ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಂಕ್ರೊಟ್ರಾನ್ ವಿಕಿರಣ

ಸಿಂಕ್ರೊಟ್ರಾನ್ ವಿಕಿರಣ

ಸಾಪೇಕ್ಷತಾತ್ಮಕ ಶಕ್ತಿಗಳಲ್ಲಿ ವರ್ತುಳೀಯ ಚಲನೆಯಲ್ಲಿರುವ ಆವಿಷ್ಟಕಣಗಳು ಉತ್ಸರ್ಜಿಸುವ ವಿದ್ಯುತ್ಕಾಂತ ವಿಕಿರಣ (ಸಿಂಕ್ರೊಟ್ರಾನ್ ರೇಡಿಯೇಶನ್). ಎಲೆಕ್ಟ್ರಾನ್‍ಗಳಿಂದ ಉತ್ಸರ್ಜಿತವಾಗಿ ಖಗೋಳೀಯ ಕಾಂತಕ್ಷೇತ್ರಗಳಿಂದ ಮಾರ್ಗದರ್ಶಿತವಾಗುವ ಇಂಥ ಬೆಳಕು ಖಗೋಳವಿಜ್ಞಾನಿಗಳಿಗೆ ಬಲು ಹಿಂದಿನಿಂದಲೂ ತಿಳಿದಿದೆ. ಉದಾಹರಣೆಗೆ ಏಡಿ ನೀಹಾರಿಕೆಯ (ಕ್ರ್ಯಾಬ್ ನೆಬ್ಯುಲ) ಹಿನ್ನೆಲೆಯಲ್ಲಿ ಪಸರಿಸಿರುವ ಸುಂದರ ಪ್ರಭೆ. ಉಚ್ಚಶಕ್ತಿ-ಭೌತವಿಜ್ಞಾನದಲ್ಲಿ ಸಂಶೋಧನೆಯ ಸಲುವಾಗಿ ಉಚ್ಚಶಕ್ತಿ-ಎಲೆಕ್ಟ್ರಾನ್-ಸಿಂಕ್ರೊಟ್ರಾನುಗಳ ಮತ್ತು ದಾಸ್ತಾನು ವಲಯಗಳ ನಿರ್ಮಾಣವಾದ ಬಳಿಕ, ಹಲವಾರು ದೇಶಗಳಲ್ಲಿ ರೋಹಿತದ ಅತಿನೇರಿಳೆ ಮತ್ತು ಎಕ್ಸ್‍ಕಿರಣ ಭಾಗಗಳಲ್ಲಿಯ ಅತಿ ಪ್ರಬಲ ಆಕರಗಳು ಲಭ್ಯವಾದುವು. *