ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಡಿ, ಫ್ರೆಡರಿಕ್

ಸಾಡಿ, ಫ್ರೆಡರಿಕ್

	1877-1965. ಇಂಗ್ಲಿಷ್ ರಸಾಯನವಿe್ಞÁನಿ, ಸಂಶೋಧನ ಕ್ಷೇತ್ರ ಸಮಸ್ಥಾನಿಗಳು. ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ 1898ರಲ್ಲಿ ಸ್ನಾತಕನಾಗಿ ಮರುವರ್ಷ ಕೆನಡಕ್ಕೆ ತೆರಳಿದ. ಅಲ್ಲಿ ಮ್ಯಾಗಿಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದ ಅರ್ನೆಸ್ಟ್ ರುದರ್‍ಫರ್ಡ್ (1871-1937) ಎಂಬ ಭೌತವಿe್ಞÁನಿಯ ಆಶ್ರಯದಲ್ಲಿ ಸಂಶೋಧನೆ ಮಾಡುವ ಅವಕಾಶ ಸಿಕ್ಕಿತು. ಇಬ್ಬರೂ ಕೂಡಿ ವಿಕಿರಣಪಟು ಧಾತುಗಳ ವಿದಳನ ವಿಧಾನವನ್ನು ಶೋಧಿಸಿದರು. ಯುರೇನಿಯಮ್, ತೋರಿಯಮ್ ಮತ್ತು ಆಕ್ಟೀನಿಯಮ್ ಇಂಥ ಧಾತುಗಳು. ಇವು ಕ್ಷಯಿಸಿದಾಗ ಉಪಪರಮಾಣವಿಕ (ಸಬ್‍ಅಟಾಮಿಕ್) ಆಲ್ಫಾ ಮತ್ತು ಬೀಟಾ ಕಣಗಳು ಹೊರಬೀಳುವುದರಿಂದ ಹೊಸ ಧಾತುಗಳು ಹುಟ್ಟುತ್ತವೆ. ವಿಕಿರಣಪಟು ಧಾತುವಿನ ಬೀಜದಿಂದ ಆಲ್ಫಾಕಣ (ವಾಸ್ತವವಾಗಿ ಎರಡು ಪ್ರೋಟಾನ್ ಮತ್ತು ಎರಡು ನ್ಯೂಟ್ರಾನ್ ಇರುವ ಹೀಲಿಯಮ್‍ನ ಪರಮಾಣು ಬೀಜವಿದು) ಹೊರಬಿದ್ದರೆ ಮೂಲಧಾತುವಿನ ಪರಮಾಣುತೂಕ 4 ಮಾನ ಇಳಿದು ಜನ್ಯಧಾತು ಆವರ್ತಕೋಷ್ಟದಲ್ಲಿ ಜನಕಧಾತುವಿಗಿಂತ 2 ಸ್ಥಾನ ಹಿಂದಕ್ಕೆ ಸರಿಯುತ್ತದೆ. ಅದೇ ಬೀಟಾ ಕಣದ ನಷ್ಟದಿಂದ (ಎಲೆಕ್ಟ್ರಾನ್ ಸಮಾನ) ಪರಮಾಣು ತೂಕದ ಬದಲಾವಣೆ ಅಗಣ್ಯ. ಪರಮಾಣು ಸಂಖ್ಯೆ ಮಾತ್ರ 1 ಮಾನ ಹೆಚ್ಚಿ ಜನ್ಯಧಾತುವಿಗೆ ಆವರ್ತಕೋಷ್ಟಕದಲ್ಲಿ ಜನಕಧಾತುವಿನ ಮುಂದಿನ ಸ್ಥಾನ ಪ್ರಾಪ್ತವಾಗುವುದು. ಈ ವಿದ್ಯಮಾನ “ಗುಂಪು ಪಲ್ಲಟನ ನಿಯಮ” ಎಂದು ಪ್ರಸಿದ್ಧವಾಗಿದೆ. ಹೀಗೆ ಕ್ಷಯಿಸುತ್ತ ಹೋಗಿ ಅಂತಿಮವಾಗಿ ಸೀಸವಾಗಿಬಿಡುತ್ತದೆ. ಇಂಥ ಮೂರು ನೈಸರ್ಗಿಕ ಶ್ರೇಣಿಗಳಿವೆ: ಯುರೇನಿಯಮ್ (238), ಆ್ಯಕ್ಟೀನಿಯಮ್(227) ಮತ್ತು ತೋರಿಯಮ್(232). ಆವರಣದಲ್ಲಿ ರುವುದು ರಾಶಿಸಂಖ್ಯೆ, ಕ್ರಮವಾಗಿ 8, 5 ಮತ್ತು 6 ಆಲ್ಫಾಕಣಗಳ ನಷ್ಟದಿಂದ. ಅಂತಿಮವಾಗಿ 206, 207 ಮತ್ತು 208 ರಾಶಿಸಂಖ್ಯೆಗಳುಳ್ಳ ಸೀಸವನ್ನು ಕೊಡುತ್ತವೆ. ಇವೆಲ್ಲ ರಾಸಾಯನಿಕವಾಗಿ ಒಂದೇ ತೂಕ ಮಾತ್ರ ವ್ಯತ್ಯಾಸ. ಆದ್ದರಿಂದ ಇವುಗಳಿಗೆಲ್ಲ ಆವರ್ತಕೋಷ್ಟಕದಲ್ಲಿ ಸೀಸಕ್ಕೆ ಮೀಸಲಾಗಿರುವ ಸ್ಥಾನ ಮಾತ್ರ ಲಭ್ಯ. ಒಂದೇ ಸ್ಥಾನಕ್ಕೆ ಅರ್ಹ. ಆದ್ದರಿಂದ ಇವನ್ನು ಸಮಸ್ಥಾನಿಗಳು (ಐಸೊಟೋಪ್‍ಗಳು) ಎಂದು ಕರೆಯಲಾಯಿತು. ಸಾಮಾನ್ಯ ಸೀಸದಲ್ಲಿ ಈ ಮೂರು ಬಗೆಯ ಪರಮಾಣುಗಳು ನಿಶ್ಚಿತ ಸಂಖ್ಯಾಪ್ರಮಾಣದಲ್ಲಿರು ವುದರಿಂದ ಸೀಸದ ಪರಮಾಣುತೂಕ ಸರಾಸರಿ 207.22 ಎಂದಾಗಿದೆ. ಧಾತುಗಳ ಪರಮಾಣುತೂಕಗಳು ಭಿನ್ನಾಂಕಗಳಾ ಗಲು ಸಮಸ್ಥಾನಿಗಳ ಅಸ್ತಿತ್ವ ಕಾರಣ ಎಂದು ಸಾಡಿ (1877-1965) ಮತ್ತು ರುದರ್‍ಫರ್ಡ್ ತರ್ಕಿಸಿದರು. ಜೆ.ಜೆ.ತಾಮ್ಸನ್ (1850-1940) ಮತ್ತು ಆಸ್ಟನ್ (1877-1955) ಇವರ ಸಂಶೋಧನೆಗಳ ಫಲವಾಗಿ ವಿಕಿರಣಪಟುವಲ್ಲದ ಇತರ ಧಾತುಗಳಿಗೂ ಸಮಸ್ಥಾನಿಗಳಿವೆಯೆಂಬುದು ದೃಢಪಟ್ಟಿತು. ಸಮಸ್ಥಾನಿಗಳ ಶೋಧಕ್ಕಾಗಿ 1921ರಲ್ಲಿ ಸಾಡಿಗೆ ನೊಬೆಲ್ ಪಾರಿತೋಷಿಕ ನೀಡಲಾಯಿತು. ತನ್ನ ಬಾಳಸಂಗಾತಿಯ ಅಕಾಲ ಮರಣ ದಿಂದ ನೊಂದ ಸಾಡಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಿಂದ 1936ರಲ್ಲಿ ಸ್ವಯಂನಿವೃತ್ತಿ ಹೊಂದಿದ. ಈತನಿಗೆ ವ್ಯವಹಾರe್ಞÁನ ಕಡಿಮೆ. ಅನುಸರಿಸಿಕೊಂಡು ಹೋಗುವ ಮನೋಧರ್ಮವಿರಲಿಲ್ಲ. ಖಂಡಿತವಾದಿ. ವಿಶ್ವವಿದ್ಯಾಲಯದ ಆಡಳಿತ ವರ್ಗದೊಡನೆ ಮಧುರ ಬಾಂಧವ್ಯವಿರಲಿಲ್ಲ. ಆದ್ದರಿಂದ ಸ್ವಯಂನಿವೃತ್ತಿ ಹೊಂದಿರದಿದ್ದರೂ ವಿಶ್ವವಿದ್ಯಾಲಯವೇ ಅವನನ್ನು ಬಿಡುಗಡೆ ಮಾಡುತ್ತಿತ್ತು ಎಂದು ಅಣಕವಾಡುತ್ತಿದ್ದವರುಂಟು.		

(ಎಚ್.ಜಿ.ಎಸ್.)