ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೇಯರ್ಹಾಫ್, ಆಟೋ ಫ್ರೀಟ್ಸ್‌

ಮೇಯರ್‍ಹಾಫ್, ಆಟೋ ಫ್ರೀಟ್ಸ್

	1884-1951. ಜರ್ಮನ್ ಸಂಜಾತ ಅಮೆರಿಕನ್ ಶರೀರಕ್ರಿಯಾ ಹಾಗೂ ಜೈವಿಕರಸಾಯನವಿe್ಞÁನಿ. ಸ್ನಾಯುಗಳ ಸಂಕುಚನ ಆಕುಂಚನಗಳಲ್ಲಿ ಕ್ರಮಾಗತವಾಗಿ ಜರಗುವ ರಾಸಾಯನಿಕ ಹಾಗೂ ಉಷ್ಣತೆಯ ಬದಲಾವಣೆಗಳನ್ನು ಪರಸ್ಪರ ಅನ್ವಯಿಸಿ ವಿಶದಗೊಳಿಸಿದ್ದಕ್ಕಾಗಿ ಇವನಿಗೂ ಇಂಗ್ಲೆಂಡಿನ ಶರೀರಕ್ರಿಯಾವಿe್ಞÁನಿ ಎ.ವಿ. ಹಿಲ್ ಎಂಬುವನಿಗೂ ಒಟ್ಟಿಗೆ ವೈದ್ಯ ಹಾಗೂ ಶರೀರಕ್ರಿಯಾವಿe್ಞÁನ ವಿಭಾಗದ, 1921ರ ನೊಬೆಲ್ ಪಾರಿತೋಷಿಕ ಸಂದಿತು (1922). ಈ ಬಗ್ಗೆ ಅನಂತರ ಅನೇಕ ತಪಶೀಲುಗಳ ಆವಿಷ್ಕಾರವಾಗಿದ್ದರೂ ಇವರ ಮೂಲಭೂತ ವಿವರಗಳಿಗೆ ಯಾವುದೇ ಚ್ಯುತಿ ಬಂದಿಲ್ಲ.

ಇವನ ತಂದೆ ಫೆಲಿಕ್ಸ್ ಒಬ್ಬ ವರ್ತಕ. ತಾಯಿ ಬೆಟ್ಟಿನ ಮೇ. ಈ ದಂಪತಿಗಳಿಗೆ ಜರ್ಮನಿಯ ಹ್ಯಾನೋವರಿನಲ್ಲಿ 1884 ಏಪ್ರಿಲ್ 12ರಂದು ಮೇಯರ್ ಹಾಫ್ ಹುಟ್ಟಿದ. ಇವನ ವಿದ್ಯಾಭ್ಯಾಸ ಬರ್ಲಿನ್, ಫೀಬರ್ಗ್ ಮತ್ತು ಸ್ಟ್ರಾಸ್ ಬರ್ಗ್‍ಗಳಲ್ಲಿ ನಡೆಯಿತು. ಮನಃಶಾಸ್ತ್ರ, ತತ್ತ್ವಶಾಸ್ತ್ರಗಳಲ್ಲಿ ಪರಿಣತನಾಗಬೇಕೆಂದು ಈತ ಅಲ್ಲಿ ವಿದ್ಯಾಭ್ಯಾಸ ನಡೆಸಿದ್ದ. ಆದರೆ ಲೂಡಾಲ್ಫ್ ಕ್ರೆಹ್ಲ್ ಎಂಬ ವೈದ್ಯನ ಖಾಸಗಿ ವೈದ್ಯಸಂಸ್ಥೆಯಲ್ಲಿ ಈತ ಆಟೋ ವಾರ್‍ಬರ್ಗ್ ಎಂಬ ಘನ ಜೈವಿಕರಸಾಯನವಿe್ಞÁನಿಯ ಪ್ರಭಾವಕ್ಕೆ ಒಳಗಾಗಿ ತತ್ತ್ವಶಾಸ್ತ್ರ, ಮನಃಶಾಸ್ತ್ರಗಳನ್ನು ಕೈಬಿಟ್ಟು ಜೈವಿಕರಸಾಯನ ವಿe್ಞÁನದ ವ್ಯಾಸಂಗದಲ್ಲಿ ಆಸಕ್ತನಾದ. ಈತ ಹೈಡಲ್‍ಬರ್ಗ್ ವಿದ್ಯಾಲಯದ ಎಂ.ಡಿ. ಪದವಿ ಪಡೆದು (1909) ಕೀಲ್ ಎಂಬಲ್ಲಿ ಶರೀರಕ್ರಿಯಾಶಾಸ್ತ್ರ ಹಾಗೂ ಭೌತರಸಾಯನವಿe್ಞÁನ ಅಧ್ಯಾಪಕನಾಗಿ ನೇಮಕಗೊಂಡ. ಮುಂದೆ ಕೆಲವು ವರ್ಷಗಳು ಬರ್ಲಿನ್ ವೈದ್ಯಕೀಯ ಕಾಲೇಜಿನಲ್ಲೂ ಅನಂತರ 1929ರಿಂದ ಹೈಡಲ್‍ಬರ್ಗಿನ ಕೈಸರ್ ವಿಲ್‍ಹೆಲ್ಮ್ ವೈದ್ಯಕೀಯ ಸಂಸ್ಥೆಯಲ್ಲೂ ಶರೀರಕ್ರಿಯಾ ವಿe್ಞÁನ ಪ್ರಾಧ್ಯಾಪಕನಾಗಿ ಸೇವೆಗೈದ. ಜರ್ಮನಿಯಲ್ಲಿ ನಾಜಿಗಳ ಪ್ರಾಬಲ್ಯ ಹೆಚ್ಚಿದಂತೆ ಮಿಕ್ಕ ಅನೇಕ ಯಹೋದ್ಯರಂತೆ ಮೇಯರ್ ಹಾಫನೂ 1938ರಲ್ಲಿ ಜರ್ಮನಿಯನ್ನು ಬಿಟ್ಟು ಪ್ಯಾರಿಸ್ಸನ್ನು ಸೇರಬೇಕಾಯಿತು. ಆದರೆ 1940ರಲ್ಲಿ ಅಲ್ಲಿಂದಲೂ ಓಡಿಹೋಗಬೇಕಾಗಿ ಬಂದು ಅಮೇರಿಕದ ಪೆನ್ಸಿಲ್‍ವೇನಿಯ ರಾಜ್ಯದ ಫಿಲಡೆಲ್ಫಿಯ ಸೇರಿದ. ಅಲ್ಲಿ ಪೆನ್ಸಿಲ್‍ವೇನಿಯ ವಿಶ್ವವಿದ್ಯಾಲುಯದಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡು ತನ್ನ ಅಂತಿಮಕಾಲದ ತನಕವೂ ಅಲ್ಲಿಯೇ ಪಾಠಪ್ರವಚನ ಸಂಶೋಧನೆಗಳಲ್ಲಿ ತೊಡಗಿದ್ದ.

ಆಕ್ಸಿಜನ್ ವಾತಾವರಣದಲ್ಲಿ ಸ್ನಾಯು ಸಂಕುಚಿಸುತ್ತಿರುವಾಗ ಅದಕ್ಕೆ ಅಗತ್ಯವಾದ ಶಕ್ತಿಯಾದರೂ (ಎನರ್ಜಿ) ಸ್ನಾಯುವಿನ ಗ್ಲೈಕೊಜಿನ ಎಂಬ ರಾಸಾಯನಿಕ ಲ್ಯಾಕ್ಟಿಕ್ ಆಮ್ಲವಾಗಿ ವಿಚ್ಛೇದನಗೊಳ್ಳುವುದರಿಂದ ದೊರೆಯುತ್ತೆಂದೂ ಮೇಯರ್ ಹಾಫ್ ನಿರೂಪಿಸಿದ (1919). ಅಲ್ಲದೆ ಸಂಕುಚನಾನಂತರ ವಿಶ್ರಾಂತಿ ಸಮಯದಲ್ಲಿ ಆಕ್ಸಿಜನ್ ದೊರೆತರೆ ಲ್ಯಾಕ್ಟಿಕ್ ಆಮ್ಲದಲ್ಲಿ 1/5 ಭಾಗ ಉತ್ಕರ್ಷಣೆಗೊಂಡು ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು ಪರಿಣಮಿಸುತ್ತೆಂದೂ ಆಗ ಬಿಡುಗಡೆಯಾದ ಶಕ್ತಿ ಮಿಕ್ಕ 4/5 ಭಾಗ ಲ್ಯಾಕ್ಟಿಕ್ ಆಮ್ಲವನ್ನು ಗ್ಲೈಕೊಜೆನ್ನಾಗಿ ಮತ್ತೆ ಪರಿವರ್ತಿಸುತ್ತೆದೆಂದೂ ವಿಶದಪಡಿಸಿದ.

ಇಂಗ್ಲೆಂಡಿನ ಶರೀರಕ್ರಿಯಾವಿe್ಞÁನಿ ಎ.ವಿ. ಹಿಲ್ ಎಂಬವ ಸ್ನಾಯು ಸಂಕುಚನ- ಆಕುಂಚನದಲ್ಲಿ ಆಗುವ ಉಷ್ಣತಾವ್ಯತ್ಯಾಸಗಳನ್ನು (ಅವು ಅತ್ಯಲ್ಪವಾಗಿದ್ದರೂ) ನಿಖರವಾಗಿ ವಿವರಿಸಿದ್ದ (1913-14). ಈ ವ್ಯತ್ಯಾಸಗಳನ್ನು ಮೇಯರ್‍ಹಾಫ್ ತಾನು ವಿಶದೀಕರಿಸಿದ್ದ ರಾಸಾಯನಿಕ ಬದಲಾವಣೆಗಳಿಗೆ ಅನ್ವಯಮಾಡಿ ಅರ್ಥವತ್ತಾಗಿ ವ್ಯಾಖ್ಯಾನ ನೀಡಿದ. ಇದಕ್ಕಾಗಿ ಇವನಿಗೂ ಹಿಲ್‍ಗೂ ಜಂಟಿಯಾಗಿ ನೊಬೆಲ್ ಪಾರಿತೋಷಿಕ ಲಭಿಸಿತು.

ಈ ರಾಸಾಯನಿಕ ಮಾರ್ಪಾಡುಗಳಿಗೆ ಅಗತ್ಯವಾದ ಕಿಣ್ವಗಳ ಮಿಶ್ರಣವನ್ನು ಸ್ನಾಯುವಿನಿಂದ ಬೇರ್ಪಡಿಸಿ ಅವು ಪ್ರಯೋಗಾಲಯದಲ್ಲೂ ತಮ್ಮ ಕ್ರಿಯಾ ಸಾಮಥ್ರ್ಯವನ್ನು ಹೊಂದಿರುವುದೆಂದು ಮೇಯರ್‍ಹಾಫ್ ನಿರೂಪಿಸಿದ. ಜರ್ಮನಿಯ ರಸಾಯನವಿe್ಞÁನಿ ಎಡುಯರ್ಡ್ ಬೂಕ್ನರ್ (1860-1917) ಎಂಬವ ಬೂಷ್ಟು (ಫಂಗಸ್) ಜಾತಿಗೆ ಸೇರಿದ ಯೀಸ್ಟ್ ಎಂಬ ಏಕಾಣುವಿನಿಂದ ಪ್ರತ್ಯೇಕಿಸಿ eóÉೈಮೀಸ್ ಕಿಣ್ವದ ವಿಷಯವನ್ನು ಮೇಯರ್‍ಹಾಫನ ಪ್ರಯೋಗ ನೆನಪಿಗೆ ತರುವಂತಿದೆ. ದ್ರಾಕ್ಷಾರಸದ ಸಕ್ಕರೆಯನ್ನು ಯೀಸ್ಟ್ ಕೋಶಗಳು ಆಲ್ಕೊಹಾಲನ್ನಾಗಿ ಪರಿವರ್ತಿಸುವುದು ಅವುಗಳ ಅವ್ಯಕ್ತ ಜೈವಿಕ ಸಾಮಥ್ರ್ಯದಿಂದಲ್ಲ; ಬದಲು ಅವುಗಳಲ್ಲಿರುವ ಕಿಣ್ವದ ರಾಸಾಯನಿಕ ಕ್ರಿಯೆಯಿಂದ. ಕಿಣ್ವವನ್ನು ಕೋಶರಹಿತವಾಗಿ ಪಡೆದು ಪ್ರಯೋಗನಳಿಕೆಯಲ್ಲಿ ಸಕ್ಕರೆ ದ್ರಾವಣದೊಡನೆ ಸೇರಿಸಿ ಬೆಚ್ಚಗೆ ಇಟ್ಟಿದ್ದರೆ, ಸಕ್ಕರೆ ದ್ರಾವಣ ಮದ್ಯಸಾರವಾಗಿ ಪರಿವರ್ತಿತವಾಗುತ್ತದೆ ಎಂದು ಆಗ ಭಾವಿಸಲಾಗಿತ್ತು. ಕಿಣ್ವಗಳು ತಮ್ಮ ಮಾತೃಕೋಶಗಳ ಹೊರಗೇ ಇದ್ದರೂ ತಮಗೆ ವಿಶಿಷ್ಟವಾದ ರಾಸಾಯನಿಕ ಪರಿವರ್ತನೆಗಳನ್ನು ನಡೆಸಬಲ್ಲವಾದ್ದರಿಂದ ಜೈವಿಕವಾಗಿ ನಡೆಯುವ ರಾಸಾಯನಿಕ ಕ್ರಿಯೆಗಳೂ ಇವುಗಳಿಂದಲೇ ಜರಗುವುದು ನಿಜ. ಅಂಥ ರಾಸಾಯನಿಕ ಕ್ರಿಯೆಗಳಿಗೆ ಅವ್ಯಕ್ತ ಜೈವಿಕಪ್ರಭಾವ ಅಗತ್ಯ ಎಂದು ಭಾವಿಸುವುದು ತಪ್ಪು: ಜೈವಿಕ ಕ್ರಿಯೆಗಳೆಲ್ಲವೂ ಮೂಲಭೂತವಾಗಿ ರಾಸಾಯನಿಕ, ಭೌತಿಕ ಕ್ರಮಗಳಾಗಿರುವುದೇ ಸರಿ ಎಂದು ಮೇಯರ್‍ಹಾಫ್ ಒತ್ತಿ ಒತ್ತಿ ಹೇಳುತ್ತಿದ್ದ. ಈ ವಿಚಾರಸರಣಿ ಮೇಯರ್‍ಹಾಫ್‍ನ ಶಿಷ್ಯರಾದ ಲಿಪ್‍ಮನ್ ಮತ್ತು ಓಕೋವ ಎಂಬುವವರಿಂದಲೂ ಮುಂದುವರಿದ್ದು ಮಾತ್ರ ಅಲ್ಲದೆ ಅದನ್ನು ಅನುಸರಿಸಿ ಜೈವಿಕ ರಾಸಾಯನಿಕ ವ್ಯಾಸಂಗಗಳಲ್ಲಿ ಸಂಶೋಧನೆಗಳನ್ನು ಮಾಡಿ ಅವರಿಬ್ಬರೂ ಬೇರೆ ಬೇರೆಯಾಗಿ ನೊಬೆಲ್ ಪಾರಿತೋಷಿಕ ಪಡೆಯುವಂತಾಯಿತು ಕೂಡ.

ಯೀಸ್ಟ್‍ನಿಂದ ಸಕ್ಕರೆ ಮದ್ಯಸಾರವಾಗುವುದರಲ್ಲೂ ಸ್ನಾಯುಗಳಲ್ಲಿ ಗ್ಲೈಕೊಜೆನ್ ಲ್ಯಾಕ್ಟಿಕ್ ಆಮ್ಲವಾಗುವುದರಲ್ಲೂ ವಿವಧ ಹಂತಗಳು ಸಮಾನವಾಗಿರುತ್ತವೆ ಎಂಬುದು ಮುಂದೆ ವ್ಯಕ್ತಪಟ್ಟಿತು. ಕ್ರಿಯಾಟಿನ್ ಫಾಸ್ಫೇಟ್ (ಸಿ. ಪಿ. 1926ರಲ್ಲಿ) ಮತ್ತು ಆಡಿನೊಸಿನ್ ಟ್ರೈಫಾಸ್ಫೇಟ್ (ಎ.ಟಿ.ಪಿ. 1929ರಲ್ಲಿ) ಎಂಬ ರಸಾಯನಿಕಗಳು, ಕ್ಷಿಪ್ರವಿಭಜನೆಗೊಂಡು ಶಕ್ತಿಯನ್ನು ಬಿಡುಗಡೆ ಮಾಡಬಲ್ಲ ಸಾಮಥ್ರ್ಯ ಹೊಂದಿದ್ದು ಅಲ್ಪಪ್ರಮಾಣದಲ್ಲಿಯೇ ಆದರೂ ಸ್ನಾಯುಗಳಲ್ಲಿ ಇರುವುದು ತಿಳಿಯಬಂತು. ಎ.ಟಿ.ಪಿ. ಎಂಬುದು ಎಲ್ಲ ಜೀವಕೋಶಗಳಲ್ಲೂ ಸರ್ವಥಾ ಇದ್ದೇ ಇರುವಂಥ ಘಟಕವೆಂದೂ ಜೈವಿಕಕ್ರಿಯೆಗಳಿಗೆ ತಕ್ಷಣ ಅಗತ್ಯವಾದ ಶಕ್ತಿ ಒದಗುವುದಕ್ಕೆ ಎ.ಟಿ.ಪಿಯೇ ಕಾರಣವೆಂದೂ ಮರುಕ್ಷಣದಲ್ಲಿ ಎ.ಟಿ.ಪಿ. ಮತ್ತೆ ಸಂಯೋಜನೆಗೊಂಡು ಕ್ರಿಯೆ ಮುಂದುವರಿಯುವುದೆಂದೂ ಅರಿವಾಯಿತು. ಶಕ್ತಿ ಅಗತ್ಯವೆನಿಸುವಂಥ ಜೈವಿಕಕ್ರಿಯೆಗಳು. ಅವು ಯಾವುದೇ ಪ್ರಾಣಿಯಲ್ಲಾಗಲಿ ಯಾವುದೇ ಸಸ್ಯದಲ್ಲಾಗಲಿ ಎಲ್ಲಕ್ಕೂ ಮೂಲ ಒಂದೇ; ಅದು ಎ.ಟಿ.ಪಿ. ವಿಭಜನೆ ಎಂಬುದು ಸ್ಪಷ್ಟವಾಯಿತು. ಈ ಬಗ್ಗೆ ಮೇಯರ್‍ಹಾಫ್ ಹಾಗೂ ಅವನ ಶಿಷ್ಯರು ವಿಶೇಷವಾಗಿ ಕೆಲಸ ಮಾಡಿದರು.

ಮೇಯರ್‍ಹಾಫ್ 6 ಅಕ್ಟೋಬರ್ 1951ರಲ್ಲಿ, ಫಿಲಿಡೆಲ್ಫಿಯದಲ್ಲಿ ಮೃತನಾದ.

                                    							(ಎಸ್.ಆರ್.ಆರ್.)