ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೇರಿ ರಾಣಿಯರು

ಮೇರಿ ರಾಣಿಯರು

ಮೇರಿ ಹೆಸರಿನ ಅನೇಕ ರಾಣಿಯರು ಆಗಿ ಹೋಗಿದ್ದಾರೆ. ಅವರ ಪೈಕಿ ಪ್ರಮುಖರಾದ ಕೆಲವರನ್ನು ಇಲ್ಲಿ ಕೊಟ್ಟಿದೆ.

ಮೇರಿ, ಬರ್ಗಂಡಿ : 1457-82. ಬರ್ಗಂಡಿಯ ರಾಣಿ. 13 ಫೆಬ್ರವರಿ 1457ರಲ್ಲಿ ಬ್ರಸ್ಸೆಲ್ಸಿನಲ್ಲಿ ಜನನ. ಈಕೆ ಬರ್ಗಂಡಿಯ ಡ್ಯೂಕ್ ಚಾಲ್ರ್ಸ್ ಬೊಲ್ಡ ಮತ್ತು ಇಸಬೆಲ್ಲರ ಮಗಳು. 1476ರಲ್ಲಿ ಆರ್ಜ್‍ಡ್ಯೂಕ್ ಮ್ಯಾಕ್ಸಿ ಮಿಲಿಯನ್‍ನೊಂದಿಗೆ (ಇವನ ಅನಂತರದ ಹೆಸರು ಮ್ಯಾಕ್ಸಿಮಿಲಿಯನ್) ಇವಳ ವಿವಾಹ ನಿಶ್ಚಯವಾಯಿತು. ತನ್ನ ತಂದೆ ನ್ಯಾನ್ಸಿಯ ಕದನದಲ್ಲಿ ಸತ್ತ ಬಳಿಕ (1477) ಈಕೆ ರಾಣಿಯಾದಳು.

ಫ್ರೆಂಚ್‍ಕಾಮ್ಟೆ : ಬರ್ಗಂಡಿ, ಪಿಕಾರ್ಡಿ ಮತ್ತು ಆರ್ಟಾಯ್ಸ್ (ಈಗ ಇವು ಫ್ರಾನ್ಸ್‍ನಲ್ಲಿವೆ.) ಮುಂತಾದ ಬರ್ಗಂಡಿಯ ಪ್ರದೇಶಗಳನ್ನು ಫ್ರಾನ್ಸಿನ ಹನ್ನೊಂದನೆಯ ಲೂಯಿ ವಶಪಡಿಸಿಕೊಂಡ. ಆಗ ಮೇರಿ ತನ್ನ ಸಚಿವರ ಹಾಗೂ ಪ್ರಾಂತೀಯ ಸರ್ಕಾರಗಳು ನಿಯಮಿತ ಸೈನ್ಯದ ನೆರವು ನೀಡುವುದಾಗಿ ಒಪ್ಪಿಕೊಂಡವು. ಫ್ರೆಂಚರ ವಿರುದ್ಧ ಮೇರಿ ಮತ್ತು ಮ್ಯಾಕ್ಸಿಮಿಲಿಯನ್ ಯುದ್ಧ ಮಾಡಿದರು. ಈ ನಡುವೆ ಹನ್ನೊಂದನೆಯ ಲೂಯಿ ತನ್ನ ಮಗ ಎಂಟನೆಯ ಚಾಲ್ರ್ಸ್‍ನನ್ನು ಮದುವೆಯಾಗೆಂದು ಮೇರಿಯನ್ನು ಒತ್ತಾಯಸಿದ. ಆದರೆ ಮೇರಿ ಇದಕ್ಕೆ ಒಪ್ಪದೆ ಮಾಕ್ಸಿಮಿಲಿಯನ್‍ನನ್ನೇ (ರೋಮ್ ಚಕ್ರವರ್ತಿ ಮೂರನೆಯ ಫ್ರೆಡರಿಕ್‍ನ ಮಗ) ಮದುವೆಯಾದಳು (18 ಆಗಸ್ಟ್ 1477). ಕಟ್ಟಕಡೆಗೆ ಫ್ರೆಂಚ್‍ಕಾಮ್ಟೆ, ಆರ್ಟಾಯ್ಸ್ ಮತ್ತು ನೆದರ್ಲೆಂಡ್‍ಗಳು ಹ್ಯಾಪ್ಸ್‍ಬರ್ಗ್‍ಗೆ ಸೇರಿದವು.

ಮಾರ್ಚ್ 27, 1482ರಲ್ಲಿ ಮೇರಿ ಬ್ರಗ್ಸ್‍ನಲ್ಲಿ ನಿಧನಹೊಂದಿದಳು.

ಮೇರಿ ಟ್ಯೂಡರ್ : 1496-1533. ಇಂಗ್ಲೆಂಡಿನ ರಾಜಕುಮಾರಿ, ಫ್ರಾನ್ಸಿನ ದೊರೆ ಹನ್ನೆರಡನೆಯ ಲೂಯಿಯ ಮೂರನೆಯ ಹೆಂಡತಿ. ಇಂಗ್ಲೆಂಡಿನ ದೊರೆ ಎಂಟನೆಯ ಹೆನ್ರಿಯ (1509-47) ಸಹೋದರಿ, 1496. ಮಾರ್ಚ್‍ನಲ್ಲಿ ಜನನ.

ಮೇರಿಯ ತಂದೆ ಏಳನೆಯ ಹೆನ್ರಿ (1455-1509 ಆಳ್ವಿಕೆ) ಡ್ಯೂಕ್‍ಚಾಲ್ರ್ಸ್‍ನೊಡನೆ (ಅನಂತರ ರೋಮನ್ ಚಕ್ರವರ್ತಿ ಐದನೆಯ ಚಾಲ್ರ್ಸ್) ವಿವಾಹ ನಿಷ್ಕರ್ಷೆ ಮಾಡಿದ (1507), ಆದರೆ ರಾಜಕೀಯ ಕಾರಣಗಳಿಂದಾಗಿ ಮೇರಿಯ ವಿವಾಹ 52 ವರ್ಷದ ಫ್ರಾನ್ಸಿನ ದೊರೆ ಹನ್ನೆರಡನೆಯ ಲೂಯಿಯೊಡನೆ ನಡೆಯಿತು (1514). ಆದರೆ ಇದಕ್ಕೂ ಮುನ್ನ ಈಕೆಗೆ ಸಪೋಕ್‍ನ ಡ್ಯೂಕ್ ಚಾಲ್ರ್ಸ್ ಬ್ರಾನ್‍ಡನ್‍ನಲ್ಲಿ ಪ್ರೀತಿ ಬೆಳೆದಿತ್ತು. ಆದ್ದರಿಂದ ವಿವಾಹಕ್ಕೆ ಮುಂಚೆಯೆ ಲೂಯಿ ಸತ್ತ ಬಳಿಕ ತಾನು ಇಷ್ಟಪಟ್ಟವನೊಂದಿಗೆ ಮದುವೆ ಮಾಡಿಕೊಳ್ಳುವುದಾಗಿ ತನ್ನ ಸಹೋದರನಿಂದ ಪ್ರಮಾಣ ಮಾಡಿಸಿಕೊಂಡಿದ್ದಳು. 1515 ಜನವರಿ ಒಂದರಂದು ಲೂಯಿ ಸತ್ತ. ಲೂಯಿಯ ಉತ್ತರಾಧಿಕಾರಿಗಳು ಮೇರಿಯನ್ನು ಮತ್ತೊಂದು ರಾಜಕೀಯ ವಿವಾಹದಲ್ಲಿ ತೊಡಗಿಸುವುದಕ್ಕೆ ಮುಂಚೆಯೇ ಆಕೆ ಸಪೋಕ್‍ನನ್ನು ಫೆಬ್ರವರಿ ಅಂತ್ಯದ ವೇಳೆಗೆ ಪ್ಯಾರಿಸ್‍ನಲ್ಲಿ ಗುಟ್ಟಾಗಿ ಮದುವೆಯಾದಳು. ಈಕೆ 24ಜೂನ್ 1533ರಂದು ಸಪೋಕ್‍ನ ವೆಸ್ಟ್ ಕಾರ್ಫನಲ್ಲಿ ನಿಧನಳಾದಳು.

ಮೇರಿ, ಲೊರೇನ್ : 1515-60, ಈಕೆಯನ್ನು ಗ್ವೀ¸óï ಮೇರಿ ಎಂದೂ ಕರೆಯಲಾಗುತ್ತಿತ್ತು. ಈಕೆ ಲೊರೇನ್‍ನ ಬಾರ್-ಲ-ಡ್ಯೂಕ್ ಎಂಬಲ್ಲಿ 22 ನವೆಂಬರ್ 1515ರಂದು ಜನಿಸಿದಳು. ಲೊರೇನ್‍ನ ಡ್ಯೂಕ್ ಡಿ ಗ್ವೀ¸óï ಕ್ಲಾಡ್‍ನ ಹಿರಿಯ ಮಗಳಿವಳು. ಈಕೆ ತನ್ನ ಮಗಳಾದ ಮೇರಿ ಸ್ಟೂಅರ್ಟ್‍ಗೆ ಸ್ಕಾಟ್ಲೆಂಡಿನಲ್ಲಿ ರಾ ಪ್ರತಿನಿಧಿಯಾಗಿದ್ದಳು. ಈಕೆಗೆ ಲೂಯಿ ಡಿ ಆರ್ಲಿಯನ್ಸ್‍ನೊಡನೆ (ಡ್ಯೂಕ್‍ಜ ಲಾಂಗೆವಿಲ್ಲೆ 11) ಮೊದಲ ಮದುವೆಯಾಯಿತು. (4 ಆಗಸ್ಟ್ 1534). ಡಿ ಇವಳಿಗೆ ಫ್ರಾಕಾಯ್ಸ್ ಎಂಬ ಮಗ ಹುಟ್ಟಿದ. (ಇವನು ಮುಂದೆ ಡ್ಯೂಕ್ ಡಿ ಲಾಂಗೆವಿಲ್ಲೆ 111 ಆದ.) 1537ರಲ್ಲಿ ಲೂಯಿ ಡಿ ಆರ್ಲಿಯನ್ಸ್ ತೀರಿಕೊಂಡ. ಅನಂತರ 1538ರಲ್ಲಿ ಸ್ಕಾಟ್ಲೆಂಡಿನ ದೊರೆ ಐದನೆಯ ಜೇಮ್ಸ್ ಜೊತೆ ಮದುವೆಯಾದಳು. ಇವನು 14 ಡಿಸೆಂಬರ್ 1542ರಲ್ಲಿ ಸತ್ತ. ಇವರ ಮಗಳೇ ಮೇರಿ ಸ್ಟೂಅರ್ಟ್.

ಮೇರಿ ಗ್ವೀ¸óï ತನ್ನ ಆಳ್ವಿಕೆಯ ಕಾಲದಲ್ಲಿ ಧಾರ್ಮಿಕ ಪಂಗಡಗಳೊಡನೆ ಹೊಂದಾಣಿಕೆ ಮಾಡಿಕೊಂಡಳು. ಈಕೆ ಫ್ರೆಂಚ್‍ಪರ ನೀತಿಯನ್ನು ಅನುಸರಿಸಿದ ಕಾರಣ ಪ್ರೊಟೆಸ್ಟಂಟ್ ಗಣ್ಯರ ಜೊತೆ ಸಂಘರ್ಷದಲ್ಲಿ ತೊಡಗಬೇಕಾಯಿತು. ಅನಂತರ ಪ್ರೊಟೆಸ್ಟೆಂಟರ್ ಸಹಾಯದಿಂದ ಫ್ರಾನ್ಸಿನ ಡಾಫಿನ್‍ನೊಂದಿಗೆ (ಈತ ಅನಂತರ ದೊರೆ ಫ್ರಾನ್ಸಿಸ್ 11ಆದ) ತನ್ನ ಮಗಳ ಮದುವೆ ಮಾಡಿದಳು (1558). ಧಾರ್ಮಿಕ ಸಮನ್ವಯ ತತ್ತ್ವವನ್ನು ತೊರೆದು ಸ್ಕಾಟ್ಲೆಂಡಿನಲ್ಲಿ ಪ್ರೊಟೆಸ್ಟೆಂಟ್‍ರನ್ನು ಹತ್ತಿಕ್ಕಬೇಕೆಂದು ಫ್ರೆಂಚರು ಈಕೆಯನ್ನು ಒತ್ತಾಯಿಸಿದರು. 1559ರಲ್ಲಿ ಈಕೆ ಕೆಲವರು ಧರ್ಮಪ್ರಚಾರಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪೆರ್ತ್‍ನಲ್ಲಿ ಬಂಡಾಯದ ಕಿಡಿ ಹೊತ್ತಿಸಿದಳು. ಪ್ರೊಟೆಸ್ಟೆಂಟ್ ಗಣ್ಯರು ಮೇರಿಯನ್ನು ಎಡಿನ್‍ಬರ್ಗ್‍ನಿಂದ ಓಡಿಸಿದರು. ಅನಂತರ 21 ಅಕ್ಟೋಬರ್ 1559ರಲ್ಲಿ ಈಕೆಯನ್ನು ಪದಚ್ಯುತ ಗೊಳಿಸಲಾಯಿತು. ಫ್ರೆಂಚರ ಸಹಾಯದಿಂದ ಪುನಃ ಈಕೆ ಎಡಿನ್‍ಬರ್ಗ್‍ನ್ನು ಆಕ್ರಮಿಸಿದಳು. ಆದರೆ ಪ್ರೊಟೆಸ್ಟೆಂಟ್‍ರಿಗೆ ಇಂಗ್ಲಿಷ್ ಸೈನ್ಯ ಸಹಾಯ ಮಾಡಿ 1560 ಏಪ್ರಿಲ್‍ನಲ್ಲಿ ಲೀತನ್ನು ಆಕ್ರಮಿಸಿತು.

11 ಜೂನ್ 1560ರಲ್ಲಿ ಎಡಿನ್‍ಬರ್ಗ್‍ನಲ್ಲಿ ಮೇರಿ ಮರಣಹೊಂದಿದಳು.

ಮೇರಿ (ಮೊಲದನೆಯ) : 1516-58. ಇಂಗ್ಲೆಂಡಿನ ಮೊದಲ ರಾಣಿ. ಈಕೆಗೆ ಮೇರಿ ಟ್ಯೂಡರ್ ಎಂದೂ ಹೆಸರಿತ್ತು. 18 ಫೆಬ್ರವರಿ 1516ರಲ್ಲಿ ಲಂಡನ್‍ನಗರದ ಗ್ರೆನಿಚ್ ಎಂಬಲ್ಲಿ ಹುಟ್ಟಿದಳು. ತಂದೆ ಎಂಟನೆಯ ಹೆನ್ರಿ; ತಾಯಿ ಕ್ಯಾತರೀನ್. ತಾಯಿಯೇ ಮೇರಿಯ ಗುರು. 1525ರಲ್ಲಿ ಮೇರಿಯನ್ನು ವೇಲ್ಸ್‍ನ ರಾಜಕುಮಾರಿಯಾಗಿ ಮಾಡಲಾಯಿತು. ಈಕೆ ರೋಮನ್ ಕ್ಯಾತೊಲಿಕ್ ಪಂಥವನ್ನು ಇಂಗ್ಲೆಂಡಿನಲ್ಲಿ ಆಚರಣೆಗೆ ತರುವ ಸಲುವಾಗಿ ಪ್ರೊಟೆಸ್ಟಂಟರನ್ನು ಸದೆಬಡಿದಳು.

1553ರಲ್ಲಿ ಎಡ್ವರ್ಡ್ ಮರಣ ಹೊಂದಿದ. ಎಂಟನೆಯ ಹೆನ್ರಿಯ ಸಹೋದರಿ ಲೇಡಿ ಜಾನ್ ಗ್ರೇ, ಸಿಂಹಾಸನವನ್ನು ಆಕ್ರಮಿಸಿಕೊ.ಡದ್ದರಿಂದ ನಾರ್‍ಪೋಕ್ ಎಂಬಲ್ಲಿ ಮೇರಿ ಆಶ್ರಯ ಪಡೆದಳು. ಲೇಡಿ ಜಾನ್ ಗ್ರೇ ಕೆಲವು ದಿನಗಳ ಬಳಿಕ ತಾನೇ ಮಹಾರಾಣಿಯೆಂದು ಘೋಷಿಸಿಕೊಂಡಳು. ಆದರೆ ಇಡೀ ದೇಶದ ಅಭಿಪ್ರಾಯದಂತೆ ಮೇರಿಯೇ ಉತ್ತರಾಧಿಕಾರಿಣಿಯಾಗಿ ಪುನಃ ಲಂಡನ್ನಿಗೆ ಬಂದಳು. ಬದಲಾಗುತ್ತಿದ್ದ ಸಾಮಾಜಿಕ ಹಾಗೂ ರಾಜಕೀಯ ಸನ್ನಿವೇಶಗಳಿಗೆ ತಕ್ಕಂತೆ ರಾಜ್ಯಭಾರಕ್ರಮವನ್ನು ರೂಪಿಸಿಕೊಂಡು ನಿಭಾಯಿಸಲಾರದೆ ಹೋದಳು. ಹಳೆಯ ರೋಮ್ ಸಾಮ್ರಾಜ್ಯದಲ್ಲಿದ್ದ ಚರ್ಚ್ ಆಡಳಿತ ಪದ್ಧತಿಯನ್ನು ಜಾರಿ ತಂದಳು. ಈಕೆ ಸ್ಪೇನಿಗೆ ದೊರೆ ಐದನೆಯ ಚಾಲ್ರ್ಸ್‍ನ ಮಗ ಎರಡನೆಯ ಫಿಲಿಪ್‍ನನ್ನು ಮದುವೆಯಾದಳು. (1554). ಇದರಿಂದ ಕುಪಿತಗೊಂಡ ಪ್ರೊಟೆಸ್ಟೆಂಟ್‍ರು ತಾಮಸ್ ವೀಯಟ್ ನಾಯಕತ್ವದಲ್ಲಿ ದಂಗೆಯೆದ್ದರು. ಇದನ್ನರಿತ ಮೇರಿ ಲಂಡನ್ ಜನತೆಯನ್ನುದ್ದೇಶಿಸಿ ವಿರೋಚಿತ ಭಾಷಣ ಮಾಡಿದಳು. ಇದರಿಂದ ಉದ್ರಿಕ್ತರಾದ ಜನ ರೊಚ್ಚುಗೆದ್ದು ಪ್ರೊಟೆಸ್ಟೆಂಟ್ ದಂಗೆಕೋರರನ್ನು ಸದೆ ಬಡಿದರು. ತಾಮಸ್ ವೀಯಟ್‍ನನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು. ಈ ಘಟನೆಯ ಬಳಿಕ ಫಿಲಿಪ್‍ನನ್ನು ಮೇರಿ ಮದುವೆಯಾದಳು. ರೋಮನ್ ಕ್ಯಾತೋಲಿಕ್ ಪಂಥದ ತತ್ತ್ವಗಳಿಗನುಗುಣವಾಗಿ ಕಾನೂನುಗಳು ರೂಪುಗೊಂಡವು. ಕ್ಯಾತೋಲಿಕ ಪ್ರೊಟೆಸ್ಟೆಂಟ್ ಪಂಥದವರ ಅಂತಃಕಲಹದಲ್ಲಿ ಹರಿದ ನೆತ್ತರು, ಉಂಟಾದ ಸಾವು ನೋವುಗಳಿಂದ ಬೇಸತ್ತ ಜನ ಮೇರಿಯ ರಕ್ತಪಿಪಾಸಿತನವನ್ನು ಖಂಡಿಸಿದರು. ಕೊನೆಗೆ ಅನಾರೋಗ್ಯದ ನಿಮಿತ್ತ ನವೆಂಬರ್ 17, 1558ರಂದು ಮೇರಿ ಮೃತಪಟ್ಟಳು.

ಮೇರಿ, ಸ್ಕಾಟ್ಲೆಂಡ್ : 1542-87. ಸ್ಕಾಟ್ಲೆಂಡಿನ ರಾಣಿ. ಈಕೆಯ ಮೊದಲ ಹೆಸರು ಮೇರಿ ಸ್ಟೂಅರ್ಟ್. ಈಕೆಯ ತಂದೆ ಸ್ಕಾಟ್ಲೆಂಡಿನ ದೊರೆ ಐದನೆಯ ಜೇಮ್ಸ್, ತಾಯಿ ಮೇರಿ ಗ್ವೀ¸óï. ಮೇರಿ ಸ್ಟೂಅರ್ಟ್ ಹುಟ್ಟಿದ ಆರು ದಿನಕ್ಕೆ ತಂದೆ ಸತ್ತ ಕಾರಣದಿಂದ ಮಗು ಮೇರಿಯನ್ನೇ ಸ್ಕಾಟ್ಲೆಂಡಿನ ಉತ್ತರಾಧಿಕಾರಿಣಿಯಾಗಿ ಮಾಡಲಾಯಿತು. ಈಕೆಯ ದೊಡ್ಡಪ್ಪ ಇಂಗ್ಲೆಂಡಿನ ಏಳನೆಯ ಹೆನ್ರಿ ತನ್ನ ಅಧಿಕಾರವನ್ನು ಸ್ಥಾಪಿಸಲು ವಿಫಲಯತ್ನ ಮಾಡಿದ.

ಎರಡನೆಯ ಹೆನ್ರಿಯ ಕುಟುಂಬದಲ್ಲಿ ಮೇರಿ ಬೆಳೆದಳು. ಇಲ್ಲಿ ಈಕೆಯ ತಾಯಿಯ ಸಂಬಂಧಿಕರಾದ ಗ್ವೀ¸óï ಮನೆತನದವರಿಂದ ಸಹಾಯ ಪಡೆಯುತ್ತಿದ್ದಳು. ಲ್ಯಾಟಿನ್, ಇಟಲಿ, ಸ್ಪ್ಯಾನಿಷ್, ಮತ್ತು ಗ್ರೀಕ್ ಭಾಷೆಗಳನ್ನು ಇವಳಿಗೆ ಕಲಿಸಿದರು. ಪ್ರೆಂಚ್ ಈಕೆಗೆ ಪ್ರಥಮ ಭಾಷೆ. ಎಲ್ಲ ವಿಧದಿಂದಲೂ ಈಕೆ ಫ್ರೆಂಚ್ ಮಹಿಳೆಯಾಗಿ ಬೆಳೆದಳು. ಫ್ರಾನ್ಸಿನ ಎರಡನೆಯ ಹೆನ್ರಿಯ ಮಗ ಫ್ರಾನ್ಸಿಸ್‍ನೊಂದಿಗೆ ಈಕೆಯ ಮದುವೆಯಾಯಿತು. (1558). ಫ್ರೆಂಚ್ ಹಾಗೂ ಸ್ಕಾಟ್ಲೆಡಿನ ಸಂಘಟನೆಯ ಉದ್ದೇಶ ಇಲ್ಲಿತ್ತು. 1560ರಲ್ಲಿ ಫ್ರಾನ್ಸಿಸ್ ಸತ್ತ.

1561ರಲ್ಲಿ ಮೇರಿ ಸ್ಕಾಟ್ಲೆಂಡಿಗೆ ಹಿಂತಿರುಗಿದಳು. ಈಕೆಗೆ ಇಂಗ್ಲೆಂಡಿನ ಉತ್ತರಾಧಿಕಾರದ ಹಕ್ಕಿದ್ದುದರಿಂದ ರಾಣಿ ಎಲಿಜಬೆತ್ ಈಕೆಯ ವೈರಿಯಾದಳು. ಮೇರಿ ರೋಮನ್ ಕ್ಯಾತೋಲಿಕ್, ಈಕೆಯ ಗೈರುಹಾಜರಿಯಲ್ಲಿ ಸ್ಕಾಟ್ಲೆಂಡಿನಲ್ಲಿ ಪ್ರೊಟೆಸ್ಟೆಂಟರು ಪ್ರಬಲರಾದರು. ಲಾರ್ಡ್ ಡಾರ್ನ್‍ಲಿ ಎಂಬಾತನನ್ನು ಮೇರಿ 1565ರಲ್ಲಿ ವಿವಾಹವಾದಳು. ಎರಡು ವರ್ಷಗಳ ಬಳಿಕ ಅವನನ್ನು ಕೊಲೆ ಮಾಡಲಾಯಿತು ಸ್ಕಾಟಿಷ್ ಗಣ್ಯರು ಮೇರಿಯನ್ನು ಸೆರಮನೆಗೆ ಹಾಕಿದರು. ಅವಳು ಅಲ್ಲಿಂದ ತಪ್ಪಿಸಿಕೊಂಡು ಇಂಗ್ಲೆಂಡಿಗೆ ಓಡಿ ಹೋದಳು. ಈಕೆ ಇಂಗ್ಲೆಂಡಿಗೆ ರಾಣಿಯಾಗುವ ಅವಕಾಶವಿದ್ದುದರಿಂದ ಅಲ್ಲಿಯ ರಾಣಿ ಮೊದಲನೆಯ ಎಲಿಜಬೆತ್‍ಳಿಗೆ ಭಯವಾಗಿ ಮೇರಿಯನ್ನು 18ವರ್ಷಗಳ ಕಾಲ ಸೆರಮನೆಯಲ್ಲಿ ಹಾಕಿದಳು. ಅನಂತರ ಅವಳನ್ನು 8 ಫೆಬ್ರವರಿ 1587ರಲ್ಲಿ ಸೆರಮನೆಯಲ್ಲೆ ಮರಣದಂಡನೆಗೆ ಒಳಪಡಿಸಲಾಯಿತು.

ಮೇರಿ ಆರೇಂಜ್: 1631-60. ಮೇರಿ ಹೆನ್ರಿಯಟ್ಟ ಸ್ಟೂಅರ್ಟ್ ಈಕೆಯ ಹೆಸರು. ಇಂಗ್ಲೆಂಡಿನ ದೊರೆ ಒಂದನೆಯ ಚಾಲ್ರ್ಸ್‍ನ ಮೊದಲ ಮಗಳು. 4 ನವೆಂಬರ್ 1631ರದು ಲಂಡನ್ ನಗರದ ನ್ಯೂಸ್ಟೈಲ್ ಎಂಬಲ್ಲಿ ಜನಿಸಿದಳು. 2 ಮೇ 1641ರಂದು ಡಚ್ ರಾಜಕುಮಾರ ಹಾಗೂ ಆರೇಂಜನ ಸ್ಟೂಅರ್ಟ್ ಆಗಿದ್ದ ವಿಲಿಯಮ್ ನನ್ನು ಮದುವೆಯಾದಳು. 1647ರ ವೇಳೆಗೆ ವಿಲಿಯಮ್ ಆರೆಂಜ್ ಪ್ರಾಂತ್ಯದ ಸ್ಟೂಅರ್ಟ್ ಆದ. ಇದಾದ ಮೂರೇ ವರ್ಷಗಳಲ್ಲಿ ಅಮಸ್ಟರ್‍ಡ್ಯಾಮನ್ನು ವಶಪಡಿಸಿಕೊಳ್ಳುವ ಯತ್ನದಲ್ಲಿ ಮೃತಪಟ್ಟ (ಮೇರಿ ಹಾಗೂ ವಿಲಿಯಮ್ ಇವರ ಮಗನೇ ಇಂಗ್ಲೆಂಡಿನ ದೊರೆ ಮೂರನೆಯ ವಿಲಿಯಮ್). ಇವಳು ತನ್ನ ತಮ್ಮಂದಿರಾದ ಎರಡನೆಯ ಚಾಲ್ರ್ಸ್ ಮತ್ತು ಎರಡನೆಯ ಜೇಮ್ಸ್ ಇವರಿಗೆ ಅರಮನೆಯಲ್ಲಿ ಕೊಟ್ಟ ಉನ್ನತ ಸ್ಥಾನಮಾನಗಳು ಹಾಗೂ ಪದವಿಗಳು ಡಚ್ಚರಲ್ಲಿ ಅಸಮಾಧಾನ ಉಂಟುಮಾಡಿತು. ರಾಣಿ ತನ್ನ ಬಂಧುಗಳನ್ನು ಹಾಲೆಂಡಿಗೆ ಬರಮಾಡಿಕೊಳ್ಳದಂತೆ ನಿಷೇಧ ಹೇರಲಾಯಿತು. 1654-57 ಅವಧಿಯಲ್ಲಿ ರಾಣಿ ಹಾಲೆಂಡ್‍ನಿಂದ ಹೊರಗೆ ಕಾಲಕಳೆದಳು. 1657ರಿಂದ ಆರೆಂಜ್ ಪ್ರಾಂತ್ಯದ ಉತ್ತರಾಧಿಕಾರಿಯಾಗಿದ್ದ ತನ್ನ ಮಗನ ಪ್ರತಿನಿಧಿಯಾಗಿ ಆಯ್ಕೆಯಾದಳು. ಆಡಳಿತದಲ್ಲಿ ತೊಂದರೆಯುಂಟಾಗಿ, ತನ್ನ ಸಹಾಯಕ್ಕಾಗಿ ಫ್ರಾನ್ಸಿನ ಹದಿನಾಲ್ಕನೆಯ ಲೂಯಿಯ ಸಹಾಯ ಬೇಡಿದಳು. ಆದರೆ ಇವನು ಸಹಾಯ ಮಾಡುವುದರ ಬದಲು ಆರೆಂಜ್ ಪ್ರಾಂತ್ಯವನ್ನೇ ಆಕ್ರಮಿಸಿಕೊಂಡ. ಅನಂತರ 1660ರಲ್ಲಿ ಮೇರಿ ಇಂಗ್ಲೆಂಡಿಗೆ ತೆರಳಿ ಸಿಡುಬು ರೋಗಕ್ಕೆ ತುತ್ತಾಗಿ ಲಂಡನ್ನಿನಲ್ಲಿ ಮೃತಪಟ್ಟಳು.

ಮೇರಿ, ಮೊಡಾನ್ : 1658-1718. ಈಕೆಯ ಹೆಸರು ಮೇರಿ ಬೀಟ್ರಾಸ್. ಇಟಲಿಯ ಮೊಡಾನದಲ್ಲಿ 5 ಅಕ್ಟೋಬರ್ 1658ರಂದು ಜನಿಸಿದಳು. ಮೊಡನದ ಡ್ಯೂಕ್ ನಾಲ್ಕನೆಯ ಆಲ್‍ಫನ್ಸೋನ್ ಮಗಳು. ಇಂಗ್ಲೆಂಡಿನ ದೊರೆ ಎರಡನೆಯ ಜೇಮ್ಸ್‍ನ ಎರಡನೆಯ ಹೆಂಡತಿ. 1688ರ ಕ್ರಾಂತೀಯ ಕಾಲದಲ್ಲಿ ಜೇಮ್ಸ್ ಇಂಗ್ಲೆಂಡಿನಿಂದ ಓಡಿಹೋಗಲು ಮೇರಿಯ ಆಕರ್ಷಣೆಯೇ ಕಾರಣ. ಫ್ರೆಂಚ್ ರಾಯಭಾರಿಯೊಬ್ಬನ ಮೂಲಕ ಈಕೆಗೆ ಜೇಮ್ಸ್‍ನ ಪರಿಚಯವಾಗಿ, ಇವನೊಡನೆ 1673 ಸೆಪ್ಟೆಂಬರ್‍ನಲ್ಲಿ ಮದುವೆಯಾಯಿತು. ಈಕೆ ಅದೇ ವರ್ಷ ನವೆಂಬರಿನಲ್ಲಿ ಇಂಗ್ಲೆಂಡಿಗೆ ಬಂದಾಗ ಇಂಗ್ಲಿಷರು ಇವಳಿಗೆ ಅಧಿಕಾರದಾಹವಿರಬಹುದೆಂದು ಶಂಕಿಸಿದರು. ಈಕೆಗೆ ಮೊದಲನೆಯ ಮಗು ಉಳಿಯಲಿಲ್ಲ. ಎರಡನೆಯ ಮಗ ಜೇಮ್ಸ್ ಫ್ರಾನ್ಸಿಸ್ 20 ಜೂನ್ 1688 ರಂದು ಹುಟ್ಟಿದ. ಆಗ ಪ್ರೊಟೆಸ್ಟಂಟರು ಮಗು ಆಕೆಯದಲ್ಲ; ಆದರೂ ಸಿಂಹಾಸನಕ್ಕೆ ಒಬ್ಬ ಕ್ಯಾತೊಲಿಕ್ ಉತ್ತರಾಧಿಕಾರಿಯನ್ನು ನೇಮಿಸಲೋಸುಗ ಹೀಗೆ ಮಾಡಿದ್ದಾರೆಂದು ಸುಳ್ಳು ಹಬ್ಬಿಸಿದರು. ಆದ್ದರಿಂದ ಪ್ರೊಟೆಸ್ಟಂಟ್ ದೊರೆ ವಿಲಿಯಮ್ (ಆರಂಜ್‍ನ ದೊರೆ ಹಾಗೂ ಹಾಲೆಂಡಿನ ಅಧಿಪತಿ) 1688 ನವೆಂಬರಿನಲ್ಲಿ ಇಂಗ್ಲೆಂಡಿಗೆ ಮುತ್ತಿಗೆ ಹಾಕಿದ. ಮೇರಿ ತನ್ನ ಮಗನೊಡನೆ ಫ್ರಾನ್ಸ್‍ಗೆ ಓಡಿದಳು. ಜೇಮ್ಸ್ ಅವಳನ್ನೇ ಹಿಂಬಾಲಿಸಿದ. 7 ಮೇ 1718 ರಂದು ಮೇರಿ ಮೃತಪಟ್ಟಳು.

ಮೇರಿ : (ಎರಡನೆಯ) 1662-94. ಇಂಗ್ಲೆಂಡಿನ ರಾಣಿ (1689-94). ಎರಡನೆಯ ಜೇಮ್ಸ್ ದೊರೆಯ ಮಗಳು. 30 ಏಪ್ರಿಲ್ 1662 ರಂದು ಲಂಡನ್ನಿನಲ್ಲಿ ಜನಿಸಿದಳು. ಈಕೆ ಮೂರನೆಯ ವಿಲಿಯಮ್‍ನ ಮಡದಿ. ತನ್ನ ತಂದೆಯ ಸರ್ಕಾರ ಉರುಳಿಹೋದ ಬಳಿಕ ಡಚ್ ಪತಿಯನ್ನು ದೊರೆಯನ್ನಾಗಿಸಲು ಸಹಾಯಕಳಾದಳು. ಮೇರಿಯ ತಂದೆತಾಯಿಗಳು ರೋಮನ್ ಕ್ಯಾತೊಲಿಕರಾಗಿದ್ದರೂ ಮಗಳನ್ನು ಮಾತ್ರ ಪ್ರೊಟೆಸ್ಟಂಟಳನ್ನಾಗಿಸಿ ಬೆಳೆಸಿದರು. 1677 ರಲ್ಲಿ ಅರೆಂಜ್‍ನ ವಿಲಿಯಮ್‍ನೊಡನೆ ಮೇರಿಯ ವಿವಾಹವಾಯಿತು. ವಿಲಿಯಮ್ ಹಾಲೆಂಡಿನ ಜಮೀನ್ದಾರ ಹಾಗೂ ಯೂರೋಪಿನ ಪ್ರೊಟೆಸ್ಟಂಟ್ ನಾಯಕ. ಮದುವೆಯಾದ ಬಳಿಕ ಮೇರಿ ಹಾಲೆಂಡಿನಲ್ಲಿ ನೆಲೆಸಿದಳು. ಎರಡನೆಯ ಜೇಮ್ಸ್‍ನ ಕ್ಯಾತೊಲಿಕ್ ಪರ ನೀತಿಯಿಂದಾಗಿ ವಿಲಿಯಮ್ ಹಾಗೂ ಜೇಮ್ಸ್ ನಡುವೆ ಕದನವಾಯಿತು. ಮೇರಿ ತನ್ನ ಪತಿಯ ಪರವಹಿಸಿ 1688 ನವೆಂಬರಿನಲ್ಲಿ ದೇಶ ಬಿಟ್ಟು ಓಡಿಹೋದ. ಅನಂತರ ಮೇರಿಯೇ ಸರ್ವಾಧಿಕಾರಿಯಾದಳು. 11 ಏಪ್ರಿಲ್ 1689 ರಂದು ವಿಲಿಯಮ್ ಐರ್ಲೆಂಡಿನ ಮತ್ತು ಇಬ್ಬರಿಗೂ ಪಟ್ಟಾಭಿಷೇಕವಾಯಿತು. ವಿಲಿಯಮ್ ಐರ್ಲೆಂಡಿನ ಮತ್ತು ಇತರೆಡೆಯ ಸೈನ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾಗ ಪತಿಯ ಸಂಪೂರ್ಣ ಸಲಹೆಯ ಮೇರೆಗೆ ಮೇರಿ ತನ್ನ ಹೆಸರಿನಲ್ಲಿ ಆಡಳಿತ ನಡೆಸುತ್ತಿದಳು. ವಿಲಿಯಮ್ ಇಂಗ್ಲೆಂಡಿನಲ್ಲಿದ್ದಾಗಲೇ ಮೇರಿ ರಾಜಕೀಯದಿಂದ ನಿವೃತ್ತಳಾದಳು.

28 ಡಿಸೆಂಬರ್ 1694 ರಲ್ಲಿ ಸಿಡುಬಿನಿಂದಾಗಿ ಈಕೆ ತನ್ನ 32ನೆಯ ವಯಸ್ಸಿನಲ್ಲಿ ಅಕಾಲ ಮರಣಕ್ಕೆ ತುತ್ತಾದಳು. ಮೇರಿ, ಆಂಟ್ವನೆಟ್ : 1755-93. ಫ್ರಾನ್ಸಿನ ರಾಣಿ. ರೋಮ್ ಚಕ್ರವರ್ತಿ ಒಂದನೆಯ ಫ್ರಾನ್ಸಿಸ್ ಈಕೆಯ ತಂದೆ, ತಾಯಿ ಮಾರಿಯ ತೆರೆಸಾ. ಆಸ್ಟ್ರಿಯ, ಹಂಗೇರಿ ಮತ್ತು ಬೊಹಿಮಿಯಾದಲ್ಲಿ ರಾಜ್ಯವಾಳಿದಳು. 15ನೆಯ ವಯಸ್ಸಿನಲ್ಲಿ ಈಕೆಗೆ ಹದಿನಾರನೆಯ ಲೂಯಿಯೊಡನೆ ವಿವಾಹವಾಯಿತು. ಫ್ರೆಂಚರೊಂದಿಗೆ ಅಸ್ವಾಭಾವಿಕವಾಗಿ ನಡೆದುಕೊಂಡ ಕಾರಣದಿಂದಲೂ ಆಸ್ಟ್ರಿಯನ್ನಳು ಎಂಬ ಕಾರಣಂದಿಂದಲೂ ದುಂದುಗಾರಿಕೆ ಮಾಡುತ್ತಿದ್ದುದರಿಂದಲೂ ಮೇಡಂ ಡಿಫಿಸೆಟ್ ಎಂದು ಇವಳನ್ನು ಕರೆಯಲಾಗುತ್ತಿತ್ತು. ದೊರೆ ಬಹಳ ಅಶಕ್ತನಾದ ಕಾರಣ ಆಡಳಿತದಲ್ಲೂ ಅವನ ಮೇಲೆ ರಾಣಿಯ ಪ್ರಭಾವ ಹೆಚ್ಚಾಗಿತ್ತು. ಕೆಲವುವೇಳೆ ಅವಿವೇಕತನದಿಂದ ವರ್ತಿಸುತ್ತಿದ್ದಳು. ಜನಸಾಮಾನ್ಯರ ಸ್ಥಿತಿಗತಿಯ ಬಗ್ಗೆ ಅe್ಞÁನಿಯಾಗಿದ್ದಳು. ಇವಳ ಆಸ್ಟ್ರಿಯನ್ ಮೂಲ ಮತ್ತು ದುಂದುಗಾರಿಕೆಯ ಕಾರಣವಾಗಿ ಜನ ಇವಳನ್ನು ವಿರೋಧಿಸುತ್ತಿದ್ದರು.

1789 ರಲ್ಲಿ ಪ್ಯಾರಿಸ್ಸಿನಲ್ಲಿ ಕ್ರಾಂತಿ ಪ್ರಾರಂಭವಾದಾಗ ಜನಸಾಮಾನ್ಯರು ಬಾಸ್ಟಿಲ್ ಕಡೆಗೆ ಧಾವಿಸಿದರು. ಆಗ ದೊರೆ ಮತ್ತು ರಾಣಿ ಇಬ್ಬರೂ ಪ್ಯಾರಿಸ್ಸಿಗೆ ನೈಋತ್ಯ ದಿಕ್ಕಿನಲ್ಲಿರುವ ವರ್ಸೇಲ್ಸ್ ಅರಮನೆಯಲ್ಲಿದ್ದರು. ಆ ಜನಸಮೂಹ ವರ್ಸೇಲ್ಸ್‍ಗೆ ಹೋಗಿ ಅವರನ್ನು ಪ್ಯಾರಿಸ್‍ಗೆ ಬರುವಂತೆ ಒತ್ತಾಯಿಸಿತು. 1791 ಜೂನ್‍ನಲ್ಲಿ ರಾಜಮನೆತನ ಗುಪ್ತವಾಗಿ ಪ್ಯಾರಿಸ್ಸಿನಿಂದ ತಪ್ಪಿಸಿಕೊಂಡು ಫ್ರಾನ್ಸಿನ ಮೂಡಲ ಸರಹದ್ದಿಗೆ ಹೋಯಿತು. ಒಂದು ಹಳ್ಳಿಯನ್ನು ಸಮೀಪಿಸುತ್ತಿದ್ದಾಗ ಅಂಚೆಯವನೊಬ್ಬ ಅವರನ್ನು ಗುರುತಿಸಿದ. ಆಗ ಕಾವಲುಗಾರರು ಅವರ ರಥವನ್ನು ತಡೆದು ಮತ್ತೆ ಅವರನ್ನು ಕೈದಿಗಳ ರೂಪದಲ್ಲಿ ಪ್ಯಾರಿಸ್ಸಿಗೆ ಹಿಂತಿರುಗುವಂತೆ ಮಾಡಿದರು. ಏನಾಗುತ್ತಿದೆ ಎಂಬ ಬಗ್ಗೆ ದೊರೆಯೋಚಿಸಲಿಲ್ಲ. ಆದರೆ ರಾಣಿ ಅವನ ಸಿಂಹಾಸನವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಳು. ರಾಣಿಯನ್ನು ಭೇಟಿ ಮಾಡಿ ಸಹಾಯ ಮಾಡಲು ಬಂದ ಯುರೋಪಿನ ದೊರೆಗಳು- ಅವರಲ್ಲಿ ವಿಶೇಷವಾಗಿ ರಾಣಿಯ ತಮ್ಮ ಆಸ್ಟ್ರಿಯದ ಎರಡನೆಯ ಲಿಯೊಫೋಲ್ಡ್ - ಬಂದಾಗ, ಜನ ರಾಜಮನೆತ ಪ್ಯಾರಿಸ್ಸಿನಲ್ಲಿ ವಾಸವಾಗಿದ್ದ ಟ್ಯುಲೇರಿಸ್ ಅರಮನೆಗೆ ದಾಳಿಮಾಡಿ ಅವರನ್ನು ದೇವಾಲಯದಂತ ಒಂದು ಸಣ್ಣ ಕಟ್ಟಡದಲ್ಲಿ ಬಂಧಿಸಿದರು. ಅವರ ಅಂತ್ಯ ಸಮೀಪಿಸಿತ್ತು. ದೊರೆಗೆ 1793 ಜನವರಿಯಲ್ಲಿ ಮರಣದಂಡನೆ ವಿಧಿಸಿದರು. ದೇಶದ್ರೋಹ ಮತ್ತು ಜನರಲ್ಲಿ ಪರಸ್ಪರ ಯುದ್ಧಕ್ಕೆ ಪ್ರಚೋದಿಸಿದ ಕಾರಣಕ್ಕಾಗಿ ರಾಣಿಯನ್ನು ಅಪರಾಧಿಯನ್ನಾಗಿಸಿ ಅಕ್ಟೋಬರ್ 16ರಂದು ಮರಣದಂಡನೆ ವಿಧಿಸಲಾಯಿತು. ಮೇರಿ, ಲೂಸಿ: 1791-1847. ನೆಪೋಲಿಯನ್ ಬೋನಾಪಾರ್ಟೆಯ ಎರಡನೆಯ ಹೆಂಡತಿ, ಫ್ರಾನ್ಸಿನ ರಾಣಿ; ಹಾಗೂ ಪರ್ಮಾದ ಡಚೆಸ್. 12 ಡಿಸೆಂಬರ್ 1791 ರಲ್ಲಿ ವಿಯೆನ್ನದಲ್ಲಿ ಹುಟ್ಟಿದಳು. ತಂದೆ ರೋಮ್ ಚಕ್ರವರ್ತಿ ಒಂದನೆಯ ಫ್ರಾನ್ಸಿಸ್, ತಾಯಿ ಮಾರಿಯಾ ತೆರೆಸಾ. ನೆಪೋಲಿಯನ್‍ನ ಮೊದಲ ಹೆಂಡತಿ ಜೋಸೆಫಿನ್‍ಳಿಗೆ ಮಕ್ಕಳಿಲ್ಲದ ಕಾರಣ, ಅವನು ಮೇರಿಯನ್ನು 1610 ಫೆಬ್ರವರಿಯಲ್ಲಿ ಮದುವೆಯಾದ. 20 ಮಾರ್ಚ್ 1811 ರಲ್ಲಿ ಇವಳಿಗೆ ಒಬ್ಬ ಮಗ ಹುಟ್ಟಿದ. ಇವನೇ ಮುಂದೆ ಎರಡೆಯ ನೆಪೋಲಿಯನ್ ಆದ.

ನೆಪೋಲಿಯನ್ ರಷ್ಯವನ್ನು ಮುತ್ತಿದಾಗ ಮೇರಿ ಪ್ಯಾರಿಸ್ಸಿನಲ್ಲಿ ಆತನ ಪ್ರತಿನಿಧಿಯಾಗಿದ್ದಳು. ತನ್ನನ್ನು ಗಡೀಪಾರು ಮಾಡಿದಾಗಲೂ ನೆಪೋಲಿನ್ ಇವಳನ್ನು ತನ್ನೊಡನೆ ಕರೆದೊಯ್ಯಲು ಒಪ್ಪಲಿಲ್ಲ. ಇವಳನ್ನು ನೆಪೋಲಿಯನ್ ತ್ಯಜಿಸಿದಾಗ ತನ್ನ ಮಗನೊಡನೆ ಮೇರಿ ವಿಯೆನ್ನಾಕ್ಕೆ ಹಿಂತಿರುಗಿದಳು. ಫಾನ್‍ಟೇನ್ ಬ್ಲೂ ಒಪ್ಪಂದದಂತೆ (1814) ಪರ್ಮಾ, ಪಿಯಾಸೆನ್ಜಾ ಮತ್ತು ಗ್ವಸ್ಟಲ್ಲಾಗಳು ಇವಳ ಅಧಿಪತ್ಯಕ್ಕೆ ಸೇರಿದುವು (1816). ಈ ಪ್ರದೇಶದಲ್ಲಿ ಅತ್ಯಂತ ಸಮರ್ಥವಾಗಿ ಆಳ್ವಿಕೆ ನಡೆಸಿದಳು. 17 ಡಿಸೆಂಬರ್ 1847 ರಂದು ಇಟಲಿಯ ಪರ್ಮಾದಲ್ಲಿ ಮೇರಿ ನಿಧನಳಾದಳು.

ಮೇರಿ, ಟೆಕ್ : 1867-1953. ಇಂಗ್ಲೆಂಡಿನ ರಾಣಿ. ಬ್ರಿಟನ್ನಿನ ರಾಜ ಐದನೆಯ ಜಾರ್ಜ್‍ನ ಮಡದಿ. ಎಂಟನೆಯ ಎಡ್ವರ್ಡ್ (ಅನಂತರ ಮಿಡ್ಸರ್‍ನ ಡ್ಯೂಕ್ ಆದ. ಮತ್ತು ಆರನೆಯ ಜಾರ್ಜ್‍ರ ತಾಯಿ. ಈಕೆ 26 ಮೇ 1867 ರಲ್ಲಿ ಲಂಡನ್ನಿನಲ್ಲಿ ಜನಿಸಿದಳು. ಈಕೆಯ ಪೂರ್ಣ ಹೆಸರು ವಿಕ್ಟೋರಿಯ ಮೇರಿ ಆಗಸ್ಟ್ ಲೂಯಿಜ್ ಆಲ್ಗ ಪಾಲೈನ್ ಕ್ಲಾಡೀನ್ ಆ್ಯಗ್ನಿಸ್. 1891ರಲ್ಲಿ ಕ್ಲಾರೆನ್ಸಿನ ಡ್ಯೂಕ್ ಆಲ್ಬರ್ಟ್ ವಿಕ್ಟರ್‍ನೊಂದಿಗೆ ಈಕೆಯ ಮದುವೆಯ ನಿಶ್ಚಿತಾರ್ಥವಾಯಿತು. ಆದರೆ ಆತನ ಮರಣದಿಂದ ಈ ಮದುವೆ ನಡೆಯಲಿಲ್ಲ. ಅವನ ತಮ್ಮ ಯಾರ್ಕ್‍ನ ಡ್ಯೂಕ್ ಜಾರ್ಜ್‍ನೊಡನೆ (1901-10ರ ತನಕ ವೇಲ್ಸ್‍ನ ರಾಜಕುಮಾರನಾಗಿದ್ದ) 6 ಜುಲೈ 1892ರಲ್ಲಿ ಮೇರಿಯ ಮದುವೆಯಾಯಿತು.

ಈಕೆಗೆ ಒಳ್ಳೆಯ ವಿದ್ವತ್ತು, ಸೌಜನ್ಯ ಹಾಗೂ ಕಲಾಭಿರುಚಿಗಳು ಇದ್ದುದರಿಂದ ಒಬ್ಬ ಸಾರ್ವಭೌಮನ ಹೆಂಡತಿಯಾಗಿ ಪ್ರಜೆಗಳ ಮೇಲೆ ಅಪಾರ ಪ್ರಭಾವ ಬೀರಿದಳು. ಒಂದನೆಯ ಮತ್ತು ಎರಡನೆಯ ಮಹಾಯುದ್ಧದ ಸಮಯದಲ್ಲಿ ಜನಹಿತ ಕಾರ್ಯಗಳನ್ನು ಮಾಡಿದ್ದರಿಂದ ಈಕೆ ಜನಮನದಲ್ಲಿ ಅಚ್ಚಳಿಯದೆ ಉಳಿದಿದ್ದಾಳೆ. ಈಕೆ 24 ಮಾರ್ಚ್ 1953 ರಂದು ನಿಧನ ಹೊಂದಿದಳು. (ಎಸ್.ಎ.ಎನ್.)