಟಿ, ಪಟ್ನಾ ಫಿಲಂಸೊಸೈಟಿ, ಬೊಂಬಾಯಿಯಲ್ಲಿ ಆನಂದಂ ಫಿಲಂ ಸೊಸೈಟಿ, ಫಿಲಂ ಫೋರಂ, ಮುಂತಾದ ಅನೇಕ ಚಿತ್ರಸಮಾಜಗಳು ಹುಟ್ಟಿಕೊಂಡವು. ಚಲನಚಿತ್ರಸಮಾಜಗಳ ಇತಿಹಾಸದಲ್ಲಿ, 1959 ರ, ಡಿಸೆಂಬರ್, 13 ಒಂದು ಸ್ಮರಣೀಯ ದಿವಸ. ಅಂದು, ಕಲ್ಕತ್ತ ಫಿಲಂ ಸೊಸೈಟಿ, ದೆಹಲಿ ಫಿಲಂ ಸೊಸೈಟಿ, ದಿ ಮದ್ರಾಸ್ ಫಿಲಂ ಸೊಸೈಟಿ, ರೂರ್ಕಿ ಫಿಲಂ ಸೊಸೈಟಿ, ಬೊಂಬಾಯಿ ಫಿಲಂ ಸೊಸೈಟಿ ಹಾಗೂ ಪಟನಾ ಫಿಲಂಸೊಸೈಟಿ, ಈ ಚಿತ್ರ ಸಮಾಜಗಳ ಪ್ರತಿನಿಧಿಗಳು, ದೆಹಲಿಯಲ್ಲಿ ಸಭೆ ಸೇರಿ, ಭಾರತದ ಚಲನಚಿತ್ರ ಸಮಾಜಗಳ ಒಕ್ಕೂಟ (ಈeಜeಡಿಚಿಣioಟಿ oಜಿ ಜಿiಟm soಛಿieಣies oಜಿ Iಟಿಜiಚಿ), ಎಂಬ ಒಂದು ಹೊಸ ಸಂಸ್ಥೆಯನ್ನು ಪ್ರಾರಂಬಿಸಲು ತಮ್ಮ ಹೆಸರುಗಳನ್ನು ದಾಖಲೆ ಮಾಡಿಸಿದರು. ಈ ಸಂಸ್ಥೆ ಭಾರತದ ಎಲ್ಲ ಚಿತ್ರ ಸಮಾಜಗಳ ಚಟುವಟಿಕೆಗಳನ್ನು ನಿಯಂತ್ರಿಸಿ, ಅವುಗಳಿಗೆ ಸೂಕ್ತ ಮಾರ್ಗದರ್ಶನ ಮಾಡುವ ಕಾರ್ಯವನ್ನು ವಹಿಸಿಕೊಂಡಿತು. ಅಂದು ತಮ್ಮ ಹೆಸರುಗಳನ್ನು ನೊಂದಾಯಿಸಿದ ಆದ್ಯ ಪ್ರವರ್ತಕ ವ್ಯಕ್ತಿಗಳ ಹೆಸರುಗಳು : ಶ್ರೀಮತಿ ವಿಜಯ ಮೂಳೆ (ದೆಹಲಿ), ಅರುಣಾ ರಾಯ್ ಚೌಧುರಿ (ಪಟನಾ), ತ್ರಿಯಂಬಕ ಪಠಕ್ (ರೂರ್ಕಿ), ರಾಬರ್ಟ ಹಾಕಿನ್ಸ, (ಬೊಂಬಾಯಿ) ಸಾಮ್ಯುಎಲ್ (ಮದ್ರಾಸು), ಹಿರಣ್ ಕುಮಾರ್ ಸನ್ಯಾಲ್ ಮತ್ತು ಚಿದಾನಂದ ದಾಸ್ ಗುಪ್ತ (ಕಲ್ಕತ್ತ). ಈ ಸಂಸ್ಥೆ ಭಾರತದ ಮೊದಲ ಚಿತ್ರ ಸಮಾಜ ಹುಟ್ಟಿದ 17 ವರ್ಷಗಳ ನಂತರ ಅಸ್ತಿತ್ವಕ್ಕೆ ಬಂತು. ಅಂದಿನಿಂದೀಚೆಗೆ 1959 ರಲ್ಲಿ 6, 1964 ರಲ್ಲಿ 24, 1971 ರಲ್ಲಿ 111, 1980 ರಲ್ಲಿ 216, ಮತ್ತು 2000 ದ ಹೊತ್ತಿಗೆ 253, ಹೀಗೆ ಚಿತ್ರ ಸಮಾಜಗಳ ಸಂಖ್ಯೆ ಏರಿತು.
ಚಿತ್ರಸಮಾಜಗಳ ಒಕ್ಕೂಟಕ್ಕೆ, ಭಾರತ ಸರ್ಕಾರದ ಮನ್ನಣೆಯೂ ದೊರಕಿದೆ, ವಾರ್ಷಿಕ ಅನುದಾನವೂ ಬರುತ್ತಿದೆ. ಪ್ರಪಂಚದಲ್ಲಿ ಎಲ್ಲಡೆ ತಯಾರಾಗುವ, ಹಾಗೂ ಭಾರತದಲ್ಲಿಯೂ ತಯಾರಾಗುವ ಪ್ರಶಸ್ತಿ ವಿಜೇತ ಚಿತ್ರಗಳನ್ನು ತರಿಸಿ, ಸದಸ್ಯರಿಗೆ ಪ್ರದರ್ಶಿಸಿ, ಅವುಗಳಮೇಲೆ ವಿಮರ್ಶೆ ಮಾಡಿ, ಲೇಖನಗಳನ್ನು ಬರೆದು ಪ್ರಕಟಿಸಿ, ಚರ್ಚಾಕೂಟಗಳು, ವಿಚಾರ ಸಂಕೀರ್ಣಗಳು, ಮುಂತಾದ ಕಾರ್ಯಗಳನ್ನು ಸತತವಾಗಿ ನಡೆಸಿಕೊಂಡು ಬರುತ್ತಿರುವ ಈ ಚಳುವಳಿ, ಎಲ್ಲ ಚಟುವಟಿಕೆಗಳಂತೆ ಏರು ಪೇರುಗಳನ್ನು ಎದುರಿಸಿಕೊಂಡು ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ.
ಚಲನ ಚಿತ್ರ ಸಮಾಜಗಳ ಬೆಳವಣಿಗೆ, ಪಶ್ಚಿಮ ಬಂಗಾಲದಲ್ಲಿ, ಹಾಗೂ ಕೇರಳದಲ್ಲಿ ಸಾಕಷ್ಟು ವ್ಯಾಪಕವಾಗಿ ಬೆಳೆದು, ಉತ್ತಮ ಚಿತ್ರಗಳ ಬಗ್ಗೆ ಪ್ರಚಾರ ಹಾಗೂ ಪ್ರೋತ್ಸಾಹ ನೀಡುವ ದಿಶೆಯಲ್ಲಿ ಹೆಚ್ಚಿನ ಪ್ರಭಾವ ಬೀರಿದೆ.
ಇತ್ತೀಚಿನ ದಶಕದಲ್ಲಿ, ಕಲ್ಕತ್ತದಲ್ಲಿ ಸೈನ್ ಕ್ಲಬ್ ಆಫ್ ಕಲ್ಕತ್ತ, ಸೈನ್ ಸೆಂಟ್ರಲ್ ಕಲ್ಕತ್ತ, ಸೈನ್ ಅಕಡೆಮಿ, ಕಲ್ಕತ್ತ, ಬರ್ಹಾಂಪುರ್ ಫಿಲಂ ಸೊಸೈಟಿ ಕಲ್ಕತ್ತ, ಪ್ರಭಾತ್ ಚಿತ್ರ ಮಂಡಲಿ, ಮುಂಬೈ, ಸೈನ್ ಸೊಸೈಟಿ ಮುಂಬೈ, ಆಶಯ್ ಫಿಲಂ ಕ್ಲಬ್, ಪುಣೆ, ದಿ ಮದ್ರಾಸ್ ಫಿಲಂ ಸೊಸೈಟಿ, ಚೆನ್ನೈ, ಐ.ಸಿ.ಎ. ಫೋರಂ, ಚೆನ್ನೈ, ಹೈದರಾಬಾದ್ ಫಿಲಂ ಕ್ಲಬ್, ಕರೀಂನಗರ್ ಫಿಲಂ ಸೊಸೈಟಿ, ನ್ಯೂ ಲುಕ್ ಫಿಲಂ ಸೊಸೈಟಿ, ತಿರುಪ್ಪುರ್, ಯಧಾರ್ಥ, ಮಧುರೈ, ತಮಿಳುನಾಡು ತಿರುಪ್ಪಾದ ಇಯಕ್ಕಮ್, ಚೆನ್ನೈ, ಚಲಚಿತ್ರ, ತಿರುವನಂತಪುರ, ಸುಚಿತ್ರ ಫಿಲಂ ಸೊಸೈಟಿ, ಬೆಂಗಳೂರು, ಬೆಂಗಳೂರು ಫಿಲಂ ಸೊಸೈಟಿ, ಬೆಂಗಳೂರು, ಕಲೆಕ್ಟಿವ್ ಖೇವೋಸ್ (ಛಿoಟಟeಛಿಣive ಛಿhಚಿos) ಬೆಂಗಳೂರು, ಚಿತ್ರ ಫಿಲಂ ಸೊಸೈಟಿ, ಧಾರವಾಡ, ದೆಹಲಿ ಫಿಲಂ ಸೊಸೈಟಿ, ದೆಹಲಿ, ದೆಹಲಿ ಮಲಯಾಳೀ ಫಿಲಂ ಸೊಸೈಟಿ, ದೆಹಲಿ, ಚಂದಿಗರ್ ಫಿಲಂ ಸೊಸೈಟಿ ಚಂದಿಗರ್, ಫಿಲಂ ಸೊಸೈಟಿ ಆಫ್ ಜೋಧಪುರ್- ಜೋಧಪುರ, ಇನ್ನೂ ಹಲವಾರು ಚಿತ್ರ ಸಮಾಜಗಳು ಕಾರ್ಯೋನ್ಮುಖವಾಗಿ ಕೆಲಸ ಮಾಡುತ್ತಿವೆ,
ಈ ಒಂದು ಚಳುವಳಿಗೆ 1970 ಹಾಗೂ 80ರ ದಶಕಗಳಲ್ಲಿದ್ದ ಲವಲವಿಕೆ, ಹುರುಪು, ಟಿವಿ ಛಾನೆಲ್‍ಗಳ ಪ್ರಭಾವದಿಂದಾಗಿ 1990ರ ದಶಕದಲ್ಲಿ ಕಡಿಮೆಯಾಗುತ್ತ ಬಂತು. 2000 ದಿಂದೀಚೆಗೆ, ಪರಿಸ್ಥಿತಿ ಮತ್ತೆ ಆಶಾದಾಯಕವಾಗಿ ಕಾಣುತ್ತಿದೆ. ಪ್ರಪಂಚದ ಎಲ್ಲ ದೇಶಗಳ ಶ್ರೇಷ್ಠ ಚಿತ್ರಗಳ ಪ್ರತಿಗಳು ಈಗ ಡಿ.ವಿ.ಡಿ (ಆಗಿಆ) ಗಳಲ್ಲಿ ಬರುತ್ತಿರುವುದರಿಂದ ಚಿತ್ರಸಮಾಜಗಳಿಗೆ ಎಲ್.ಸಿ.ಡಿ ಪ್ರೊಜೆಕ್ಟರ್‍ಗಳನ್ನು ಉಪಯೋಗಿಸಿಕೊಂಡು ಚಿತ್ರಗಳನ್ನು ಪ್ರದರ್ಶಿಸಬಹುದಾಗಿದೆ. ಇದರಿಂದಾಗಿ, ಮುಂಚಿನಂತೆ ದೊಡ್ಡ ದೊಡ್ಡ ಡಬ್ಬಗಳಲ್ಲಿ ಚಿತ್ರದ ಪ್ರತಿಗಳನ್ನು ಹೊತ್ತು ಸಾಗಿಸಿ, ಸಾರ್ವಜನಿಕ ಚಿತ್ರಮಂದಿರಗಳಿಗೆ ದುಂಬಾಲು ಬಿದ್ದು ಪ್ರದರ್ಶಿಸಬೇಕಿದ್ದ ತೊಂದರೆಗಳು ತಪ್ಪಿದೆ. ಮತ್ತೆ ಚಿತ್ರಸಮಾಜಗಳು ಬೆಳೆಯಬಹುದು ಎಂಬ ವಿಶ್ವಾಸ ಹೆಚ್ಚುತ್ತಿದೆ. ಹೊಸ ಹೊಸ ತಾಂತ್ರಿಕ ಬೆಳವಣಿಗೆಗೆ ಸ್ಪಂದಿಸಿ, ಚಲನಚಿತ್ರಸಮಾಜಗಳಿಗೆ ಸಾಕಷ್ಟು ಉತ್ತೇಜನ, ಪೋಷಣೆ ಹಾಗೂ ಪ್ರೋತ್ಸಾಹ ಕೊಡಬೇಕೆಂದು ಚಲನಚಿತ್ರಗಳ ಒಕ್ಕೂಟ (ಈಈSI) ಈಗ ಕಾರ್ಯೋನ್ಮುಖವಾಗಿದೆ. ಈ ಒಕ್ಕೂಟಕ್ಕೆ 1959 ರಿಂದ 1992 ರವರೆಗೆ, ಸತ್ಯಜಿತ್ ರಾಯ್‍ರವರು ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದರು. ಇಂದಿನ ಪ್ರಸಕ್ತ ಸಾಲಿನಿಂದ ಖ್ಯಾತ ಚಿತ್ರನಿರ್ದೇಶಕ ಶ್ಯಾಮ್ ಬೆನೆಗಲ್ ರವರು ಅಧ್ಯಕ್ಷರಾಗಿದ್ದಾರೆ. ದಕ್ಷಿಣ ವಲಯದಿಂದ ಹೆಚ್.ಎನ್.ನರಹರಿ ರಾವ್, ಪಶ್ಚಿಮದಿಂದ ಕಿರಣ ಶಾಂತಾರಾಂ, ಉತ್ತರದಿಂದ ಪ್ರೊಫೆಸರ್ ಮಹೇಶ್ವರಿ, ಹಾಗೂ ಪೂರ್ವದಿಂದ ತಪಸ್‍ರಾಯ್‍ರವರುಗಳು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಲ್ಲದೆ, ಅಜಯ ಸೇನ್ ಗುಪ್ತ, ರಾಧಾಕೃಷ್ಣನ್, ಸುಧೀರ್ ನಂದಗಾಂವ್ಕರ್, ಹಾಗೂ ಪ್ರಕಾಶ್ ರೆಡ್ಡಿ ಅವರುಗಳು ಕಾರ್ಯದರ್ಶಿಗಳಾಗಿ ಕೆಲಸಮಾಡುತ್ತಿದ್ದಾರೆ. ಈ ಒಕ್ಕೂಟದ ಬಗ್ಗೆ ಹೆಚ್ಚು ಮಾಹಿತಿಗಳು ಬೇಕಿದ್ದಲ್ಲಿ ತಿತಿತಿ.ಜಿಜಿsiಛಿo.oಡಿg ವೆಬ್‍ಸೈಟ್‍ನಲ್ಲಿ ಪಡೆಯಬಹುದು. ಹೆಚ್.ಎನ್. ನರಹರಿರಾವ್ ರಚಿಸಿರುವ ಈiಟm Soಛಿieಣಥಿ ಊಚಿಟಿಜbooಞ ಮತ್ತು ಒಥಿ ಆಚಿಥಿs ತಿiಣh ಣhe ಈiಟm Soಛಿieಣಥಿ ಒovemeಟಿಣ, ಎರಡು ಪುಸ್ತಕಗಳಲ್ಲಿ ಚಿತ್ರಸಮಾಜಗಳನ್ನು ಸ್ಥಾಪಿಸಿ ಕಾರ್ಯನಿರ್ವಹಿಸುವ ಬಗ್ಗೆ ಮತ್ತು ಚಲನಚಿತ್ರ ಸಮಾಜಗಳ ಚಳುವಳಿಗಳ ಬಗ್ಗೆ ಸಂಕ್ಷಿಪ್ತ ಇತಿಹಾಸ ಇವುಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಪಡೆಯಬಹುದು.
ಸುಮಾರು 5 ದಶಕಗಳಿಗೂ ಹೆಚ್ಚಿನ ಅಸ್ತಿತ್ವವಿರುವ ಈ ಚಟುವಟಿಕೆಗಳು ಇದುವರೆಗೆ ಸಾಧಿಸಿರುವ ಕಾರ್ಯಗಳೇನು? ಎಂಬುದು ಸಂಗತವಾದ ಪ್ರಶ್ನೆ. ಈ ಒಂದು ದಿಟ್ಟಿನಲ್ಲಿ ಸಮೀಕ್ಷೆ ಮಾಡಿದಾಗ ಈ ಕೆಳಕಂಡ ಅಂಶಗಳು ನಮ್ಮ ಗಮನಕ್ಕೆ ಬರುತ್ತದೆ.
1. ಪ್ರಪಂಚದ ಎಲ್ಲ ದೇಶಗಳಿಂದ ಸಹಸ್ರಾರು ಶ್ರೇಷ್ಠ ಚಿತ್ರಗಳನ್ನು ತರಿಸಿ ಸದಸ್ಯರಿಗೆ ಪ್ರದರ್ಶನ ಮಾಡಿರುವುದು, ಒಂದು ಹೆಮ್ಮೆಯ ವಿಷಯ. ಇಲ್ಲದಿದ್ದಲ್ಲಿ ಈ ಚಿತ್ರಗಳು ನಮಗೆ ತಲುಪುವ ಯಾವ ಸೌಲಭ್ಯವೂ ನಮಗಿರಲಿಲ್ಲ. ಫೆಲ್ಲಿನಿ ಡಿಸಿಕ, ಬರ್ಗಮನ್, ರೆನ್ವಾರ್, ಟ್ರುಫಾ, ಗೊಡಾರ್ಡ, ಹರ್ಜೋಗ್, ಫಾಸ್ ಬಿಂಡರ್, ಸತ್ಯಜಿತ್ ರಾಯ್, ಜಾನುಸಿ ವಾಜ್ದ, ಕೈಸ್ಲೋವ್‍ಸ್ಕಿ, ಕುರೋಸಾವ, ಓಜು, ಜಾಬೊ, ಮುಂತಾದ ಅನೇಕ ವಿಶ್ವವಿಖ್ಯಾತ ಚಿತ್ರ ನಿರ್ದೇಶಕರುಗಳ ಚಿತ್ರಗಳನ್ನು ಚಿತ್ರ ಸಮಾಜಗಳು ತರಿಸಿ ತೋರಿಸಿವೆ. ಸಾಮಾನ್ಯವಾಗಿ ಹೊರದೇಶಗಳ ಚಿತ್ರಗಳೆಂದರೆ ನಮಗೆ ಸಾರ್ವಜನಿಕ ಚಿತ್ರಮಂದಿರಗಳಲ್ಲಿ ಸಿಗುವುದು ಅಮೆರಿಕದ ಚಿತ್ರಗಳು ಮಾತ್ರ. ಟಿವಿಗಳಲ್ಲಿ ಕೂಡ ಅಮೆರಿಕಮಯವೇ. ಚಿತ್ರಸಮಾಜಗಳು ಮಾತ್ರ ಯೂರೋಪು, ದಕ್ಷಿಣ ಅಮೆರಿಕ, ಏಷಿಯ, ಆಸ್ಟ್ರೇಲಿಯ ಮುಂತಾದ ಭಾಗಗಳ ಎಲ್ಲ ದೇಶಗಳ ಚಿತ್ರಗಳನ್ನು ನೋಡುವ ಅವಕಾಶವನ್ನು ಸದಸ್ಯರಿಗೆ ಒದಗಿಸಿವೆ.
2. ಚಿತ್ರ ಸಮಾಜಗಳ ಸದಸ್ಯರುಗಳಾದ ಸತ್ಯಜಿತ್ ರಾಯ್, ಮೃಣಾಲ್ ಸೆನ್, ರಿತ್ವಿಕ್ ಘಟಕ್, ಶಾಮ್‍ಬೆನಗಲ್ ಬಸು ಚಟ್ಟರ್ಜಿ, ಬಸು ಭಟ್ಟಾಚಾರ್ಯ, ಅಡೂರ್ ಗೋಪಾಲ ಕೃಷ್ಣನ್, ಗಿರೀಶ್ ಕಾಸರವಳ್ಳಿ, ಮುಂತಾದವರು ಚಿತ್ರಸಮಾಜಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಂತರ ಉತ್ತಮಚಿತ್ರಗಳನ್ನು ನಿರ್ದೇಶಿಸುವುದರಲ್ಲಿಯೂ ಯಶಸ್ವಿಯಾಗಿದ್ದಾರೆ.
3. ಚಿತ್ರ ವಿಮರ್ಶೆ ಕ್ಷೇತ್ರದಲ್ಲಿ ಕೂಡ ಚಿತ್ರಸಮಾಜಗಳು ಸಾಕಷ್ಟು ಪ್ರಭಾವ ಬೀರಿವೆ.
4. ಭಾರತದ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವ, ತಿರುವನಂತಪುರ, ಕೋಲ್ಕತ್ತ, ಮುಂಬೈ, ಪುಣೆ, ಚೆನ್ನೈ, ಬೆಂಗಳೂರು ಮುಂತಾದ ಪಟ್ಟಣಗಳಲ್ಲಿ ನಡೆಯುವ ಚಿತ್ರೋತ್ಸವಗಳಲ್ಲಿ ಚಲನಚಿತ್ರ ಸಮಾಜಗಳ ಸದಸ್ಯರುಗಳು ಸಕ್ರಿಯವಾಗಿ ಭಾಗವಹಿಸುತ್ತಾರೆ. ಈ ಚಿತ್ರೋತ್ಸವಗಳನ್ನು ಸಂಘಟಿಸುವಲ್ಲಿ ಕೂಡ ಹಲವಾರು ಕ್ಷೇತ್ರಗಳಲ್ಲಿ ಚಿತ್ರಸಮಾಜಗಳು ಪಾಲ್ಗೊಳ್ಳುತ್ತವೆ. ಮುಂದಿನ ದಿನಗಳಲ್ಲಿ, ತಾಂತ್ರ್ರಿಕ ಬೆಳವಣಿಗೆಯಿಂದ ಉದ್ಭವಿಸುವ ಸವಾಲುಗಳನ್ನು ಚಿತ್ರ ಸಮಾಜಗಳು ಹೇಗೆ ಎದುರಿಸುತ್ತವೆ ಎಂಬುದು ಕುತೂಹಲಕಾರಿ ಪ್ರಶ್ನೆ. ಗಮನಿಸಬೇಕಾದ ಅಂಶ.
(ಹೆಚ್.ಎನ್.ನರಹರಿರಾವ್)