ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಂಡಿಕೇಟ್ ಬ್ಯಾಂಕ್

ಸಿಂಡಿಕೇಟ್ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯು ವಾಣಿಜ್ಯವ್ಯಹಾರಗಳಿಗೆ ಮೊದಲಿನಿಂದಲೂ ಪ್ರಸಿದ್ಧಿಯಾಗಿದೆ. ಈ ಜಿಲ್ಲೆಯಲ್ಲಿ ಅನೇಕ ಬ್ಯಾಂಕುಗಲು ಜನ್ಮತಾಳಿವೆ. ಅವುಗಳಲ್ಲಿ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೊರೇಷò ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ ಪ್ರಮುಖವಾದವು.

ಬ್ಯಾಂಕಿನ ಇತಿಹಾಸ: ಈ ವಾಣಿಜ್ಯ ಬ್ಯಾಂಕ್ ಕ್ರಿ.ಶ. 1925 ರಲ್ಲಿ ಉಡುಪಿ ಜಿಲ್ಲೆಯ ಉಡುಪಿಯಲ್ಲಿ(ಅಂದು ಉಡುಪಿಯು ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ ಪಟ್ಟಣವಾಗಿತ್ತು) ಪ್ರಾರಂಭವಾಯಿತು. ಮೊದಲಿಗೆ ಇದರ ಹೆಸರು `ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಎಂಬುದು. ದಿನಾಂಕ 20.10.1925ರಂದು ಈ ಸಂಸ್ಥೆಯನ್ನು ನೋಂದಾಯಿಸಲಾಯಿತು. 1964ನೇ ಇಸವಿಯಲ್ಲಿ ಈ ಸಂಸ್ಥೆಗೆ 'ಸಿಂಡಿಕೇಟ್ ಬ್ಯಾಂಕ್ ಎಂದು ಮರುನಾಮಕರಣ ಮಾಡಲಾಯಿತು. 1949ನೇ ಇಸವಿಯಲ್ಲಿ ಈ ಸಂಸ್ಥೆಯ ಆಡಳಿತ ಹಾಗೂ ಮುಖ್ಯ ಕಛೇರಿಯನ್ನು ಉಡುಪಿಯಿಂದ ಮಣಿಪಾಲದ "ಮುಕುಂದ ನಿವಾಸ" ಎಂಬ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಉಡುಪಿ ಮತ್ತು ಸುತ್ತಮುತ್ತಲಿನ ನೇಕಾರರು ಬಹಳ ಕಷ್ಟಗಳನ್ನು ಅನುಭವಿಸುತ್ತಿದ್ದರು. ಅದನ್ನು ಮನಗಂಡ ಅಲ್ಲಿನ ಒಬ್ಬರು ಉದ್ಯಮಿ ಈ ನೇಕಾರರಿಗೆ ತಮ್ಮ ಸಹಾಯ ಹಸ್ತವನ್ನು ಚಾಚಿ ಅವರ ಕಷ್ಟಗಳನ್ನು ದೂರಮಾಡಬೇಕೆಂದು ಪಣತೊಟ್ಟರು. ಅದರ ಫಲವೇ `ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಸಂಸ್ಥೆಯ ಉದಯ. ಇದೆ ಮೊದಲ ಸಂಸ್ಥಾಪಕ ಮಂಡಳಿಯ ಸದಸ್ಯರೆಂದರೆ ಉದ್ಯಮಿ ಶ್ರೀಯುತ ಉಪೇಂದ್ರ ಅನಂತ ಪೈ, ಇಂಜಿನಿಯರ್ ವಿ. ಎಸ್. ಕುಡುವಾ ಮತ್ತು ವೈದ್ಯ ಡಾ. ಟಿ. ಎಮ್. ಎ. ಪೈ ಅವರುಗಳು. ಈ ಸಂಸ್ಥೆಯ ಮೊದಲ ಅಧ್ಯಕ್ಷರು ಶ್ರೀಯುತ ಉಪೇಂದ್ರ ಅನಂತ ಪೈಗಳು. ಇವರಿಗೆ ಅಲ್ಲಿನ ಸ್ಥಳಿಯ ಕೈಮಗ್ಗದಾರರ ಕಷ್ಟಸುಖಗಳು ಚೆನ್ನಾಗಿ ಗೊತ್ತಿತ್ತು. ಕೈಮಗ್ಗದ ಉದ್ಯಮವು ಕುಸಿದು ನೇಕಾರರ ಕಷ್ಟಗಳು ಉತ್ತುಂಗಕ್ಕೆ ಏರಿದಾಗ ಈ ಸಂಸ್ಥೆಯು ಅವರನ್ನು ಎತ್ತಿ ಹಿಡಿಯಲು ಸ್ಥಾಪಿತವಾಯಿತೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ದಿನಾಂಕ 10 .11. 1925 ರಂದು ಕೇವಲ ಒಬ್ಬ ಸಿಬ್ಬಂದಿಯೊಡನೆ ಸಂಸ್ಥೆಯ ವ್ಯವಹಾರವು ಪ್ರಾರಂಭ ವಾಯಿತು. ಶ್ರೀಯುತ ಪಿ. ಎ. ಪೈ ಸಹೋದರರನ್ನು 20 ವರ್ಷಗಳ ಕಾಲ ಈ ಸಂಸ್ತೆಗೆ ಮಾರ್ಗದರ್ಶನ ನೀಡಲು ನೇಮಿಸಲಾಗಿತ್ತು. ಈ ಸಂಸ್ಥೆಯ ಅಧಿಕೃತ ಬಂಡವಾಳವು ಪ್ರಾರಂಭಕ್ಕೆ ಒಂದು ಲಕ್ಷ ರೂಪಾಯಿಗಳಾಗಿತ್ತು ಮತ್ತು ಪಾವತಿಯಾದ ಬಂಡವಾ¼ವು 8000 ರೂಪಾಯಿಗಳಷ್ಟು ಸಂಗ್ರಹವಾಗಿತ್ತು.. ಸಾರ್ವಜನಿಕರ ಬಂಡವಾಳ ವನ್ನು ಕೋರಿದಾಗ ಕೇವಲ 484 ಜನರು ಷೇರುಗಳಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು. ವಾಣಿಜ್ಯ ವ್ಯವಹಾರಗಳು ಸಾಮಾನ್ಯರನ್ನು ಹೆಚ್ಚು ತಲುಪಿರದ ಅಂದಿನ ದಿನಗಳಲ್ಲಿ ಈ ಬ್ಯಾಂಕ್ ಗ್ರಾಹಕರ ಮನೆಗಳಿಗೇ ತೆರಳಿ ಠೇವಣಿಯನ್ನು ಸಂಗ್ರಹಿಸುವ ಪರಿಪಾಠವನ್ನು ಬೆಳೆಸಿಕೊಂಡಿತ್ತು. ಇಡೀ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾದರಿ ಎನಿಸುವಂತೆ ಪಿಗ್ಮಿ ಠೇವಣಿಯನ್ನು 1928ರಲ್ಲಿಯೇ ಆರಂಭಿಸಿದ ಹೆಗ್ಗಳಿಕೆ ಈ ಬ್ಯಾಂಕಿನದು. ಈ ರೀತಿಯ ಠೇವಣಿಯನ್ನು ಬೇರೆ ಬೇರೆ ಹೆಸರಿನಲ್ಲಿ ಇತರ ಬ್ಯಾಂಕುಗಳೂ ತಮ್ಮಲ್ಲಿ ಅಳವಡಿಸಿ ಕೊಂಡವು. ಈ ಸಂಸ್ಥೆಯ ಮೊದಲ ಶಾಖೆಯು 1928 ರಲ್ಲಿ ಬ್ರಹ್ಮಾವರದಲ್ಲಿ ಪ್ರಾರಂಭವಾಯಿತು. ಅನಂತರ ಸುತ್ತಮುತ್ತಲಿನ ಜಿಲ್ಲಾಕೇಂದ್ರಗಳೂ ಹಾಗೂ ತಾಲೂಕು ಕೇಂದ್ರಗಳಲ್ಲಿ ಹಲವಾರು ಶಾಖೆಗಳನ್ನು ತೆರೆಯಲಾಯಿತು.

ಅಭಿವೃದ್ಧಿಯ ಘಟ್ಟ : ಈ ಸಂಸ್ಥೆಯು ತನ್ನ ಅನೇಕ ಇತರ ಚಟುವಟಿಕೆಗಳನ್ನು ಪ್ರಾರಂಭಿಸಿತು. 1935ರಲ್ಲಿ ಜಮೀನು ಮತ್ತು ಕಟ್ಟಡಗಳ ಬೆಲೆಗಳು ಕುಸಿಯಿತು. ಆಗ ಜನರಿಗೆ ಸಹಾಯ ಮಾಡಲು ಅಂದು ಸಂಸ್ಥಾಪಿಸಲ್ಪಟ್ಟ ಸಂಸ್ಥೆ `ಕೆನರಾ ಇನ್ವೆಸ್ಟ್‍ಮೆಂಟ್ಸ್ ಲಿಮಿಟೆಡ್. ಈ ಸಂಸ್ಥೆಗೆ ಅನೇಕ ರೀತಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಸಹಾಯ ಮಾಡಿತು. ನವೆಂಬರ್ 1935 ರಲ್ಲಿ `ಕೆನರಾ ಮ್ಯೂಚುಯಲ್ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇದರಲ್ಲಿಯೂ ಸಹ ಈ ಬ್ಯಾಂಕ್ ತನ್ನ ಸಕ್ರಿಯ ಪಾತ್ರವನ್ನು ವಹಿಸಿತು. 1936-1945ರ ದಶಕದಲ್ಲಿ ಈ ಸಂಸ್ಥೆಯಲ್ಲಿ ಹಲವಾರು ಪ್ರಮುಖ ಬದಲಾವಣೆಗಳು ಕಂಡುಬಂದವು. ಬ್ಯಾಂಕ್ ತನ್ನ ಮುಂಬಯಿ ಶಾಖೆಯನ್ನು ತೆರೆಯಿತು ಮತ್ತು ಮುಂಬಯಿ ತೀರುವೆ ಮನೆಯ ಸದಸ್ಯತ್ವವನ್ನು ತೆಗೆದುಕೊಂಡಿತು. ಈ ದಿಶೆಯಲ್ಲಿ ಬ್ಯಾಂಕಿಂಗ್ ವ್ಯವಹಾರವು ಶೀಘ್ರಗತಿಯಲ್ಲಿ ಬೆಳೆಯಿತು. ಭಾರತೀಯ ಕಂಪನಿ ಕಾಯಿದೆ 1936ರ ತಿದ್ದುಪಡಿಯ ನಂತರ ಈ ಸಂಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಯಿತು. 13 ವರ್ಷಗಳ ಕಾಲ ಈ ಬ್ಯಾಂಕಿಂಗ್ ಸಂಸ್ಥೆಯನ್ನು ಬೇಳೆಸಿದ ನಂತರ 1939ನೇ ಜನವರಿ 13ರಂದು ಶ್ರೀಯುತ ಪಿ ಎ ಪೈ ಸಹೋದರರುಗಳು ನಿವೃತ್ತರಾದರು. 1942 ರನಂತರ ಅಭಿವೃದ್ಧಿ ಒಂದೇ ದಿಕ್ಕಿನಲ್ಲಿ ಸಾಗುವುದನ್ನು ಗಮನಿಸಿದ ಸಂಸ್ಥಾಪಕ ಮಂಡಳಿ ತನ್ನ ಅಂಗಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಯಿತು. ಅದರ ಫಲವಾಗಿ ಉಡುಪಿಯಲ್ಲಿ 1942ರಲ್ಲಿ "ಸದರ್ನ್ ಇಂಡಿಯಾ ಅಪೆಕ್ಷ್ ಬ್ಯಾಂಕ್ ನಿಯಮಿತ" ಮತ್ತು 1943ರಲ್ಲಿ "ಮಹಾರಾಷ್ಟ್ರ ಅಪೆಕ್ಷ್ ಬ್ಯಾಂಕ್ ನಿಯಮಿತ" ಸ್ಥಾಪಿತವಾಯಿತು. 1943ನೆ ಜುಲೈ 11ನೇ ತಾರೀಖು ಶ್ರೀಯುತ ಟಿ .ಎ. ಪೈ ರವರು ಬ್ಯಾಂಕಿಗೆ ಸಹ ವ್ಯವಸ್ಥಾಪಕರಾಗಿ ಸೇರಿದರು. ಇವರ ಕಾಲದಲ್ಲಿ ಬ್ಯಾಂಕಿನ ಸರ್ವತೋಮುಖ ಬೆಳವಣಿಗೆಯು ಸಾಧ್ಯವಾಯಿತು. 1946 ರಿಂದ 1955ರ ಅವಧಿಯಲ್ಲಿ ಈ ಸಂಸ್ಥೆಯು ಗಮನಾರ್ಹ ಸಾಧನೆಯನ್ನು ಮತ್ತು ಬೆಳವಣಿಗೆಯನ್ನು ಕಂಡಿತು. ಒಂದೇ ದಿನದಲ್ಲಿ ಅಂದರೆ 1946ನೇ ಇಸವಿ ನವಂಬರ್ 22 ರಂದು 29 ಗ್ರಾಮೀಣ ಶಾಖೆಗಳನ್ನು ತೆರೆಯಲಾಯಿತು. 1953ರಲ್ಲಿ "ಸದರ್ನ್ ಇಂಡಿಯಾ ಅಪೆಕ್ಷ್ ಬ್ಯಾಂಕ್ ನಿಯಮಿತ" ಮತ್ತು 1943ರಲ್ಲಿ "ಮಹಾರಾಷ್ಟ್ರ ಅಪೆಕ್ಷ್ ಬ್ಯಾಂಕ್ ನಿಯಮಿತ" ಸಂಸ್ಥೆಗಳು ಸಿಂಡಿಕೇಟ್ ಬ್ಯಾಂಕಿನಲ್ಲಿ ವಿಲೀನಗೊಂಡವು. ಸಂಸ್ಥೆಯು ತನ್ನ ರಜತ ಮಹೋತ್ಸವವನ್ನು ಆಚರಿಸುವ ಹೊತ್ತಿಗೆ ದಕ್ಷಿಣಭಾರತದಲ್ಲಿ 70 ಶಾಖೆಗಳನ್ನು ಹೊಂದಿತ್ತು. 1962ರಲ್ಲಿ ಸಂಪೂರ್ಣ ಮಹಿಳಾ ಶಾಖೆಯನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ತೆರೆಯಲಾಯಿತು. ಮುಂಬಯಿ ನಗರದಲ್ಲಿ 1963ರಲ್ಲಿ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಶಾಖೆಯನ್ನು ತೆರೆಯಿತು.

1956-65ರ ದಶಕದಲ್ಲಿ ಈ ಸಂಸ್ಥೆಯು ಅನೇಕ ವಿಲೀನ ಪ್ರಕ್ರಿಯೆಗಳನ್ನು ಕಂಡಿತು. ಬ್ಯಾಂಕಿಂಗ್ ಕಂಪನಿ ಕಾಯ್ದೆಯ 45ನೇ ಅಧಿನಿಯಮದ ಪ್ರಕಾರ "ಕ್ಯಾಥೋಲಿಕ್ ಬ್ಯಾಂಕ್, ಪೈ ಮನಿ ಬ್ಯಾಂಕ್ ನಿಯಮಿತ, ಮೂಲ್ಕಿ ಬ್ಯಾಂಕ್ ನಿಯಮಿತ"ಗಳನ್ನು ಈ ಸಂಸ್ಥೆಯೊಂದಿಗೆ ವಿಲೀನಗೊಳಿಸಲಾಯಿತು. 1953-64ರ ಅವಧಿಯಲ್ಲಿ ಇತರ ಇಪ್ಪತ್ತು ಬ್ಯಾಂಕುಗಳು ಸಿಂಡಿಕೇಟ್ ಬ್ಯಾಂಕಿನಲ್ಲಿ ವಿಲೀನಗೊಂಡವು. ಈ ವಿಲೀನ ಪ್ರಕ್ರಿಯೆಯನ್ನು ಯಾವ ವ್ಯಾಜ್ಯಗಳು, ಕಾನೂನು ತೊಡಕು ಇಲ್ಲದಂತೆ ಬಹು ದಕ್ಷತೆಯಿಂದ ಕಾರ್ಯವನ್ನು ನಿರ್ವಹಿಸಲಾಯಿತು.

ಸಿಬ್ಬಂದಿಯನ್ನು ತರಬೇತಿಗೊಳಿಸಲು ಒಂದು ವ್ಯವಸ್ಥೆಯ ಅಗತ್ಯವನ್ನು ಪೂರೈಸಲು 1957ರಲ್ಲಿ "ಸಿಬ್ಬಂದಿ ತರಬೇತಿ ಮಹಾವಿದ್ಯಾಲಯ" ವನ್ನು ಸ್ಥಾಪಿಸಲಾಯಿತು. ಬಂಡವಾಳ ಹೂಡಿಕೆ ವಿಭಾಗವು 1960ರಲ್ಲಿ ಸ್ಥಾಪಿತವಾಯಿತು. ಕೃಷಿಕ್ಷೇತ್ರವನ್ನು ಅಭಿವೃದ್ಧಿಪಡಿಲು ಬ್ಯಾಂಕ್ ತನ್ನದೇ ಆದ `ಕೃಷಿವಿಭಾಗ" ವನ್ನು ತೆರೆಯಿತು

ರಾಷ್ಟ್ರೀಕರಣದ ನಂತರದ ಬೆಳವಣಿಗೆ : ಬ್ಯಾಂಕ್ 1966-1970ರ ಕಾಲದಲ್ಲಿ ಅನೇಕ ಪ್ರಮುಖ ಬೆಳವಣಿಗೆ ಯನ್ನು ಕಂಡಿತು. ಶ್ರೀಯುತ ಟಿ. ಎ.ಪೈಗಳು 1967ರಲ್ಲಿ ಸಂಸ್ಥೆಯ ಅಧ್ಯಕ್ಷರೂ ಹಾಗೂ ವ್ಯವಸ್ಥಾಫಕ ನಿರ್ದೇಶಕ ರಾದರು. . 1967ರಲ್ಲಿ ರೈತರ ನಡುವೆ ಪರಸ್ಪರ ಮಾಹಿತಿ ವಿನಿಮಯಕ್ಕಾಗಿ ಸಿಂಡಿಕೇಟ್ ಬ್ಯಾಂಕ್ ಕೃಷಿ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಸಮಾಜವಾದೀ ಅಲೆಯ ಕಾರಣ ಜುಲೈ 19, 1969 ಎಲ್ಲ ಪ್ರಮುಖ ಬ್ಯಾಂಕಿಂಗ್ ಸಂಸ್ಥೆಗಳನ್ನು ರಾಷ್ಟ್ರೀಕರಣ ಗೊಳಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ಸಹ ಈ ವೇಳೆಗೆ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದದ್ದರಿಂದ ಇದನ್ನೂ (ಇತರ 13 ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಗೊಳಿಸಿದಂತೆ) ರಾಷ್ಟ್ರೀಕರಣ ಗೊಳಿಸಲಾಯಿತು. ರಾಷ್ಟ್ರೀಕರಣದ ನಂತರ ಈ ಬ್ಯಾಂಕ್ ವೇಗವಾಗಿ ಬೆಳೆದು ತನ್ನ ಸರ್ವಾಂಗೀಣ ಬೆಳವಣಿಗೆಯನ್ನು ಸಾಧಿಸಿದೆ. ಜನವರಿ 19, 2005ರಿಂದ ಈ ಬ್ಯಾಂಕಿನ ಅಧ್ಯಕ್ಷರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಶ್ರೀಯುತ ಎನ್. ಕಾಂತಕುಮಾರ್ ರವರು.

ಸಿಂಡಿಕೇಟ್ ಬ್ಯಾಂಕ್ ಅನೇಕ ಪ್ರಥಮಗಳ ಕೀರ್ತಿಗೆ ಭಾಜನವಾಗಿದೆ.

1975ರಲ್ಲಿ ದೇಶದ ಪ್ರಥಮ ಗ್ರಾಮೀಣ ಬ್ಯಾಂಕ್ ಅನ್ನು ಉತ್ತರಪ್ರದೇಶದ ಮೊರಾದಾಬಾದ್‍ನಲ್ಲಿ ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಪ್ರಾರಂಭಿಸಲಾಯಿತು. 1982ರಲ್ಲಿ ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ರುಡ್‍ಸೆಟಿ (ಗ್ರಾಮೀಣಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ) ಸ್ಥಾಪನೆಯಾಯಿತು. 2000ದಲ್ಲಿ ಸಿಂಡಿಕೇಟ್ ಬ್ಯಾಂಕ್ ಪ್ಲಾಟಿನಂ ಜ್ಯುಬಿಲಿ ಆಚರಿಸಿತು. ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ U್ಫ್ರಮೀಣ ಅಭವೃದ್ಧಿ ಟ್ರಸ್ಟ್ ಎಂಬ ಸಂಸ್ಥೆಯನ್ನು ಐವತ್ತು ಲಕ್ಷ ರೂ. ಮೂಲಹಣದೊಂದಿಗೆ ಪ್ರಾರಂಭಿಸಲಾಯಿತು. ಈ ಸಂಸ್ಥೆಯ ಮೂಲಕ ಐದು ಗ್ರಾಮೀಣ ಉದ್ಯಮಶೀಲತಾ ಸಂಸ್ಥೆಗಳನ್ನು ಸ್ಥಾಪಿಸಲಾಯಿತು.

1995ರ ನಂತರ ಈ ಬ್ಯಾಂಕಿನ ಅನುತ್ಪಾದಕ ಆಸ್ತಿಗಳ ಗಾತ್ರವು ಕ್ರಮವಾಗಿ ಕುಗ್ಗುತ್ತಾ ಬಂದಿದೆ. ಮತ್ತು 1995-96ರಿಂದ ಈ ಬ್ಯಾಂಕ್‍ನ ಲಾಭಾಂಶವು ಉತ್ತಮಗೊಳ್ಳುತ್ತಿದೆ. ನಿವ್ವಳ ಲಾಭವು ಗಣನೀಯ ಪ್ರಮಾಣದಲ್ಲಿ ಏರಿದೆ. ಬ್ಯಾಂಕಿನಲ್ಲಿ ಮಹಿಳಾ ನೇಮಕಾತಿಗೆ ಆದ್ಯತೆ ನೀಡಲಾಯಿತು.ಇಂದು ಬ್ಯಾಂಕು ಬರಿಯ ಮಹಿಳೆಯರೇ ಇರುವ ಶಾಖೆಯನ್ನು ಪಡೆದಿದೆ.

ಸಿಂಡಿಕೇಟ್ ಬ್ಯಾಂಕ್ ಮಾಹಿತಿ ತಂತ್ರಜ್ಞಾನದ ಸಾಮಥ್ರ್ಯವನ್ನು ಮನವರಿಕೆ ಮಾಡಿಕೊಂಡ ಬ್ಯಾಂಕುಗಳಲ್ಲಿ ಪ್ರಥಮ ಸಾಲಿಗೆ ಸೇರುತ್ತದೆ. ಎಲ್ಲಾ ಶಾಖೆಗಳೂ ಇಂದು ಗಣಕೀಕೃತವಾಗಿದೆ. ಬೇರೆ ಬ್ಯಾಂಕುಗಳಲ್ಲಿ ಕೋರ್ ಬ್ಯಾಂಕಿಂಗ್ ಎಂಬ ಹೆಸರಿನಲ್ಲಿರುವ ವ್ಯವಸ್ಥೆಯನ್ನು ಸಿಂಡಿಕೇಟ್ -ಇ-ಬ್ಯಾಂಕಿಂಗ್ ಎಂಬ ಹೆಸರಿನಲ್ಲಿ ಅಳವಡಿಸಿಕೊಂಡಿದೆ. 209 ಶಾಖೆಗಳಲ್ಲಿ ವಾರದ ಏಳೂ ದಿನಗಳೂ ಸೇವೆ ಒದಗಿಸುತ್ತಿದೆ.

ಈ ಸಂಸ್ಥೆಗೆ ಸಂದ ಪುರಸ್ಕಾರಗಳು : ಈ ಬ್ಯಾಂಕ್ ತನ್ನ ಅನುಪಮ ಸೇವೆಗಾಗಿ ಅನೇಕ ಪ್ರಶಸ್ತಿ / ಪುರಸ್ಕಾರಗಳನ್ನು ಪಡೆದಿದೆ. ಅವುಗಳಲ್ಲಿ ಕೆಲವು ಪ್ರಶಸ್ತಿಗಳನ್ನು ಇಲ್ಲಿ ಸೂಚಿಸಿದೆ.

ವರ್ಷ ಸಂದ ಪುರಸ್ಕಾರ ಸಾಧನೆ

1976 ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಈ ಬಹುಮಾನವು ಮಹಾಮಂಡಳದಿಂದ ಬಹುಮಾನ ವ್ಯವಸ್ಥಾಪಕ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಸೌಹಾರ್ದ ಸಂಬಂಧಕ್ಕಾಗಿ .

                   ಭಾರತ ಸರ್ಕಾರದ ಪ್ರಶಸ್ತಿ 			ಉತ್ತಮ ರಫ್ಯೋದ್ಯಮ    
                                                           ಹಣಕಾಸು ನೆರವು
                                                           ನೀಡಿದ್ದಕ್ಕಾಗಿ.

1980 ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಅತ್ಯುತ್ತಮ ಗ್ರಾಮೀಣ ಮಹಾಮಂಡಳದಿಂದ ಬಹುಮಾನ ಅಭಿವೃದ್ಧಿ

                                                           ಕಾರ್ಯಕ್ರಮಗಳಿಗಾಗಿ
	

( ಸಿಂಡಿಕೇಟ್ ಬ್ಯಾಂಕಿನ ವಾರ್ಷಿಕ ವರದಿ 2004-2005) ಸಮಾರೋಪ : ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಗಳು ದಾಪುಗಾಲಿನಲ್ಲಿ ಸಾಗುತ್ತಿವೆ. ವಿದೇಶೀ ಬ್ಯಾಂಕುಗಳ ಜೊತೆಗೆ ಸ್ಥಳೀಯ ಬ್ಯಾಂಕುಗಳು ಪೈಪೋಟಿಯನ್ನು ಎದುರಿಸಬೇಕಾಗಿದೆ. ಈ ದಿಕ್ಕಿನಲ್ಲಿ ಸಿಂಡಿಕೇಟ್ ಬ್ಯಾಂಕ್ ಎಲ್ಲ ಕ್ಷೇತ್ರದಲ್ಲಿ ಸೂಕ್ತ ಮಾರ್ಪಾಟು / ಬದಲಾವಣೆಗಳನ್ನು ಈಗಾಗಲೇ ಮಾಡಿಕೊಳ್ಳುತ್ತಿದೆ. ಎ.ಟಿ.ಎಂ, ಕೋರ್ ಬ್ಯಾಂಕಿಂಗ್ ಮೊದಲಾದ ಅನುಕೂಲಗಳನ್ನು ತ್ವರಿತಗತಿಯಲ್ಲಿ ಅಳವಡಿಸಿ ತನ್ನ ಸೇವೆಯ ವಿಸ್ತರಿಸುತ್ತಿದೆ.ಇದು ಕರ್ನಾಟಕದ ಒಂದು ಉತ್ತಮ ಬ್ಯಾಂಕಿಂಗ್ ಸಂಸ್ಥೆಯಾಗಿ ಸೇವೆಯನ್ನು ಸಲ್ಲಿಸುತ್ತಿದೆ. ಇದರ ಶ್ರೇಯೋಭಿವೃದ್ಧಿಯನ್ನು ಈ ಕೆಳಕಂಡ ಅಂಕಿಅಂಶಗಳನ್ನು ಅವಲೋಕಿಸಿದರೆ ನಮಗೆ ಸ್ಪಷ್ಟವಾಗುತ್ತದೆ.

    2004-2005ರ ಬ್ಯಾಂಕಿನ ಪ್ರಮುಖ ಅಂಕಿ ಅಂಶಗಳು : 

(ರೂಪಾಯಿ ಸಾವಿರಗಳಲ್ಲಿ) ಕ್ರಮ ಸಂಖ್ಯೆ ವಿವರಗಳು 31. 3. 2004 31. 3. 2005

1 ಆದಾಯ 3861, 24, 69 4322, 17, 78

2 ಖರ್ಚು 3427, 11, 82 3919, 27, 67

3 ಲಾಭ 434, 12, 87 402, 90, 11


[ಸಿಂಡಿಕೇಟ್ ಬ್ಯಾಂಕಿನ ವಾರ್ಷಿಕ ವರದಿ 2004-2005]

(ಈ ಅಂಕಿಅಂಶಗಳು ದೇಶೀಯ ವ್ಯವಹಾರಗಳಿಗೆ ಸೀಮಿತವಾದದ್ದು)

                                                                    (ರೂಪಾಯಿ ಸಾವಿರದಲ್ಲಿ)

ಕ್ರಮ ಸಂಖ್ಯೆ


ವಿವರಗಳು

31. 03. 2004

31.03.2005

1 ಠೇವಣಿಗಳು 42584,81,62 46294,56,25

2 ಹೂಡಿಕೆಗಳು 17916,59,73 20370,73,32

3 ಸಾಲ ಮತ್ತು ಮುಂಗಡಗಳು 20646,91,87 26729,20,28

4 ಸ್ಥಿರ ಆಸ್ತಿಗಳು 363,68,74 381,27,00

5 ಇತರ ಆಸ್ತಿಗಳು 1718,47,63 1558,64,20


ಬ್ಯಾಂಕಿನ ಮುಖ್ಯಾಂಶಗಳು 2004-2005

ಕ್ರಮ ಸಂಖ್ಯೆ ವಿವರಗಳು ಅಂಕಿ ಅಂಶಗಳು

1 ವ್ಯಾಪಾರ/ ವಹಿವಾಟು (ದೇಶೀಯ ಮತ್ತು ವಿದೇಶೀಯ ಸೇರಿ) 74031 ಕೋಟಿ ರೂಪಾಯಿಗಳು

2 ಠೇವಣಿಗಳು) (ದೇಶೀಯ ಮತ್ತು ವಿದೇಶೀಯ ಸೇರಿ) 46295 ಕೋಟಿ ರೂಪಾಯಿಗಳು


3 ಸಾಲ ಮತ್ತು ಮುಂಗಡಗಳು (ದೇಶೀಯ ಮತ್ತು ವಿದೇಶೀಯ ಸೇರಿ) 27736 ಕೋಟಿ ರೂಪಾಯಿಗಳು


4 ನೆಟ್ ವರ್ತ್

2199 ಕೋಟಿ ರೂಪಾಯಿಗಳು

5 ನಿವ್ವಳ ಲಾಭ

403 ಕೋಟಿ ರೂಪಾಯಿಗಳು

6 ಪ್ರತಿ ಷೇರುಗಳ ಮೇಲೆ ಗಳಿಕೆ 8.54 ರೂಪಾಯಿಗಳು

7 ಶಾಖೆಗಳು / ಸೇವಾಸ್ಥಳಗಳು

2015


8 ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ 10.7%


9 ಗ್ರಾಹಕರ ಸಂಖ್ಯೆ 16 ದಶ ಲಕ್ಷ

10 ನಿವ್ವಳ ಅನುತ್ಪಾದಕ ಆಸ್ತಿಗಳ ಅನುಪಾತ 1.59 %


[ಆಕರ : ಬ್ಯಾಂಕಿನ 2004-2005ರ ವಾರ್ಷಿಕ ವರದಿ ಪು.5]